ವಿಶ್ವಕರ್ಮರ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿ

| Published : Sep 18 2024, 01:48 AM IST

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ಕರ್ಮ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವ ಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ವಿಶ್ವಕರ್ಮ ಸಮುದಾಯದ ಜನರು ಕಠಿಣ ಶ್ರಮ ಜೀವಿಗಳಾಗಿದ್ದು ಕಾಯಕವೇ ಕೈಲಾಸ ಎಂದು ನಂಬಿದವರು. ಅವರ ದುಡಿಮೆಗೆ ಹೆಚ್ಚಿನ ಪ್ರತಿಫಲ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ಕರ್ಮ ಜಯಂತಿ ಅಂಗವಾಗಿ ವಿಶ್ವ ಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೊಡ್ಡ-ದೊಡ್ಡ ಕಟ್ಟಡ, ದೇವಾಲಯ, ಬುನಾದಿ ಹಾಕುವ ತಮ್ಮ ನೈಪುಣ್ಯತೆ ಎಲ್ಲರಿಗೂ ಬರುವದಿಲ್ಲ. ಅದು ವಿಶೇಷ ಪ್ರತಿಭೆಯಾಗಿದೆ. ಇಂದಿನ ಯಾವುದೇ ಯಂತ್ರಗಳು ಬಂದರು ತಮ್ಮ ಇತಿಹಾಸದ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಶ್ವಕರ್ಮರ ಬೇಡಿಕೆಗಳಿಗೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ಸರ್ಕಾರ ಬಡವರು, ಹಿಂದುಳಿದವರು, ಶೋಷಿತ ತಳ ಸಮುದಾಯದವರ ಪರ ಇದೆ. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಪಾಂಚಾಳ, ಉಪಾಧ್ಯಕ್ಷ ಪಾಂಡುರಂಗ ಪಾಂಚಾಳ, ಕಾರ್ಯದರ್ಶಿ ಶಿವಾನಂದ ಸಿದ್ಧಾರೂಢ ಸೇರಿ ಹಲವರು ಉಪಸ್ಥಿರಿದ್ದರು.