ಸಕಲರಿಗೆ ಲೇಸನ್ನು ಬಯಸುವ ಮನಸ್ಸು ನಮ್ಮದಾಗಲಿ

| Published : Aug 31 2025, 02:00 AM IST

ಸಾರಾಂಶ

ಮನುಷ್ಯ ಪರೋಪಕಾರಿಯಾಗಿರಬೇಕು, ಧರ್ಮವು ಅವನಲ್ಲಿರಬೇಕು ಜಗವೆಲ್ಲ ನಗುತ್ತಿರಲಿ ಜಗದಳವು ನನಗಿರಲಿ ಎಂಬಂತೆ ಸಕಲರಿಗೆ ಲೇಸನ್ನು ಬಯಸುವ ಮನಸ್ಸು ನಮ್ಮದಾಗಿರಬೇಕು, ಪುರಾಣ ಪುಣ್ಯಕತೆಗಳು ಮನುಷ್ಯನಲ್ಲಿ ಧಾರ್ಮಿಕ ಭಾವನೆಯೊಂದಿಗೆ ವಿಚಾರ ಹಾಗೂ ವಿವೇಚನೆಯನ್ನುಂಟು ಮಾಡುತ್ತವೆ ಎಂದು ಅಣ್ಣಿಗೇರಿ ದಾಸೋಹಮಠದ ಡಾ. ಶಿವಕುಮಾರ ಸ್ವಾಮಿಗಳು ಹೇಳಿದರು.

ಗದಗ: ಮನುಷ್ಯ ಪರೋಪಕಾರಿಯಾಗಿರಬೇಕು, ಧರ್ಮವು ಅವನಲ್ಲಿರಬೇಕು ಜಗವೆಲ್ಲ ನಗುತ್ತಿರಲಿ ಜಗದಳವು ನನಗಿರಲಿ ಎಂಬಂತೆ ಸಕಲರಿಗೆ ಲೇಸನ್ನು ಬಯಸುವ ಮನಸ್ಸು ನಮ್ಮದಾಗಿರಬೇಕು, ಪುರಾಣ ಪುಣ್ಯಕತೆಗಳು ಮನುಷ್ಯನಲ್ಲಿ ಧಾರ್ಮಿಕ ಭಾವನೆಯೊಂದಿಗೆ ವಿಚಾರ ಹಾಗೂ ವಿವೇಚನೆಯನ್ನುಂಟು ಮಾಡುತ್ತವೆ ಎಂದು ಅಣ್ಣಿಗೇರಿ ದಾಸೋಹಮಠದ ಡಾ. ಶಿವಕುಮಾರ ಸ್ವಾಮಿಗಳು ಹೇಳಿದರು.

ಇಲ್ಲಿಯ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ ಶ್ರೀ ಈಶ್ವರ ಸಮುದಾಯ ಭವನ ಹಾಗೂ ಶ್ರೀಈಶ್ವರ ಸೇವಾ ಟ್ರಸ್ಟ್‌ ಉದ್ಘಾಟನಾ ಸಮಾರಂಭ ಮತ್ತು ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜ್ಞಾನಿಗಳ ಅನುಭಾವಿಗಳ ಸಜ್ಜನರ ಸಂಘವು ನಮ್ಮಲ್ಲಿ ಜ್ಞಾನವನ್ನುಂಟು ಮಾಡುತ್ತವೆ. ಮಂಗಲ ಎಂದರೆ ಶುಭವನ್ನುಂಟು ಮಾಡುವದು ಪುರಾಣ ಮಂಗಲವು ಪುರಾಣ ಕೇಳಿ, ತಿಳಿದು ಅರ್ಥೈಸಿ ಮನವನ್ನು ನಿರ್ಮಲಗೊಳಿಸಿ ಜೀವನದಲ್ಲಿ ಶುಭ ತಂದುಕೊಳ್ಳುವದಾಗಿದೆ. ಪುರಾಣ ಪುಣ್ಯ ಕತೆಗಳು ಸದ್ಭಾವನೆ ಉಂಟು ಮಾಡಿ ಮನಸ್ಸಿನಲ್ಲಿ ಭಕ್ತಿಯನ್ನು ಬೆಳೆಸುತ್ತವೆ ಎಂದರು.

ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಮಾತನಾಡಿ, ಪುರಾಣವು ನಮ್ಮಲ್ಲಿ ಜಾಗೃತಿಯನ್ನುಂಟು ಮಾಡುತ್ತದೆ. ಈಶ್ವರ ಸೇವಾ ಟ್ರಸ್ಟ್‌ಯಿಂದ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದರು.

ಈ ವೇಳೆ ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಚನ್ನಬಸಪ್ಪ ಅಕ್ಕಿ, ಮಲ್ಲಿಕಾರ್ಜುನ ಸಂತೋಜಿ, ಕುಬೇರಕುಮಾರ ಕಂಬಳಿ, ಶಿವಯೋಗಯ್ಯ ಹಿರೇಮಠ, ಸುವರ್ಣಾ ವಸ್ತ್ರದ, ಮಹಾದೇವಪ್ಪ ಕೋಳೋರ, ಚನ್ನಯ್ಯ ಹಿರೇಹಾಳಮಠ, ಎಂ.ಡಿ. ಮಾವಿನಕಾಯಿ, ಚನ್ನಮ್ಮ ಸಂಶಿ, ಗಿರೀಶ ಮಾವಿನಕಾಯಿ, ಪ್ರಕಾಶ ಮ್ಯಾಗೇರಿ, ರಾಮನಗೌಡ ಪಾಟೀಲ, ಸೋಮನಗೌಡ ಸೋಮನಗೌಡ್ರ, ಹನಮಂತಪ್ಪ ಚಿಗರಿ, ದೀಪ್ತಿ ಪಾಠಕ, ಸುಜಾತಾ ಗುಡಿಮನಿ, ವಿದ್ಯಾ ಹುಲಬನ್ನಿ, ಗಂಗವ್ವ ನರ್ತಿ, ಅನ್ನಪೂರ್ಣ ಅಡ್ನೂರ, ಮಂಜುನಾಥ ಮಾನೇದ, ಭೀಮಪ್ಪ ಮಾಲಗಿತ್ತಿ, ಶರಣಬಸಪ್ಪ ಹೊನ್ನಪ್ಪನವರ, ಶಿವಕುಮಾರ ಮುಧೋಳ, ಪ್ರವೀಣ ಶಿವಶಿಂಪಿಗೇರ, ವೀರೇಶ ಮಾಡಲಗೇರಿ, ಲೋಹಿತ ಗುಳಗಣ್ಣವರ, ಗಿರೀಶ್ ಇಟಗಿ ಉಪಸ್ಥಿತರಿದ್ದರು.

ಭಕ್ತಿ ಸೇವೆಯನ್ನು ನಿವೃತ್ತ ಪ್ರಾ.ಎಸ್.ಆರ್. ಅಂಗಡಿ ವಹಿಸಿಕೊಂಡಿದ್ದರು. ರತ್ನಾ ಮಂಟೂರಮಠ, ಮೋಹನ ಮೇರವಾಡೆ, ಶಿವಶಂಕರ ದೊಡ್ಡಮನಿ ಅವರಿಂದ ಸಂಗೀತ ಜರುಗಿತು. ಶಿವಯೋಗಯ್ಯ ಹಿರೇಮಠ ಹಾಗೂ ಮಂಜುಳಾ ಅಕ್ಕಿ ನಿರೂಪಿಸಿ ವಂದಿಸಿದರು.