ಸಾರಾಂಶ
ಮುಂಡರಗಿ: ಶರಣ ಲಿಂಗೈಕ್ಯ ಎಚ್. ಎಸ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಸನ್ಮಾನ ಸ್ವೀಕರಿಸಿದ ಎಲ್ಲ ಮಹನೀಯರಿಗೆ ನಾನು ಚಿರಋಣಿಯಾಗಿದ್ದೇನೆ. ನನ್ನ ಭವಿಷ್ಯದ ಬದುಕಿಗೆ ತಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಕಾರ ಇರಲಿ ಎಂದು ಯುವ ಮುಖಂಡ ಆನಂದಗೌಡ ಪಾಟೀಲ ಹೇಳಿದರು.ಅವರು ಶನಿವಾರ ಸಂಜೆ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ಸ್ನೇಹ ಜೀವಿ ಆನಂದಗೌಡ ಪಾಟೀಲ ಗೆಳೆಯರ ಬಳಗ ಹಾಗೂ ಶರಣ ಎಚ್.ಎಸ್.ಪಾಟೀಲ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಹಾಗೂ ಒಡನಾಡಿಗಳಿಗೆ ಸನ್ಮಾನ ಸಮಾರಂಭದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನ್ನ ತಂದೆ-ತಾಯಿ, ಎಲ್ಲ ಸಹೋದರರು ಹಾಗೂ ಪಟ್ಟಣದ ಎಲ್ಲ ಹಿರಿಯರು ಮತ್ತು ಪ್ರೀತಿಯ ಗೆಳೆಯರ ಸಹಕಾರ ಹಾಗೂ ಸ್ಫೂರ್ತಿಯಿಂದ ಒಂದಿಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರ, ಹರಕೆ, ಹಾರೈಕೆ ಸದಾ ನನಗಿರಲಿ. ನನ್ನ ಗೆಳೆಯರ ಬಳಗದ ಬಗ್ಗೆ ನನಗೆ ಹೇಳಲು ಮಾತುಗಳೇ ಬರುತ್ತಿಲ್ಲ. ಇಂಥ ಭವ್ಯವಾದ ಕಾರ್ಯಕ್ರಮ ಆಯೋಜಿಸಿ ನಮ್ಮ ಸ್ನೇಹ ಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಹೆಲ್ತ್ ಕೇರ್ ಎಕ್ಸ್‌ಲೆನ್ಸ್ ಅವಾರ್ಡ್-2025ರ ಪುರಸ್ಕೃತ ಡಾ.ಸುನೀಲ ಅರಳಿ, ಸಾಹಿತ್ಯ ಕ್ಷೇತ್ರದಲ್ಲಿ ವೀಣಾ ಹೇಮಂತಗೌಡ ಪಾಟೀಲ, ಎಂಜಿನಿಯರಿಂಗ್ ವಿಭಾಗದಲ್ಲಿ ಡಾ.ಮಹಾಲಕ್ಷ್ಮಿ ಗುಗ್ಗರಿ, ನೂತನ ಸಂಸತ್ ಭವನ ಒಳಾಂಗಣದ ವಿನ್ಯಾಸಗಾರ ಅನಿಲ್ ಅಂಗಡಿ, ಇಸ್ರೊ ವಿಜ್ಞಾನಿ ಬಸವರಾಜ ಕಲ್ಲಕುಟ್ಟರ್, ಪ್ರತಿಭಾವಂತ ವಿದ್ಯಾರ್ಥಿ ಕಾರ್ತಿಕ ಬಿಳಿಮಗ್ಗದ ಅವರಿಗೆ ಸನ್ಮಾನಿಸಲಾಯಿತು. ಒಡನಾಡಿಗಳ ಸನ್ಮಾನದಲ್ಲಿ ವೈ. ಎನ್. ಗೌಡರ, ವಿಶ್ವನಾಥ ಕಪ್ಪತ್ತನವರ, ಕರಬಸಪ್ಪ ಹಂಚಿನಾಳ, ಶಿವಪ್ರಕಾಶ ಮಹಾಜನಶೆಟ್ಟರ್, ರಾಮಸ್ವಾಮಿ ಹೆಗಡಾಳ, ತಿಪ್ಪಣ್ಣ ಕೊಂಚಿಗೇರಿ, ಬಸಯ್ಯ ಗಿಂಡಿಮಠ, ಡಾ. ವಿ.ಕೆ. ಸಂಕನಗೌಡ್ರ, ಡಾ. ಅನ್ನದಾನಿ ಮೇಟಿ, ಎ.ವಿ. ಹಳ್ಳಿಕೇರಿ, ಸಿ.ಎಸ್. ಅರಸನಾಳ, ಸಿ.ಕೆ. ಗಣಪ್ಪನವರ, ಪಾರಸ್‌ಮಲ್ ಮೆಹತಾ, ಎಂ.ಡಿ. ಪಾಟೀಲ, ಸತೀಶ ಹುಯಿಲಗೋಳ, ದೇವಪ್ಪ ರಾಮೇನಹಳ್ಳಿ, ಅಂದಪ್ಪ ಕಡ್ಡಿ, ನಾಗಪ್ಪ ಶೇಡದ, ಡಾ. ಅಕಳಂಡಪ್ಪ ಅರಳಿ, ಆರ್.ಹೆಚ್. ಮುಂಡರಗಿ, ನಿಂಗಪ್ಪ ಇಟಗಿ, ಪ್ರಭು ಅಬ್ಬಿಗೇರಿ, ಬಿ.ಬಾಬು, ಶಾಂತಕುಮಾರ ಪೂಜಾರ ಅವರಿಗೆ ಸನ್ಮಾನಿಸಲಾಯಿತು.ಪ್ರಗತಿಪರ ರೈತರಾದ ಶಿವಾನಂದಪ್ಪ ಜಂತ್ಲಿ, ವೀರನಗೌಡ ಪಾಟೀಲ, ಗೋವಿಂದಪ್ಪ ದೊಡ್ಡಮನಿ, ಬಸಪ್ಪ ಶಿವಪ್ಪ ಕುಂಬಾರ, ಪ್ರಕಾಶ ಸಜ್ಜನರ, ಬಸವರಾಜ ಮಜ್ಜಿಗಿ, ಮಹೇಂದ್ರ ಹಂಚಿನಾಳ, ವೀರಣ್ಣ ಕವಲೂರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಜರುಗಿದ ಸನ್ಮಾನದಲ್ಲಿ ಬಸವರಾಜ ಬಳ್ಳಾರಿ, ಮಂಜುನಾಥ ಕುಸುಗಲ್, ಜಾಫ್‌ರ್ ಬಚ್ಚೇರಿ, ಚೇತನ್ ಸೊಲಗಿ, ಶಿವು ಹೊಂಬಳಗಟ್ಟಿ, ಮಲ್ಲಿಕಾರ್ಜುನ ಪಾಟೀಲ, ಮಹಾದೇವಪ್ಪ ಪತ್ತಾರ, ಮೌನೇಶ ಬಡಿಗೇರ, ಬಸವರಾಜ ಬ್ಯಾಳಿ, ಯಮುನಪ್ಪ ಶಿಳ್ಳೆಕ್ಯಾತರ, ಕಾಶಿಂಬಿ ಶಿರಹಟ್ಟಿ, ವೀರಣ್ಣ.ಎಸ್.ಘಟ್ಟಿ, ಯಮುನಪ್ಪ ಭಜಂತ್ರಿ, ಜಲಾಲ ಕೊಪ್ಪಳ, ಶಂಕರ ಪವಾರ್, ಪದ್ಮವ್ವ ಈರಪ್ಪ ರಾಮೇನಹಳ್ಳಿ, ಶಿವಗಂಗವ್ವ ದೇವಪ್ಪ ಅಳವುಂಡಿ, ಅಶೋಕ ಕಮ್ಮಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜ.ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ, ಜ. ನಿಜಗುಣಪ್ರಭು ತೋಂಟದಾರ್ಯಸ್ವಾಮೀಜಿ ಸಾನಿಧ್ಯವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಕಮಲಮ್ಮ ಪಾಟೀಲ ಉಪಸ್ಥಿತರಿದ್ದರು. ಆರ್.ಜೆ.ರಶೀದ ನಿರೂಪಿಸಿ, ಬಸವರಾಜ ಉಮಚಗಿ ವಂದಿಸಿದರು.