ಸಿಬಿಎಸ್‌ಇ 10, 12ನೇ ಕ್ಲಾಸ್‌ ಫಲಿತಾಂಶ ಪ್ರಕಟ: ಮಾಯಾ, ಸ್ತುತಿ ಟಾಪರ್ಸ್‌

| Published : May 14 2024, 01:00 AM IST / Updated: May 14 2024, 07:12 AM IST

मानव संसाधन विकास मंत्रालय ने CBSC BOARD की 10वीं की परीक्षाओं को लेकर स्थिति स्पष्ट कर दी है। मंगलवार को मानव संसाधन विकास मंत्री रमेश पोखरियाल निशंक ने कहा कि उत्तर-पूर्वी दिल्ली को छोड़कर देश में और कहीं भी CBSC 10वीं की परीक्षा नहीं होगी
ಸಿಬಿಎಸ್‌ಇ 10, 12ನೇ ಕ್ಲಾಸ್‌ ಫಲಿತಾಂಶ ಪ್ರಕಟ: ಮಾಯಾ, ಸ್ತುತಿ ಟಾಪರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿಬಿಎಸ್‌ಇ 10, 12ನೇ ಕ್ಲಾಸ್‌ ಫಲಿತಾಂಶ ಹೊರಬಂದಿದ್ದು, 2ನೇ ಸ್ಥಾನದಲ್ಲಿದ್ದ ಬೆಂಗ್ಳೂರು ವಿಭಾಗ 4ಕ್ಕೆ ಕುಸಿತ ಕಂಡಿದೆ.

 ಬೆಂಗಳೂರು :  2023-24ನೇ ಸಾಲಿನ 10 ಮತ್ತು 12ನೇ ತರಗತಿ ಫಲಿತಾಂಶವನ್ನು ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಸಿಬಿಎಸ್‌ಇ) ಸೋಮವಾರ ಪ್ರಕಟಿಸಿದ್ದು, ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಪ್ರಾದೇಶಿಕ ವಿಭಾಗವು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

10ನೇ ತರಗತಿಯಲ್ಲಿ ಬೆಂಗಳೂರಿನ ಇಂದಿರಾನಗರದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ ಮಾಯಾ ರಾಜೇಶ್‌ 500ಕ್ಕೆ 496 ಅಂಕ (ಶೇ.99.2) ಮತ್ತು 12ನೇ ತರಗತಿಯಲ್ಲಿ (ವಾಣಿಜ್ಯ ವಿಭಾಗ) ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಸ್ತುತಿ ಅಲ್ಮಾಲ್‌ 500ಕ್ಕೆ 496 ಅಂಕ (ಶೇ.99.2) ಪಡೆದು ಸಾಧನೆ ಮಾಡಿದ್ದಾರೆ. ಇವರೇ ರಾಜ್ಯದ ಟಾಪರ್‌ಗಳು ಎನ್ನಲಾಗುತ್ತಿದೆ.

ಇವರಲ್ಲದೆ 12ನೇ ತರಗತಿಯಲ್ಲಿ ರಾಮಮೂರ್ತಿನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮೋನಿಕಾ.ಎಂ ವಿಜ್ಞಾನ ವಿಭಾಗದಲ್ಲಿ 500ಕ್ಕೆ 494 (ಶೇ.98.8), ಅದೇ ವಿಭಾಗದ ವಿಶ್ರುತ್‌ ಮತ್ತು ಆದಿತ್ಯ ಎಂಬ ವಿದ್ಯಾರ್ಥಿಗಳು ತಲಾ 493 ಅಂಕ ಪಡೆದಿದ್ದಾರೆ. 10ನೇ ತರಗತಿಯಲ್ಲಿ ದಾವಣಗೆರೆಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಸುಚಿತಾ ಮನ್ನೆ ಮತ್ತು ಸಿಂಧನೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಸತ್ಕೃತಿ ತಿಮ್ಮನದೊಡ್ಡಿ ಕರನಂ 500ಕ್ಕೆ 494 (ಶೇ.98.8) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಬೆಂಗಳೂರು ಪ್ರಾದೇಶಿಕ ವಿಭಾಗದ ಸಿಬಿಎಸ್‌ಇ ಶಾಲೆಗಳಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.99.26 ರಷ್ಟು ಮತ್ತು 12ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.96.95 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10ನೇ ತರಗತಿ ಫಲಿತಾಂಶ ಕಳೆದ ವರ್ಷಕ್ಕೆ (ಶೇ.99.18) ಹೋಲಿಸಿದರೆ ಶೇ.0.08 ರಷ್ಟು ಹೆಚ್ಚಾದರೆ, 12 ನೇ ತರಗತಿ ಫಲಿತಾಂಶವು ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ.98.64) ಶೇ.1.69 ರಷ್ಟು ಕಡಿಮೆಯಾಗಿದೆ.

ಅನೇಕ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿರುವುದಾಗಿ ಪ್ರಕಟಿಸಿವೆ. ರಾಜ್ಯದ ವಿವಿಧ ಶಾಲಾವಾರು ಫಲಿತಾಂಶದಲ್ಲಿ 12ನೇ ತರಗತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇ.99.11, ಸ್ವತಂತ್ರ ಶಾಲೆಗಳಲ್ಲಿ ಶೇ.96.33, ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಶೇ.99.87, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.99.35 ಮತ್ತು ಕೇಂದ್ರ ಆಡಳಿತದ ಟಿಬೆಟಿಯನ್ ಶಾಲೆಗಳಲ್ಲಿ ಶೇ.98.84 ರಷ್ಟು ಫಲಿತಾಂಶ ಬಂದಿದೆ.

ಅದೇ ರೀತಿ 10ನೇ ತರಗತಿ ಪೈಕಿ ಸರ್ಕಾರಿ ಶಾಲೆಗಳಲ್ಲಿ ಶೇ.98.07, ಸ್ವತಂತ್ರ ಶೇ.99.24, ಜವಾಹರ್ ನವೋದಯ ವಿದ್ಯಾಲಯಗಳು ಶೇ.100, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.99.85, ಕೇಂದ್ರ ಆಡಳಿತದ ಟಿಬೆಟಿಯನ್ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಮಧ್ಯೆ, ತಿರುವನಂತಪುರ ಪ್ರದೇಶದ ಶಾಲೆಗಳು 12ನೇ ತರಗತಿಯಲ್ಲಿ ಶೇ.99.91 ಮತ್ತು 10 ನೇ ತರಗತಿಯಲ್ಲಿ ಶೇ.99.75 ರಷ್ಟು ಫಲಿತಾಂಶದೊಂದಿಗೆ ಅಗ್ರ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂತರದ ಸ್ಥಾನದಲ್ಲಿ ವಿಜಯವಾಡ ಮತ್ತು ಚೆನ್ನೈ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ.ಸಿಇಟಿಗೆ ಸಿಬಿಎಸ್‌ಇ, ಐಸಿಎಸ್‌ಇ ಅಂಕ ದಾಖಲಾತಿ ಇಂದಿನಿಂದ:

ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಸಿಸಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಲ್ಲಿ 2024ನೇ ಸಾಲಿನ ಯುಜಿ-ಸಿಇಟಿ ಬರೆದಿರುವವರು ತಮ್ಮ ಅಂಕಗಳನ್ನು ಆನ್‌ಲೈನ್‌ ಮೂಲಕ ದಾಖಲಿಸಲು ಮೇ 14ರಿಂದ 20ರವರೆಗೆ ವೆಬ್ ಪೋರ್ಟಲ್‌ ಸಕ್ರಿಯಗೊಳಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಈ ಮೇಲಿನ ಮಂಡಳಿಗಳ ಅಭ್ಯರ್ಥಿಗಳು ಮೇ 20ರ ಒಳಗೆ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು https:kea.kar.nic.in ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್‌ ಮೂಲಕ ಅಂಕಗಳನ್ನು ದಾಖಲಿಸಿ, ಅಂಕಪಟ್ಟಿಯ ಪಿಡಿಎಫ್ ಪ್ರತಿಯನ್ನು ತಪ್ಪದೇ ಅಪ್‌ಲೋಡ್ ಮಾಡಬೇಕು. 2024ಕ್ಕಿಂತ ಹಿಂದಿನ ವರ್ಷಗಳಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯನ್ನು ಉತ್ತೀರ್ಣರಾಗಿರುವವರೂ ಅಂಕಗಳನ್ನು ದಾಖಲಿಸಬೇಕು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024ರ ‘ನಾಟಾ’ ಪರೀಕ್ಷೆಯ ಅಂಕಗಳನ್ನು ಅರ್ಹತೆಗೆ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಿದೆ.