ಮೇ 11ರಂದು ಮೈಲಾರ ಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಮಲ್ಲೇಶ್ ಖಂಡ್ರಳ್ಳಿ

| Published : May 09 2025, 12:32 AM IST

ಮೇ 11ರಂದು ಮೈಲಾರ ಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಮಲ್ಲೇಶ್ ಖಂಡ್ರಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಕೊಂಡಜ್ಜಿ ರಸ್ತೆಯಲ್ಲಿರುವ ಶಿಬಾರದ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಗಂಗಮಾಳಮ್ಮ, ಶ್ರೀ ಸಂಪಿಗೆ ಸಿದ್ದೇಶ್ವರ ದೇವರ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಮೇ 7ರಿಂದ 11ರ ವರೆಗೆ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ

ಮಾಧ್ಯಮಗೋಷ್ಠಿ । ಶಿಲಾಮಯ ದೇಗುಲ ಲೋಕಾರ್ಪಣೆ, ಕಳಸಾರೋಹಣ । 11ರ ವರೆಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಲ್ಲಿನ ಕೊಂಡಜ್ಜಿ ರಸ್ತೆಯಲ್ಲಿರುವ ಶಿಬಾರದ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಗಂಗಮಾಳಮ್ಮ, ಶ್ರೀ ಸಂಪಿಗೆ ಸಿದ್ದೇಶ್ವರ ದೇವರ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಮೇ 7ರಿಂದ 11ರ ವರೆಗೆ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಶಿಬಾರ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎಚ್.ಮಲ್ಲೇಶ್ ಖಂಡ್ರಳ್ಳಿ ತಿಳಿಸಿದರು.

ನಗರದಲ್ಲಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 15 ವರ್ಷಗಳಿಂದ ಈ ದೇವಸ್ಥಾನ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಭಕ್ತರು, ದಾನಿಗಳಿಂದ ದೇಣಿಗೆ ಪಡೆದು 6.50 ಕೋಟಿ ರು. ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸಮುದಾಯ ಭವನ ಸೇರಿದಂತೆ ಇನ್ನೂ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದಕ್ಕೂ 4-5 ಕೋಟಿ ರು. ತಗುಲಲಿದೆ. ದೇವಸ್ಥಾನದ ರಾಜಗೋಪುರ 50 ಅಡಿ ಎತ್ತರ ನಿರ್ಮಿಸಬೇಕಿದ್ದು, 15 ಅಡಿ ನಿರ್ಮಾಣವಾಗಿದೆ. ಇನ್ನೂ 35 ಅಡಿ ನಿರ್ಮಾಣ ಪ್ರಗತಿಯಲ್ಲಿದೆ. ಕೊಟ್ಟೂರಿನ ವೀರೇಶ ಆಚಾರ್ ದೇವರ ಶಿಲಾಮೂರ್ತಿಗಳನ್ನು ಕೆತ್ತಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ 7 ಮತ್ತು 8ರಂದು ಬೆಳಿಗ್ಗೆ 8ಕ್ಕೆ ಗುರುಪ್ರಾರ್ಥನೆ, ಗಣಪತಿ ಪೂಜೆ, ಹೋಮ, ನವಗ್ರಹ ಹೋಮ, ರತ್ನನ್ಯಾಸಾದಿ ನಡೆಯಲಿದ್ದು, ಸಂಜೆ ಬಿಂಬ ಪರಿಗ್ರಹ, ಸ್ಥಾನಶುದ್ಧಿ, ಪ್ರತಿಷ್ಠಾದಿವಸಾದಿ ಹೋಮಗಳು, ರತ್ನನ್ಯಾಸಾದಿ ಪ್ರಕ್ರಿಯೆಗಳು ಮತ್ತು ವಿವಿಧ ಪೂಜಾಕಾರ್ಯಗಳು ಜರುಗಲಿವೆ ಎಂದರು.

ಮೇ 9 ರಂದು ಬೆಳಿಗ್ಗೆ 7ಕ್ಕೆ ಗುರು-ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ ದೇವತಾ ಪ್ರತಿಷ್ಠಾಪನೆ, ಅಷ್ಟಬಂಧ ಸಂಯೋಜನೆ, ಮಹಾಪ್ರಾಣ ಪ್ರತಿಷ್ಠಾವಿಧಿ ಮತ್ತು 9-35ಕ್ಕೆ ಶಿಖರ ಪದರತಿಷ್ಮಾ ವಿಧಿ ಮತ್ತು ಸಂಜೆ ವಿವಿಧ ಹೋಮ, ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ವಿವರಿಸಿದರು.

ಮೇ 10ರಂದು ಬೆಳಿಗ್ಗೆ 8 ಗಂಟೆಗೆ ತತ್ವಕಲಶ ಸ್ಥಾಪನೆ, ತತ್ವ ಹೋಮ, ತತ್ವ ಕಲಶಾಭಿಷೇಕ, ಮಹಾಪೂಜೆ ಮತ್ತು ಸಂಜೆ ಬ್ರಹ್ಮ ಕಲಶ ಸ್ಥಾಪನೆ, ಆದಿಹೋಮ ಜರುಗಲಿದೆ. ಮೇ 11 ರಂದು ಬೆಳಿಗ್ಗೆ 7 ಗಂಟೆಗೆ ಹದಡಿಯ ಚಂದ್ರಗಿರಿಮಠದ ಶ್ರೀ ಮುರುಳೀಧರ ಸ್ವಾಮೀಜಿ ಅವರಿಂದ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ದೇವಸ್ಥಾನ ಸಮಿತಿಯ ಕೆ.ಬಿ. ಶಂಕರನಾರಾಯಣ, ವೈ.ಮಲ್ಲೇಶ್, ಜಯಪ್ಪ ಬಳ್ಳಾರಿ, ಗೋಪಾಲ್ ರಾವ್ ಸಾವಂತ್, ಎಚ್.ಜೆ. ವೀರಪ್ಪ, ಜಯಪ್ರಕಾಶ್, ಎಚ್.ಎಸ್.ಜಗದೀಶ್ ಇತರರು ಇದ್ದರು. ಕ್ಯಾಪ್ಷನ5ಕೆಡಿವಿಜಿ34: ದಾವಣಗೆರೆಯಲ್ಲಿ ಮೈಲಾರ ಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಕುರಿತು ಮಲ್ಲೇಶ್ ಖಂಡ್ರಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.