ಸಾರಾಂಶ
ಗೋಕಾಕ್ ಚಳವಳಿ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಡಾ. ರಾಜ್ ಕುಮಾರ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟದ ಸ್ಫೂರ್ತಿಯಾದರು.
ಕನ್ನಡಪ್ರಭ ವಾರ್ತೆ ಮೈಸೂರು
ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ವರನಟ ಡಾ. ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು.ನಂತರ ಮಯೂರ ಕನ್ನಡ ಯುವಕರ ಬಳಗದ ಜಿ. ರಾಘವೇಂದ್ರ ಮಾತನಾಡಿ, ಗೋಕಾಕ್ ಚಳವಳಿ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಡಾ. ರಾಜ್ ಕುಮಾರ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟದ ಸ್ಫೂರ್ತಿಯಾದರು. ಅದರ ಫಲವಾಗಿ ಕನ್ನಡ ಭಾಷೆಗೆ ಎಲ್ಲೆಡೆ ಪ್ರಧಾನ ಸ್ಥಾನ ದೊರೆಯಲು ಸಾಧ್ಯವಾಯಿತು. ತಮ್ಮ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಜನಪ್ರಿಯಗೊಳಿಸಿದರು, ಸಾಮಾಜಿಕ ಬದಲಾವಣೆಯಲ್ಲಿ ಅವರ ಚಲನಚಿತ್ರಗಳು ಪ್ರಮುಖ ಪಾತ್ರವಹಿಸಿದೆ ಎಂದರು. ಬಳಗದ ಕಿಶೋರ್ ಕುಮಾರ್, ಎಸ್.ಎನ್. ರಾಜೇಶ್, ಸುಬ್ರಮಣ್ಯ, ಮಂಜುನಾಥ್, ಚಕ್ರಪಾಣಿ, ಲಕ್ಷ್ಮಣ, ರವಿಚಂದ್ರ, ಮುಸಿರ, ಹರೀಶ್ ನಾಯ್ಡು, ಕಿರಣ್ ಮೊದಲಾದವರು ಇದ್ದರು.