ಎನ್‌ಸಿಸಿ ನೂತನ ಕಟ್ಟಡಕ್ಕೆ ಎಂ.ಬಿ.ಪಾಟೀಲ್ ಭೂಮಿಪೂಜೆ

| Published : Mar 12 2024, 02:05 AM IST

ಸಾರಾಂಶ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಆರ್ಥಿಕ ಸಹಾಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಸಮಿಪ ನಿರ್ಮಿಸಲಾಗುತ್ತಿರುವ ಎನ್‌ಸಿಸಿ ನೂತನ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು. ಎನ್‌ಸಿಸಿಗೆ ಸೇರಿದ ಐದು ಎಕರೆ ಪ್ರದೇಶದಲ್ಲಿ 16,000 ಚದರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಒಂದು ಅಂತಸ್ತಿನ ಬಿಲ್ಡಿಂಗ್ ಇದಾಗಿದೆ. ಒಂಬತ್ತು ತಿಂಗಳಲ್ಲಿ ಈ ಕಟ್ಟಡ ನಿರ್ಮಿಸುವ ಗುರಿಯಿದೆ ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಕನಲ್ ಗಿರೀಶ್ ಶಿಂಧೆ, ಸಬ್ ಮೇಜರ್ ಜಿ.ಎನ್.ಕುರಂದಳೆ, ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ, ಸಂಸ್ಥೆಯ ಅಧೀಕ್ಷಕ ಎಸ್.ಎ.ಬಿರಾದಾರ, ಎಂಜಿನಿಯರ್ ಗಳಾದ ಆರ್.ಎಸ್.ಜಿರಲಿ, ಯು.ಎನ್.ಕರಡಿ, ಉಪಮೇಯರ್ ದಿನೇಶ ಹಳ್ಳಿ, ಡಾ.ಮಹಾಂತೇಶ ಬಿರಾದಾರ, ಸುರೇಶ ಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.