ಎಂಬಿಪಾರ ಆರೋಗ್ಯ ಕಾರ್ಡ್ ವಿತರಣೆಯ ಕಾರ್ಯ ರಾಜ್ಯಕ್ಕೆ ಮಾದರಿ

| Published : Feb 13 2024, 12:46 AM IST

ಎಂಬಿಪಾರ ಆರೋಗ್ಯ ಕಾರ್ಡ್ ವಿತರಣೆಯ ಕಾರ್ಯ ರಾಜ್ಯಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಜಿಲ್ಲೆಯ ಪತ್ರಕರ್ತರಿಗೆ ತಮ್ಮ ಬಿಎಲ್ ಡಿಇ ಸಂಸ್ಥೆಯಿಂದ ಉಚಿತ ಆರೋಗ್ಯ ಕಾರ್ಡ್ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಕಾರ್ಯಕ್ಕೆ ಜಿಲ್ಲೆಯ ಪತ್ರಕರ್ತರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಹಿತದೃಷ್ಟಿಯಿಂದ ಪಾಟೀಲ್‌ರ ಕಾರ್ಯ ರಾಜ್ಯದಲ್ಲಿಯೇ ಮಾದರಿ ಎಂದು ಶಾಸಕ ವಿಠ್ಠಲ ಕಟಕದೊಂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಎಲ್‌ಡಿಇ ಸಂಸ್ಥೆಯಿಂದ ನೀಡಿರುವ ಆರೋಗ್ಯ ಕಾರ್ಡ್‌ಗಳನ್ನು ಪತ್ರಕರ್ತರಿಗೆ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರ ಭವನ ಹಾಗೂ ಅವರ ಕುಟುಂಬಕ್ಕೆ ಬೇಕಾಗುವ ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳುವೆ. ಕೆಲವೇ ತಿಂಗಳಲ್ಲಿ ತಾಲೂಕಿಗೆ ಬೇಕಾಗುವ ಮಿನಿ ವಿಧಾನಸೌಧ ಹಾಗೂ ಪ್ರಮುಖ ಕಚೇರಿಗಳನ್ನು ಪ್ರಾರಂಭ ಮಾಡುವುದಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಪತ್ರಕರ್ತ ಶಂಕರ ಹಾವಿನಾಳ ಹಾಗೂ ಎ.ಎಸ್ ಕರ್ಜಗಿ ಮಾತನಾಡಿ, ಹಲವು ವರ್ಷಗಳಿಂದ ಪತ್ರಿಕಾ ಭವನ ನಿವೇಶನ ಮಂಜೂರಾತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆನಗುದಿಗೆ ಬಿದ್ದದೆ. ಪತ್ರಕರ್ತರಿಗೆ ಅಧಿಕಾರಿಗಳು ಸಾಕಷ್ಟು ಸತಾಯಿಸುತ್ತಿದ್ದು, ಇನ್ನೂ ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ನೂತನ ತಾಲೂಕಿಗೆ ಅವಶ್ಯವಿರುವ ಪತ್ರಿಕಾ ಭವನ ನಿರ್ಮಾಣ ಮಾಡಿದ ಕೀರ್ತಿ ಶಾಸಕ ವಿಠ್ಠಲ ಕಟಕದೊಂಡಗೆ ಸಲ್ಲುವಂತಾಗಬೇಕು ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಕೋರೆ, ಪಟ್ಟಣ ಹಾಗೂ ತಾಲೂಕಿನ ಎಲ್ಲರ ಅಭಿಪ್ರಾಯದಂತೆ ಮಿನಿ ವಿಧಾನಸೌಧ, ಪ್ರವಾಸಿ ಮಂದಿರದ ನಿವೇಶನದಲ್ಲಿಯೇ ನಿರ್ಮಾಣವಾದರೆ ಎಲ್ಲರಿಗೂ ಅನಕೂಲವಾಗಲಿದೆ ಎಂದು ತಿಳಿಸಿದರು.

ಕಾನಿಪ ಸಂಘದ ಅಧ್ಯಕ್ಷ ರಮೇಶ ಬಿರಾದಾರ, ಉಪಾಧ್ಯಕ್ಷ ಶಿವಯ್ಯ ಮಠಪತಿ, ಕಾಯದರ್ಶಿ ರಾಜಶೇಖರ ಡೋಣಜಮಠ, ಸಹ ಕಾರ್ಯದರ್ಶಿ ಶ್ರೀಕಾಂತ ಬಗಲಿ, ಖಜಾಂಚಿ ವಿನಯ ಜೀರಂಕಲಗಿ, ಗೌರವಾಧ್ಯಕ್ಷ ತುಕಾರಾಮ ಕೋಳಿ, ಮಾಜಿ ಅಧ್ಯಕ್ಷ ಪ್ರಭಾಕರ ಗೂಳಿಪಾಟೀಲ, ವರಿಗಾರದಾರ ಪ್ರಕಾಶ ಮಾಲಗಾರ, ಲಕ್ಷ್ಮಣ ಶಿಂಧೆ, ಪ್ರಶಾಂತ ಮುಂಡೆವಾಡಿ, ಅನೀಲ ಕೊಡತೆ, ಶಿವಾನಂದ ಶಿವಶರಣ, ರಮೇಶ ಮಲ್ಲಾಡಿ, ಸುಬ್ರಮಣ್ಯಸಂಗಮ, ಸಂಗಮೇಶ ಹೂಗಾರ, ವಿದ್ಯಾ ಕಲ್ಯಾಣಶೆಟ್ಟಿ, ಸಂಗಮೇಶ ಚಿಂಚೊಳ್ಳಿ ಇದ್ದರು. ಪ್ರೊ.ಮನೋಜ ಕಟಗೇರಿ ನಿರೂಪಿಸಿ, ಸ್ವಾಗತಿಸಿದರು.