ಎಂ.ಸಿ.ಸಿ. ಬ್ಯಾಂಕ್ ಕಾರ್ಯಕ್ಷಮತೆ ವಿಶ್ಲೇಷಣೆ, ಪ್ರಶಸ್ತಿ ಪ್ರದಾನ ಸಮಾರಂಭ

| Published : Jun 14 2024, 01:03 AM IST

ಸಾರಾಂಶ

ವೈಯಕ್ತಿಕ ಗುರಿಗಳನ್ನು ಸಾಧಿಸಿದ ಸಿಬ್ಬಂದಿಗಳು, ಮೈಲ್ ಸ್ಟೋನ್ ಈವೆಂಟ್ ಗುರಿಗಳ ಸಾಧಕರು ಮತ್ತು ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಗುರಿಯನ್ನು ಹಂಚಿಕೊಂಡವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಎಂಸಿಸಿ ಬ್ಯಾಂಕಿನ ೨೦೨೩-೨೪ನೇ ವರ್ಷದ ಸಿಬ್ಬಂದಿ ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬ್ಯಾಂಕಿನ ಮಂಗಳೂರಿನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಮಾಜಿ ಪ್ರೊಕ್ಯುರೇಟರ್ ರೆ.ಫಾ. ಜಾನ್ ವಾಸ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕಳೆದ ದಶಕದಲ್ಲಿ ಬ್ಯಾಂಕ್ ಮಾಡಿರುವ ಪ್ರಗತಿ, ನಿರ್ವಹಣೆ ಮತ್ತು ಸಿಬ್ಬಂದಿಯ ಸಹಕಾರವನ್ನು ಅಭಿನಂದಿಸಿದರು.

ಎಂಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೋ ಅಧ್ಯಕ್ಷತೆ ವಹಿಸಿ, ೨೦೨೩-೨ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಸಾಧನೆಗೆ ಎಲ್ಲ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಸದಸ್ಯರನ್ನು ಅಭಿನಂದಿಸಿ, ಎಲ್ಲ ಶಾಖೆಗಳು ೨೦೨೪-೨೫ ನೇ ಸಾಲಿನ ಗುರಿಯನ್ನು ಸಾಧಿಸಿ ಪ್ರಶಸ್ತಿಯನ್ನು ಪಡೆಯಲಿ ಎಂದು ಹಾರೈಸಿದರು.

೨೦೨೪-೨೫ನೇ ಸಾಲಿನಲ್ಲಿ ಕನಿಷ್ಠ ಶೇ.೬೦ರಷ್ಟು ಸಿಬ್ಬಂದಿ ಗುರಿ ಸಾಧಿಸಬೇಕು, ಈ ಬಾರಿ ಶೇ.15ರಷ್ಟು ಸಿಬ್ಬಂದಿ ಮಾತ್ರ ಗುರಿ ಸಾಧಿಸಿದ್ದಾರೆ ಎಂದರು. ಸಿಬ್ಬಂದಿ ಸದಸ್ಯರ ಸಾಮೂಹಿಕ ಪ್ರಯತ್ನವು ಶಾಖೆಗೆ ಯಾವಾಗಲೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದರು.

ಸಲಹೆಗಾರ ಎಸ್.ಎಚ್. ವಿಶ್ವೇಶ್ವರಯ್ಯ ಅವರು ೨೦೨೩-೨೪ರ ಬ್ಯಾಂಕಿನ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಸಿಬ್ಬಂದಿ ಸದಸ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ಕ್ಷೇತ್ರದ ಗಣ್ಯರಾದ ಜಾನ್ ಡಿಸಿಲ್ವಾ ಅವರು ಬ್ಯಾಂಕ್ಸ್ ಬುಲೆಟಿನ್‌ನ ೫ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.ವೈಯಕ್ತಿಕ ಗುರಿಗಳನ್ನು ಸಾಧಿಸಿದ ಸಿಬ್ಬಂದಿಗಳು, ಮೈಲ್ ಸ್ಟೋನ್ ಈವೆಂಟ್ ಗುರಿಗಳ ಸಾಧಕರು ಮತ್ತು ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಗುರಿಯನ್ನು ಹಂಚಿಕೊಂಡವರನ್ನು ಸನ್ಮಾನಿಸಲಾಯಿತು.ಸಂಸ್ಥಾಪಕ ಶಾಖೆಯ ವ್ಯವಸ್ಥಾಪಕಿ ಬ್ಲಾಂಚ್ ಫರ್ನಾಂಡಿಸ್‌, ಕಂಕನಾಡಿ ಶಾಖೆಯ ವ್ಯವಸ್ಥಾಪಕಿ ಐಡಾ ಪಿಂಟೋ, ಕುಲಶೇಖರ ಶಾಖೆಯ ವ್ಯವಸ್ಥಾಪಕಿ ವಿಲ್ಮಾ ಜೆ ಸಿಕ್ವೇರಾ, ಬಜ್ಪೆ ಶಾಖೆಯ ವ್ಯವಸ್ಥಾಪಕ ರೋಹನ್ ಕೆ ಡಿಸಿಲ್ವಾ, ಸುರತ್ಕಲ್ ಶಾಖೆಯ ವ್ಯವಸ್ಥಾಪಕಿ ಸುನೀತಾ ಡಿಎಸ್. ಮತ್ತು ಕುಂದಾಪುರ ಶಾಖೆಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಾಸ್ ಅವರನ್ನು ೨೦೨೩-೨೪ನೇ ಸಾಲಿನ ಅತ್ಯುತ್ತಮ ಕಾರ್ಯನಿರ್ವಹಣೆಯ ವ್ಯವಸ್ಥಾಪಕರಾಗಿ ಗೌರವಿಸಲಾಯಿತು. ಸಂಸ್ಥಾಪಕ ಶಾಖೆ, ಕಂಕನಾಡಿ, ಕುಲಶೇಖರ್, ಬಜ್ಪೆ, ಸುರತ್ಕಲ್ ಮತ್ತು ಕುಂದಾಪುರ ಶಾಖೆಗಳಿಂದ ಅತ್ಯುತ್ತಮ ವ್ಯಾಪಾರ ಶಾಖೆ ಪ್ರಶಸ್ತಿ ಪಡೆದಿವೆ. ನಿರ್ದೇಶಕರಾದ ಹೆರಾಲ್ಡ್ ಮೊಂಟೆರೊ, ಡಾ ಫ್ರೀಡಾ ಎಫ್. ಡಿಸೋಜಾ, ಐರಿನ್ ರೆಬೆಲ್ಲೊ, ಡಾ ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಜೆಪಿ ರೋಡ್ರಿಗಸ್, ವಿನ್ಸೆಂಟ್ ಲಾಸ್ರಾದೊ, ಅನಿಲ್ ಪತ್ರಾವೊ, ಫೆಲಿಕ್ಸ್ ಡಿಕ್ರೂಜ್, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೋ ಇದ್ದರು.

ಪ್ರಧಾನ ವ್ಯವಸ್ಥಾಪಕ ಸುನಿಲ್‌ ಮಿನೇಜಸ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಿಬ್ಬಂದಿ ರಿತೇಶ್ ಡಿಸೋಜಾ ನಿರೂಪಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಎಫ್.ಮಿನೇಜಸ್ ವಂದಿಸಿದರು.

ಈ ಸಂದರ್ಭ ಮಂಗಳೂರಿನ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಯಿತು.