ಎಂಸಿಡಿಸಿಸಿ ಬ್ಯಾಂಕ್‌ ಪ್ರತ್ಯೇಕಗೊಳಿಸಲು ಪ್ರಯತ್ನಿಸುವೆ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌

| Published : Nov 20 2024, 12:31 AM IST

ಎಂಸಿಡಿಸಿಸಿ ಬ್ಯಾಂಕ್‌ ಪ್ರತ್ಯೇಕಗೊಳಿಸಲು ಪ್ರಯತ್ನಿಸುವೆ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಿನಗಳಲ್ಲಿ ಎಂಸಿಡಿಸಿಸಿ ಬ್ಯಾಂಕ್‌ ಪ್ರತ್ಯೇಕಿಸಲು ಪ್ರಯತ್ನಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂದಿನ ದಿನಗಳಲ್ಲಿ ಎಂಸಿಡಿಸಿಸಿ ಬ್ಯಾಂಕ್‌ ಪ್ರತ್ಯೇಕಿಸಲು ಪ್ರಯತ್ನಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದ್ದಾರೆ.ತಾಲೂಕಿನ ಹಾಲಹಳ್ಳಿ ಎಚ್.ಎನ್.ಶ್ರೀಕಂಠಶೆಟ್ಟರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹದೇವಪ್ರಸಾದ್‌ ಅವರು ಮೈಸೂರು ಹಾಲು ಒಕ್ಕೂಟದಿಂದ ಪ್ರತ್ಯೇಕಗೊಳಿಸಿ, ಜಿಲ್ಲೆಯಲ್ಲಿ ಚಾಮುಲ್‌ ಉದಯಕ್ಕೆ ಕಾರಣರಾದರು. ಎಂಸಿ ಡಿಸಿಸಿ ಬ್ಯಾಂಕ್‌ ಪ್ರತ್ಯೇಕಗೊಳಿಸಲು ನಬಾರ್ಡ್‌ ರಿಜಕ್ಟ್‌ ಮಾಡಿತು. ಮಹದೇವಪ್ರಸಾದ್‌ ಅವರು ಇದ್ದಿದ್ದರೆ ಖಂಡಿತ ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ ಬರುತ್ತಿತ್ತು ಎಂದರು. ಸಹಕಾರ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸಹಕಾರ ಸಂಘಗಳಲ್ಲಿ ಕೋಟ್ಯಾಂತ ರು. ವಹಿವಾಟು ನಡೆಯುತ್ತಿದೆ. ಸಹಕಾರ ಕ್ಷೇತ್ರದಿಂದ ರೈತರು ಹಾಗು ಸಾರ್ವಜನಿಕರಿಗೂ ಅನುಕೂಲವಿದೆ. ಸಹಕಾರ ಸಂಘಗಳ ಕಟ್ಟಡಗಳಿಗೆ ಸಹಕಾರ ಇಲಾಖೆಯಿಂದ ಯಾವುದೇ ಅನುದಾನ ಕೊಡುತ್ತಿಲ್ಲ. ತಾಲೂಕಿನ ಗೋಪಾಲಪುರ ಕಟ್ಟಡಕ್ಕೆ ಶಾಸಕರ ಅನುದಾನ ನೀಡುತ್ತೇನೆ ಎಂದರು.

ಸಿಎಂಗೆ ಮನವಿ:

ಸಹಕಾರ ಸಂಘಗಳ ಕಚೇರಿ ಕಟ್ಟಡಗಳಿಗೆ ಅನುದಾನ ಸಹಕಾರ ಇಲಾಖೆಗೆ ನೀಡುತ್ತಿಲ್ಲ. ಮುಂದಿನ ಬಜೆಟ್‌ನಲ್ಲಿ ಅನುದಾನ ಹಾಗೂ ಸಹಕಾರ ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು. ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌ ಮಾತನಾಡಿ, ಸಹಕಾರ ಸಂಘಗಳಲ್ಲಿ ರಾಜಕೀಯ ಬೆರಸಬಾರದು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಒಳ ಪ್ರವೇಶಿಸಿದರೆ ಪ್ರಗತಿ ಆಗುವುದಿಲ್ಲ ಎಂದರು. ಹಿರಿಯ ಸಹಕಾರಿ ದೇಪಾಪುರ ಸಿದ್ದಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ರೈತರಲ್ಲಿ ಅನೇಕರು ಕಟ್ಟುವುದಿಲ್ಲ. ಬದಲಾಗಿ ರಿನ್ಯೂವಲ್‌ಗೆ ಮೊರೆ ಹೋದರೆ ಮುಂದೆ ರೈತರಿಗೆ ಬಹಳ ತೊಂದರೆಯಾಗುತ್ತದೆ ಎಂದರು. ಸಹಕಾರ ರತ್ನ ಪುರಸ್ಕೃತ ಆಲತ್ತೂರು ಜಯರಾಂಗೆ ಸನ್ಮಾನಿಸಿ ಗೌರವಿಸಲಾಯಿತು. ಸಹಕಾರ ಸಂಘಗಳ ನಿಬಂಧಕಿ ಜಿ.ಸಿ.ಜ್ಯೋತಿ ಅರಸ್‌ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ, ಸಿಇಒಗಳು ಸಂಘದ ಬೈಲಾ ಓದಬೇಕು. ಬೈಲಾ ಓದೋದು ಕರ್ತವ್ಯ. ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಜಾಸ್ತಿಯಾಗುತ್ತಿದೆ. ಯಶಸ್ವಿನಿ ಯೋಜನೆ ಅವಧಿಯೊಳಗೆ ಮಾಡಿಸಬೇಕು ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಯೂನಿಯನ್‌ ನಿರ್ದೇಶಕರಾದ ಜಿ.ಮಡಿವಾಳಪ್ಪ,ಮುದ್ದಯ್ಯ, ಜಿಲ್ಲಾ ಹಾಪ್‌ ಕಾಮ್ಸ್‌ ಅಧ್ಯಕ್ಷ ಕೆ.ಆರ್.ಲೋಕೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಸ್.ಬಸವಣ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪಿ.ಶೋಭಾ, ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಪಿ.ಪದ್ಮನಾಭ, ಮುಖಂಡರಾದ ನಂಜುಂಡಸ್ವಾಮಿ, ಎಚ್.ಎಲ್.ಶಿವಪ್ಪ, ಪುಟ್ಟಬಸಪ್ಪ, ಎಚ್.ಎನ್.ಬಸವರಾಜು, ಸೋಮಹಳ್ಳಿ ಶಿವನಾಗಪ್ಪ, ಜಿಲ್ಲಾ ಯೂನಿಯನ್‌ ಸಿಇಒ ಮನುಜ ಇದ್ದರು.