ನೀಲಗಂಗಾ ದೇವಿಯ ಅರ್ಥಪೂರ್ಣ ಜಾತ್ರೆ

| Published : Nov 22 2024, 01:17 AM IST

ಸಾರಾಂಶ

ಸಿಂದಗಿ: ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ತಾಯಿ ನೀಲಗಂಗಾ ದೇವಿಯ ಪಲ್ಲಕ್ಕಿ ದೇವರ ಸ್ಥಾನದಿಂದ ಹೊರ ಬರುತ್ತಿದ್ದಂತೆ ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಹಳೆ ಬಜಾರ ರಸ್ತೆ ಮಾರ್ಗವಾಗಿ ಶ್ರೀ ಬಸವಣ್ಣ ದೇವರ ದೇಗುಲಕ್ಕೆ ಆಗಮಿದ್ತು. ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದರು.

ಸಿಂದಗಿ: ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ತಾಯಿ ನೀಲಗಂಗಾ ದೇವಿಯ ಪಲ್ಲಕ್ಕಿ ದೇವರ ಸ್ಥಾನದಿಂದ ಹೊರ ಬರುತ್ತಿದ್ದಂತೆ ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಹಳೆ ಬಜಾರ ರಸ್ತೆ ಮಾರ್ಗವಾಗಿ ಶ್ರೀ ಬಸವಣ್ಣ ದೇವರ ದೇಗುಲಕ್ಕೆ ಆಗಮಿದ್ತು. ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದರು.ಗೌರಿ ಹುಣ್ಣಿಮೆಯಿಂದ ಪ್ರಾರಂಭವಾದ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರು ನಿರಹಾರ ಸೇವೆ ಮಾಡಿದ್ದರು. ಪಲ್ಲಕ್ಕಿ ದೇವಸ್ಥಾನಕ್ಕೆ ಬಂದ ನಂತರ ನಿರಹಾರ ಸೇವೆ ಮುಕ್ತಾಯಗೊಳಿಸಿದರು. ಪುರುವಂತರ ಸೇವೆ, ನಂದಿಕೋಲು ಸೇವೆ, ಡೊಳ್ಳು ಕುಣಿತ, ಸನಾದಿ, ಮ್ಯೂಸಿಕಲ್ ಬ್ರಾಂಡ್ ಸೇರಿ ಗಮನ ಸೆಳೆದವು.ದೇವಸ್ಥಾನದ ಧರ್ಮದರ್ಶಿ ಸುನೀಲಗೌಡ ಶಿರೂಗೌಡ ದೇವರಮನಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದವು. ಅಶೋಕಗೌಡ ದೇವರಮನಿ, ಅಶೋಕ ವಾರದ, ಡಾ.ಎಂ.ಎಂ.ಪಡಶೆಟ್ಟಿ, ನೀಲಪ್ಪಗೌಡ ಬಿರಾದಾರ, ದುಂಡಪ್ಪ ಸೊನ್ನದ, ವಿಶ್ವನಾಥ ರೇಬಿನಾಳ, ದಯಾನಂದ ಪತ್ತಾರ, ಚನ್ನು ವಾರದ, ಮಹಾದೇವಪ್ಪ ಮುಂಡೇವಾಡಗಿ, ದಯಾನಂದ ಇವಣಿ, ಚನ್ನಪ್ಪ ಗೋಣಿ, ರವಿ ಗವಸಾನಿ, ಅನಿಲ್ ಪಟ್ಟಣಶೆಟ್ಟಿ, ವಿಶ್ವನಾಥ್ ಬೈರಿ, ಚಂದ್ರಶೇಖರ್ ಕಿಣಗಿ ಡಾ.ಶರಣಬಸವ ಜೋಗುರು, ಶಂಕ್ರಪ್ಪ ಗೋಣಿ, ಬಾಬು ಕಮತಗಿ, ಅಣ್ಣು ಕಿಣಗಿ, ಅಶೋಕ್ ಅಲ್ಲಾಪುರ್, ಮುತ್ತು ಪಟ್ಟಣಶೆಟ್ಟಿ, ಶ್ರೀಶೈಲ್ ನಂದಿಕೋಲ, ಪ್ರಕಾಶ್ ಗುಣಾರಿ, ಕಿರಣ್ ಕೋರಿ, ಸಂತೋಷ್ ಪಟ್ಟಣಶೆಟ್ಟಿ, ಪ್ರವೀಣ ಪತ್ತಾರ್, ಶ್ರೀಧರ್ ಬೊಮ್ಮಣ್ಣಿ, ರುದ್ರು ಪಟ್ಟಣಶೆಟ್ಟಿ, ಗಂಗಾಧರ್ ಕಿಣಗಿ ಸಾವಿರಾರು ಭಕ್ತರು ಇದ್ದರು.