ಸಿಎಂರಿಂದ ಅರ್ಥವಿಲ್ಲದ ಬಜೆಟ್‌: ಶಾಸಕ ಚನ್ನಬಸಪ್ಪ

| Published : Feb 17 2024, 01:17 AM IST

ಸಿಎಂರಿಂದ ಅರ್ಥವಿಲ್ಲದ ಬಜೆಟ್‌: ಶಾಸಕ ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ತಮ್ಮ 15ನೇ ಬಜೆಟ್‌, ಗ್ಯಾರಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದುಕಾಣುತ್ತಿದೆ. ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡುವ ಚಾಳಿಯನ್ನು ಮೈಗೂಡಿಸಿಕೊಂಡಿರುವ ಮಾನ್ಯ ಸಿದ್ದರಾಮಯ್ಯ ಅವರು ಕೇಂದ್ರದ ಪಾಲು ಬಂದಿಲ್ಲ ಎಂದು ಒಂದು ಸುಳ್ಳನ್ನೇ ನೂರು ಸಾರಿ ಪದೇಪದೇ ಹೇಳಿದರೆ ಜನರನ್ನು ತಮ್ಮ ಸುಳ್ಳಿನಿಂದ ನಂಬಿಸಬಹುದು ಎಂದುಕೊಂಡಿದ್ದಾರೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆಯಲ್ಲಿ ಕಿಡಿಕಾರಿದರು.

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ತಮ್ಮ 15ನೇ ಬಜೆಟ್‌, ಗ್ಯಾರಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದುಕಾಣುತ್ತಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಕಿಡಿಕಾರಿದರು.

ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡುವ ಚಾಳಿಯನ್ನು ಮೈಗೂಡಿಸಿಕೊಂಡಿರುವ ಮಾನ್ಯ ಸಿದ್ದರಾಮಯ್ಯ ಅವರು ಕೇಂದ್ರದ ಪಾಲು ಬಂದಿಲ್ಲ ಎಂದು ಒಂದು ಸುಳ್ಳನ್ನೇ ನೂರು ಸಾರಿ ಪದೇಪದೇ ಹೇಳಿದರೆ ಜನರನ್ನು ತಮ್ಮ ಸುಳ್ಳಿನಿಂದ ನಂಬಿಸಬಹುದು ಎಂದುಕೊಂಡಿದ್ದಾರೆ ಎಂದರು.

ಬಜೆಟಿನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಕೊಡುತ್ತೇನೆ ಎಂದಿದ್ದು, ನಮ್ಮ ಭಾಜಪ ಸರ್ಕಾರದ ಕೊಡುಗೆಯನ್ನೇ ಅವರು ಪುನರುಚ್ಚರಿಸಿದ್ದಾರೆ. ಹಿಂದುಗಳಿಗೆ ಬಿಡಿಗಾಸೂ ನೀಡದೇ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ, ತಮ್ಮ ಬಾಂಧವರಿಗೆ ನಿಷ್ಠೆ ತೋರಿಸಿದ್ದಾರೆ ಎಂದು ತಿಳಿಸಿದರು.

ಮಧ್ಯರಾತ್ರಿ 1 ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಗಾಂಧಿ ತತ್ವವನ್ನು ಗಾಳಿಗೆ ತೂರಿ, ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲು ಹೊರಟಿದ್ದಾರೆ. ಈ ಸರ್ಕಾರದಲ್ಲಿ ಯಾವುದು ನೆಟ್ಟಗಿಲ್ಲ ಎಂಬುದು ಬುರುಡೆ ಬಜೆಟ್ ನಲ್ಲಿ ಕಾಣಬಹುದು ಎಂದು ಆರೋಪಿಸಿದ್ದಾರೆ.

- - - -16ಎಸ್‌ಎಂಜಿಕೆಪಿ05: ಎಸ್.ಎನ್‌. ಚನ್ನಬಸಪ್ಪ