ಕರ್ಕಶ ಶಬ್ದದ ಧ್ವನಿವರ್ಧಕ ಬಳಸಿದರೆ ಕ್ರಮ: ಪಿಎಸ್‌ಐ

| Published : Jan 20 2024, 02:03 AM IST

ಸಾರಾಂಶ

ಚಾಲಕರು ರಸ್ತೆ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಅಗತ್ಯವಿದೆ. ಮೋಟಾರ್ ಸೈಕಲ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

ಹಗರಿಬೊಮ್ಮನಹಳ್ಳಿ: ಟ್ರ್ಯಾಕ್ಟರ್ ಚಾಲಕರು ಕರ್ಕಶ ಶಬ್ದದ ಧ್ವನಿವರ್ಧಕ ಬಳಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಂಬ್ರಹಳ್ಳಿ ಪಿಎಸ್‌ಐ ಸುವಾರ್ತ ಎಚ್ಚರಿಸಿದರು.

ತಾಲೂಕಿನ ತಂಬ್ರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ನೀಡಿದರು.

ಟ್ರ್ಯಾಕ್ಟರ್ ಚಾಲಕರು ಜೋರಾಗಿ ಶಬ್ದ ಬರುವ ಧ್ವನಿವರ್ಧಕಗಳನ್ನು ಬಳಸುವುದರಿಂದ ಅವಘಡಗಳು ಸಂಭವಿಸುತ್ತವೆ. ಚಾಲಕರು ರಸ್ತೆ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಅಗತ್ಯವಿದೆ. ಮೋಟಾರ್ ಸೈಕಲ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

ಕುಟುಂಬಗಳ ರಕ್ಷಣೆ ನಿಮ್ಮ ಮೇಲೆ ಇರುವುದರಿಂದ ಜಾಗರೂಕರಾಗಿರಬೇಕು. ಇನ್ಸುರೆನ್ಸ್ ಸೇರಿ ಸಂಚಾರದ ಸಂದರ್ಭದಲ್ಲಿ ರಸ್ತೆ ನಿಯಮ ಪಾಲಿಸಬೇಕು. ಸರಕು ವಾಹನಗಳ ಚಾಲಕರು ನಿಯಮಗಳನ್ನು ಪಾಲಿಸಬೇಕು. ಇವುಗಳಲ್ಲಿ ಸಾರ್ವಜನಿಕರ ಓಡಾಟ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಶೀಘ್ರದಲ್ಲಿ ಸರಕು ವಾಹನಗಳ ಚಾಲಕರ ಸಭೆ ಕರೆದು ಕಾನೂನು ತಿಳಿವಳಿಕೆ ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ರವೀಶ್ ಮೇಟಿ, ಗೋವಿಂದಪ್ಪ, ಚಿದಾನಂದಯ್ಯ, ಶಿಲ್ಪಾ, ಗ್ರಾಪಂ ಸದಸ್ಯರಾದ ಮೈಲಾರ ಶಿವಕುಮಾರ, ಅಳವಂಡಿ ಸಿದ್ದಾರೆಡ್ಡಿ, ಮಾಜಿ ಸದಸ್ಯ ಗೌರಜ್ಜನವರ ಗಿರೀಶ್, ಆನೇಕಲ್ ಗಿರೀಶ, ಕಿತ್ನೂರು ಮಲ್ಲಿಕಾರ್ಜುನ, ಉಪ್ಪಾರ ಶಂಕ್ರಪ್ಪ, ಮಹಮದ್, ಬಸರಕೋಡು ಶ್ರೀನಿವಾಸ, ಬೋಜಪ್ಪ, ಮೈಲಾರಪ್ಪ, ಪ್ರಕಾಶ್ ಇತರರಿದ್ದರು.