ಯುವ ಸಮುದಾಯವನ್ನು ಕೃಷಿಯತ್ತ ಸೆಳೆಯುವ ಉದ್ದೇಶದಿಂದ ಸಂಸ್ಥೆ ಅಭಿವೃದ್ಧಿಪಡಿಸಿರುವ ನವೀನ ಯಂತ್ರಗಳು ಧಾರವಾಡ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿವೆ.

ಧಾರವಾಡ: ಕೃಷಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ಹಾಗೂ ಸಮಯದ ಅಭಾವದಿಂದ ರೈತರು ಕೃಷಿಯಿಂದ ಹಿಂದೆ ಸರಿಯುತ್ತಿರುವ ಹೊತ್ತಿನಲ್ಲಿ, ಯಂತ್ರೋಪಕರಣಗಳ ಮೂಲಕ ಕೃಷಿ ಕಾರ್ಯವನ್ನು ಸರಳಗೊಳಿಸುವ ಪ್ರಯತ್ನ ಅರೇಕುರಹಟ್ಟಿಯ ಶ್ರೀನಿವಾಸ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನಿಂದ ನಡೆಯುತ್ತಿದೆ.

ಯುವ ಸಮುದಾಯವನ್ನು ಕೃಷಿಯತ್ತ ಸೆಳೆಯುವ ಉದ್ದೇಶದಿಂದ ಸಂಸ್ಥೆ ಅಭಿವೃದ್ಧಿಪಡಿಸಿರುವ ನವೀನ ಯಂತ್ರಗಳು ಧಾರವಾಡ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿವೆ.

ದೇಶದಲ್ಲಿಯೇ ಮೊದಲ ಬಾರಿಗೆ ಟ್ರ್ಯಾಕ್ಟರ್ ಚಾಲಿತ ಹೈಡ್ರಾಲಿಕ್ ಎಡೆಕುಂಟಿ ತಯಾರಿಸಿರುವ ಸಂಸ್ಥೆ, ರೈತರ ಸಮಯ ಹಾಗೂ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಒತ್ತು ನೀಡಿದೆ. ಈ ಎಡೆಕುಂಟಿಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕ 7 ಕಾರ್ಮಿಕರು ಮಾಡಬಹುದಾದ ಕೆಲಸ ನಿರ್ವಹಿಸಬಹುದಾಗಿದೆ. ರೈತರ ಅಗತ್ಯಕ್ಕೆ ಅನುಗುಣವಾಗಿ 18, 20, 24 ಹಾಗೂ 42 ಇಂಚುಗಳ ಸಾಲಿನ ಅಂತರದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಇದು ಸಹಕಾರಿಯಾಗಿದೆ.

ಯಂತ್ರೋಪಕರಣಗಳ ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ಇಲ್ಲದಿದ್ದರೆ, ಅವರ ಮನೆ ಅಥವಾ ಜಮೀನಿಗೆ ತೆರಳಿ ಬಳಕೆಯ ವಿಧಾನ ತಿಳಿಸಿಕೊಡುವ ವ್ಯವಸ್ಥೆಯನ್ನೂ ಸಂಸ್ಥೆ ಹೊಂದಿದೆ.

ಬೀಜ ಉಳಿತಾಯದ ಕೂರಿಗೆ: ಸಮಾನ ಅಂತರದ ತಾಳುಗಳು ಹಾಗೂ ಪ್ರತ್ಯೇಕ ಬಾಕ್ಸ್‌ಗಳನ್ನು ಹೊಂದಿರುವ ಸ್ವಯಂ ಚಾಲಿತ ಕೂರಿಗೆ, ಅಗತ್ಯ ಪ್ರಮಾಣದ ಬೀಜ ಬಿತ್ತಲು ನೆರವಾಗುತ್ತದೆ. ಇದರಿಂದ ಬೀಜ ಉಳಿತಾಯವಾಗುವುದರ ಜತೆಗೆ ಪ್ರತಿ ಸಸಿಗೂ ಪೋಷಕಾಂಶ ದೊರೆಯಲು ಮತ್ತು ತೇವಾಂಶ ಉಳಿಯಲು ಅನುಕೂಲವಾಗುತ್ತದೆ. ಉತ್ತಮ ಮೊಳಕೆ ಹಾಗೂ ಸದೃಢ ಬೆಳೆ ಪಡೆಯಲು ಇದು ನೆರವಾಗುತ್ತದೆ.

ಎತ್ತು ಉಳುಮೆಯ ಹದ: ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಿದರೂ ಎತ್ತುಗಳಿಂದ ಉಳುಮೆ ಮಾಡಿದಂತಹ ಹದ ದೊರೆಯುವಂತೆ ದಿಂಡಿನ ಕುಂಟೆ ರೂಪಿಸಲಾಗಿದೆ. ಹೈಡ್ರಾಲಿಕ್ ಸಹಾಯದಿಂದ ಬಳಸಬಹುದಾದ ಈ ಉಪಕರಣ 15 ಅಡಿ ವರೆಗಿನ ವಿವಿಧ ಅಳತೆಯಲ್ಲಿ ಲಭ್ಯವಿದೆ.ಹಲವು ಪ್ರಶಸ್ತಿಗಳಿಗೆ ಭಾಜನ: ಸಂಸ್ಥೆಗೆ 2016ರ ಕನ್ನಡಪ್ರಭದಿಂದ ಕೊಡಮಾಡುವ "ಅಸಾಮಾನ್ಯ ಕನ್ನಡಿಗ ", 2019ರ ಸುಕೃತ ಕೃಷಿ ತಂತ್ರಜ್ಞ, 2026ರ ಸರ್ ಎಂ. ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ, ಅಮೇರಿಕಾದ ವಾಷಿಂಗ್ಟನ್ ಡಿಜಿಟಲ್ ವಿವಿ ಯಿಂದ ಗೌರವ ಡಾಕ್ಟರೇಟ್, ಧಾರವಾಡ ಕೃಷಿ ಮೇಳದ ಹಲವು ಬಾರಿ ಒಕ್ಕಲುತನದ ಉಪಕರಣಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕೃಷಿ ಮೇಳದ 422ನೇ ಮಳಿಗೆಯಲ್ಲಿ ಯಂತ್ರೋಪಕರಣಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಮೊ: 9880197889 ಸಂಪರ್ಕಿಸಬಹುದು.

ಗುಣಮಟ್ಟಕ್ಕೆ ಆದ್ಯತೆ: ನಾವು ಬರೀ ಲಾಭದ ಉದ್ದೇಶ ಹೊಂದಿಲ್ಲ. ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇವೆ. ಆರಂಭದಿಂದ ಇಲ್ಲಿಯ ವರೆಗೆ ಯಾವುದೇ ದೂರುಗಳಿಲ್ಲದೆ ರೈತರು ನಮ್ಮ ಯಂತ್ರಗಳನ್ನು ಬಳಸುತ್ತಿದ್ದಾರೆ. ಗುಣಮಟ್ಟದ ಯಂತ್ರಗಳನ್ನು ರೈತರಿಗೆ ನೀಡುತ್ತಿರುವ ತೃಪ್ತಿ ನಮಗಿದೆ ಎಂದು ಶ್ರೀನಿವಾಸ ಜನರಲ್ ಎಂಜಿನಿಯರಿಂಗ್ ವರ್ಕ್ಸ್ ಮಾಲೀಕ ಡಾ. ಧರ್ಮಾರೆಡ್ಡಿ ಲಕ್ಕಣ್ಣವರ ತಿಳಿಸಿದರು.