ಶ್ರೇಷ್ಠ ಶಿವಾನುಭಾವಿ ಮೇದಾರ ಕೇತಯ್ಯ: ಸಿದ್ದಯ್ಯ ಸ್ವಾಮೀಜಿ
Author : KannadaprabhaNewsNetwork
Published : Feb 20 2024, 01:45 AM IST
ಮಹಾಲಿಂಗಪುರ | Kannada Prabha
Image Credit: KP
ಮಹಾಲಿಂಗಪುರ: ಶ್ರೀ ಶಂಭುಲಿಂಗ ಮಹಾಸ್ವಾಮಿಗಳ 16ನೆಯ ಪುಣ್ಯಾರಾಧನೆ ನಿಮಿತ್ತ ರನ್ನ ಬೆಳಗಲಿಯ ಶ್ರೀ ಲಕ್ಷ್ಮಿಗದ್ದುಗೆ ಗುಡಿಯಲ್ಲಿ ಆಯೋಜಿಸಿರುವ 15 ದಿನಗಳವರೆಗೆ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಶರಣ ಚರಿತಾಮೃತ ಗ್ರಂಥದ ವಿಷಯದ ಮೇಲೆ ಮೇದಾರ ಕೇತಯ್ಯನ ಕುರಿತು ತೋಳನೂರಿನ ಸಿದ್ದಯ್ಯ ಸ್ವಾಮಿಗಳು ಪ್ರವಚನ ನೀಡಿ, ಮೇದಾರ ಕೇತಯ್ಯ ತನ್ನ ತನು-ಮನ-ಧನಗಳನ್ನು ಜಂಗಮಕ್ಕೆ ಅರ್ಪಿಸಿ ಶಿವಾನುಭವ ತತ್ವಗಳನ್ನು ನಿರೂಪಿಸಿದ ಶ್ರೇಷ್ಠ ಶಿವಾನುಭಾವಿ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮೇದಾರ ಕೇತಯ್ಯ ತನ್ನ ತನು-ಮನ-ಧನಗಳನ್ನು ಜಂಗಮಕ್ಕೆ ಅರ್ಪಿಸಿ ಶಿವಾನುಭವ ತತ್ವಗಳನ್ನು ನಿರೂಪಿಸಿದ ಶ್ರೇಷ್ಠ ಶಿವಾನುಭಾವಿ ಎಂದು ತೋಳನೂರಿನ ಸಿದ್ದಯ್ಯ ಸ್ವಾಮಿಗಳು ಹೇಳಿದರು.
ಶ್ರೀ ಶಂಭುಲಿಂಗ ಮಹಾಸ್ವಾಮಿಗಳ 16ನೆಯ ಪುಣ್ಯಾರಾಧನೆ ನಿಮಿತ್ತ ರನ್ನ ಬೆಳಗಲಿಯ ಶ್ರೀ ಲಕ್ಷ್ಮಿಗದ್ದುಗೆ ಗುಡಿಯಲ್ಲಿ ಆಯೋಜಿಸಿರುವ 15 ದಿನಗಳವರೆಗೆ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಶರಣ ಚರಿತಾಮೃತ ಗ್ರಂಥದ ವಿಷಯದ ಮೇಲೆ ಮೇದಾರ ಕೇತಯ್ಯನ ಕುರಿತು ಪ್ರವಚನ ನೀಡಿದ ಅವರು, ಕೇತಯ್ಯ ಬಸವಣ್ಣನವರ ಸಮಕಾಲೀನ ಶರಣ. ಅನುಭಾವಿ, ಶುದ್ಧ ಕಾಯಕ ಜೀವಿ, ನಿತ್ಯ ದಾಸೋಹಿ, ಸದ್ಭಕ್ತ, ನಿಷ್ಠೆಯಿಂದ ಕೂಡಿದ ಆಚಾರವಂತ ಎಂದು ಹೇಳಿದರು.
ಶರಣೆ ಇಂದುಮತಿ ತಾಳಿಕೋಟಿ ಮಾತನಾಡಿ, ಕಾಯಕ ತತ್ವ ಮತ್ತು ಶರಣ ಶ್ರೀ ಮೇದಾರ ಕೇತಯ್ಯನ ಕುರಿತು ಪ್ರವಚನ ನೀಡಿ ಕೇತಯ್ಯನವರು ಬಸವಣ್ಣನವರ ಜೊತೆ ಸೇರಿ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದರು ಎಂದು ಹೇಳಿದರು.
ಶರಣ ಮಹಾದೇವ ಕಂಬಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.