ಸಾರಾಂಶ
ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ಅವರ ಹೊಣೆಗಾರಿಕೆಯು ದೊಡ್ಡದಿದೆ.
ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ, ತಿಡುವ ಕಾಯಕ ಮಾಡುವ ಮಾಧ್ಯಮ ಸಮಾಜ ಸುಧಾರಣೆಗೆ ಸಹಕಾರಿ ಎಂದು ಸಿದ್ದೇಶ್ವರ ಮಠದ ಶ್ರೀಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು, ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪತ್ರಕರ್ತರು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಜೊತೆಗೆ ನಾಗರಿಕ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ಅವರ ಹೊಣೆಗಾರಿಕೆಯು ದೊಡ್ಡದಿದೆ. ಮಾಧ್ಯಮಗಳು ಜನ ಸಮುದಾಯದ ವಿಶ್ವಾಸವನ್ನು ಗಳಿಸಬೇಕು. ಪತ್ರಕರ್ತರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಸಮಾಜ ಹಾಗೂ ಹೊರ ಜಗತ್ತಿನ ಅವಿಭಾಜ್ಯ ಕೊಂಡಿಗಳಾಗಿ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಪತ್ರಿಕೆ ಎಂದರೆ ಕೇವಲ ಸುದ್ದಿ ಸಮಾಚಾರವನ್ನು ನೀಡುವ ಮಾಧ್ಯಮವಲ್ಲ, ಜನರಿಗೆ ಶಿಕ್ಷಣ, ಮನರಂಜನೆ, ಕ್ರೀಡೆ ಹಾಗೂ ಜಾಗೃತಿಗಳನ್ನು ನೀಡುವ ಕೆಲಸ ಮಾಡುತ್ತಿವೆ. ಜನರ ಸಮಸ್ಯೆಗೆ ಒಗೊಟ್ಟು ಸೂಕ್ತ ಪರಿಹಾರ ದೊರಕಿಸುವ ಕೆಲಸ ಮಾಡುತ್ತಿವೆ. ಜ್ಞಾನಾರ್ಜನೆಯಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಹಾಗಾಗಿ ಮಕ್ಕಳು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜಾನಪದ ಕಾರ್ಯಕ್ರಮ ನಡೆಯಿತು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಉದ್ಯಮಿ ಚೌಡಪ್ಪ ಜಂತ್ಲಿ, ವೈದ್ಯಾಧಿಕಾರಿ ಡಾ. ರಮೇಶ ಮೂಲಿಮನಿ, ಗವಿಸಿದ್ದಯ್ಯ, ಅನ್ವರ ಗಡಾದ, ಶಿವಪ್ರಕಾಶ ಇನಾಮದಾರ, ಚಂದ್ರಶೇಖರ ದೊಡ್ಡಮನಿ, ಹನುಮಂತ ಲಮಾಣಿ, ಮಲ್ಲಪ್ಪ, ತೋಟಯ್ಯ, ಷಣ್ಮುಖಯ್ಯ ತೋಟದ, ಪಿಡಿಓ ಕೊಟ್ರಪ್ಪ ಅಂಗಡಿ, ಮೈಲಾರಪ್ಪ ಪುರದ, ವೀರಭದ್ರಯ್ಯ, ನೀಲಪ್ಪ ಹಕ್ಕಂಡಿ, ಜೂನುಸಾಬ, ಬಿ.ಎನ್. ಹೊರಪೇಟಿ, ಸುರೇಶ ಹಾಗೂ ಇತರರು ಇದ್ದರು.