ನಾಗಮಂಗಲದಲ್ಲಿ ಮೀಡಿಯಾ ನಾಟಕ ಪ್ರದರ್ಶನ

| Published : Nov 25 2025, 01:45 AM IST

ಸಾರಾಂಶ

ಕನ್ನಡ ಸಂಘ ವಿಶ್ವಸ್ಥ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ 17ನೇ ನಾಗರಂಗ ನಾಟಕೋತ್ಸವದ ಮೂರನೇ ದಿನ ನ.25ರ ಸಂಜೆ 7.15ಕ್ಕೆ ಹೆಗ್ಗೋಡು ನೀನಾಸಂ ಪ್ರಸ್ತುತ ಪಡಿಸುವ ಕೊಡಗು ಮಂಜು ನಿರ್ದೇಶನದ ‘ಮೀಡಿಯಾ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಾಗಮಂಗಲ:

ಪಟ್ಟಣದ ಕನ್ನಡ ಸಂಘ ವಿಶ್ವಸ್ಥ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ 17ನೇ ನಾಗರಂಗ ನಾಟಕೋತ್ಸವದ ಮೂರನೇ ದಿನ ನ.25ರ ಸಂಜೆ 7.15ಕ್ಕೆ ಹೆಗ್ಗೋಡು ನೀನಾಸಂ ಪ್ರಸ್ತುತ ಪಡಿಸುವ ಕೊಡಗು ಮಂಜು ನಿರ್ದೇಶನದ ‘ಮೀಡಿಯಾ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಸಾರಾಂಶ: ಪ್ರಾಚೀನ ಗ್ರೀಕ್ ರುದ್ರ ನಾಟಕವಿದು. ತನ್ನ ಅಣ್ಣನ ಮಗ ಜೇಸನ್ನನಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ರಾಜತ್ವ ತಪ್ಪಿಸಿ ಆತನನ್ನು ಕೊಲೆ ಮಾಡಲು ಯತ್ನಿಸುವ ಪೆಲಿಯಾಸನೇ ಕೊನೆಗೆ ಜೇಸನ್ನನ ಮಡದಿ ಮೀಡಿಯಾಳ ಬುದ್ದಿವಂತಿಕೆ ಹಾಗೂ ಸಂಚಿನಿಂದ ಹತ್ಯೆಯಾಗುವುದು ಕುತೂಹಲಕಾರಿ. ಪೆಲಿಯಾಸ್ ಹತ್ಯೆಯಿಂದ ಗಡೀಪಾರಾದ ಜೇಸನ್ ಮತ್ತು ಮೀಡಿಯಾ ಕಾರಂಥ್‌ನಲ್ಲಿ ಆಶ್ರಯ ಪಡೆದು ನಂತರ ಅಲ್ಲಿಯ ರಾಜಕುಮಾರಿ ಗ್ಲಾಷೆಯನ್ನು ಜೇಸನ್ ಮದುವೆಯಾದಾಗ ಕ್ರೋಧಗೊಂಡ ಮೀಡಿಯಾ ಜೇಸನ್, ಗ್ಲಾಷೆ ಹಾಗೂ ಕಾರಂಥ್ ಮೇಲೆ ಸೇಡು ತೀರಿಸಿಕೊಳ್ಳುವ ಕಥೆ ನಾಟಕದ ರೂಪ ಪಡೆದಿದೆ.

ನ.26 ರಂದು ಸಂವಿಧಾನೋತ್ಸವ, ಬೃಹತ್ ಜಾಗೃತಿ ಮೆರವಣಿಗೆ: ಎಂ.ವೆಂಕಟೇಶ್

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ನ.26ರಂದು ಸಂವಿಧಾನೋತ್ಸವ ಹಾಗೂ ಭಾರತದ ಸಂವಿಧಾನ ಬೃಹತ್ ಜಾಗೃತಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ.ವೆಂಕಟೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಜಾಗೃತಿ ಮೆರವಣಿಗೆ ಆರಂಭವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಂಪನ್ನಗೊಳ್ಳಲಿದೆ ಎಂದರು.

ಸಂವಿಧಾನದ ಸ್ತಬ್ಧ ಚಿತ್ರ ಹಾಗೂ ಕಲಾತಂಡಗಳೊಂದಿಗೆ ಸಂವಿಧಾನ ಜಾಗೃತಿ ಮೆರವಣಿಗೆ ನಡೆಯಲಿದೆ. ಸಂಜೆ 5.30ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮೈತ್ರೇಯ ಗ್ಲೋಬಲ್ ಅಕಾಡೆಮಿ ನಿರ್ದೇಶಕ ಡಾ.ಶ್ರೀನಿವಾಸ್ ಜಿ., ಸಂವಿಧಾನ ಕುರಿತು ಉಪನ್ಯಾಸ ನೀಡುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಶಾಸಕ ಪಿ.ರವಿಕುಮಾರ್ ಸಮಾರಂಭ ಉದ್ಘಾಟಿಸುವರು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮುಖಂಡರಾದ ಸುನಂದಾ ಜಯರಾಂ, ಪ್ರೊ.ಜಯಪ್ರಕಾಶಗೌಡ, ಪ್ರೊ.ಹುಲ್ಕೆರೆ ಮಹದೇವು, ಕುಮಾರಿ, ಮೊಹಮ್ಮದ್ ಮುಕ್ತಿಯಾರ್, ಫಾ. ಆಂಡ್ರೂಸ್, ಫಾ. ಮರಿರಾಜ್, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.

ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ, ಸಂವಿಧಾನ ಕಿರು ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ಮೊಹಮ್ಮದ್ ತಾಹೇರ್, ಎಂ.ಸಿ.ಲಂಕೇಶ್, ನರಸಿಂಹಮೂರ್ತಿ, ವೈ.ಥಾಮಸ್ ಬೆಂಜಮಿನ್ ಇದ್ದರು.