ಸಾರಾಂಶ
ನಮ್ಮ ಸಮಾಜದಲ್ಲಿ ಪ್ರತಿ ದಿವಸ ಮಾಧ್ಯಮ ಕ್ಷೇತ್ರವು ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುವುದರಿಂದ ಇಂದು ಸಮಾಜ ಬಹಳಷ್ಟು ಸುಧಾರಣೆಯಾಗಿದೆ ಎಂದು ಮಂಗಳೂರಿನ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮ ಕುಮಾರಿ ವಿಶ್ವೇಶ್ವರ ಅಕ್ಕನವರು ಹೇಳಿದರು.
ನರಗುಂದ: ನಮ್ಮ ಸಮಾಜದಲ್ಲಿ ಪ್ರತಿ ದಿವಸ ಮಾಧ್ಯಮ ಕ್ಷೇತ್ರವು ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುವುದರಿಂದ ಇಂದು ಸಮಾಜ ಬಹಳಷ್ಟು ಸುಧಾರಣೆಯಾಗಿದೆ ಎಂದು ಮಂಗಳೂರಿನ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮ ಕುಮಾರಿ ವಿಶ್ವೇಶ್ವರ ಅಕ್ಕನವರು ಹೇಳಿದರು.
ಅವರು ಸೋಮವಾರ ಪಟ್ಟಣದ ಈಶ್ವರೀ ವಿಶ್ವವಿದ್ಯಾಲಯದ ಶಾಖೆಯಲ್ಲಿ ರಕ್ಷಾ ಬಂಧನ ನಿಮಿತ್ತ ತಾಲೂಕು ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಪ್ರಜಾಪ್ರಭುತ್ವ ದೇಶವಾಗಿದ್ದರಿಂದ ಮಾಧ್ಯಮ ಕ್ಷೇತ್ರವು ಪ್ರತಿಯೊಂದು ಕ್ಷೇತ್ರದಲ್ಲಿ ನಡೆಯುವ ಅನ್ಯಾಯವನ್ನು ಎಲ್ಲಾ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತದೆ ಎಂದರು.ಇಂದಿನ ಆಧುನಿಕ ಯುಗದಲ್ಲಿ ಎಲ್ಲಿ ನೋಡಿದರು ಮೋಸ, ದರೋಡೆ, ಅನಾಚಾರ ನಡೆಯುತ್ತಿವೆ. ಆದ್ದರಿಂದ ಇಂದಿನ ಸಮಾಜ ಜನರು ಪರಮಾತ್ಮನ ನಾಮ ಸ್ಮರಣೆ ಮಾಡಿದರೆ ನಮಗೆ ಪರಮಾತ್ಮ ನೆರವು ನೀಡುವನು, ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಪರಮಾತ್ಮನ ಜ್ಞಾನ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ನರಗುಂದ ಈಶ್ವರೀ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರು ಮಾತನಾಡಿ, ರಕ್ಷ ಬಂಧನ ಹಬ್ಬವು ಬಹಳ ಅರ್ಥವನ್ನು ಹೊಂದಿದೆ. ಈ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ನಾವು ಆಚರಿಸಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಈಶ್ವರೀ ವಿಶ್ವವಿದ್ಯಾಲಯದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿ.ಎನ್. ಕೊಳ್ಳಿಯವರ, ವೀರನಗೌಡ ವೀರನಗೌಡ್ರ, ಅಡಿಯಪ್ಪ ಬಾಳಕಾಯಿ, ಪತ್ರಕರ್ತರಾದ ಉಮೇಶ ಬೋಳಶಟ್ಟಿ, ಡಾ. ಬಸವರಾಜ ಹಲಕುರ್ಕಿ, ಸಿ.ಬಿ.ಸುಬೇದಾರ, ಎಸ್.ಜಿ. ತೆಗ್ಗಿನಮನಿ, ಪ್ರಭು ಗುಡಾರದ, ರಾಜೇಸಾಬ ಹೊಸಮನಿ, ಈಶ್ವರೀ ವಿಶ್ವವಿದ್ಯಾಲಯದ ಪರಿವಾರದವರು ಇದ್ದರು.