ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಬೆಮೆಲ್ ಕಾರ್ಖಾನೆಯಲ್ಲಿ ದಿನಗೂಲಿ ನೌಕರರನ್ನು ಕಡೆಗಣೆಸಿ ಉತ್ತರ ಭಾರತದ ಕಾರ್ಮಿರನ್ನು ನೇಮಕ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬೆಮೆಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೨,೫೦೦ ಕಾರ್ಮಿಕರು ಟೂಲ್ಸ್‌ಡೌನ್ ಮಾಡಿ ಬೆಮೆಲ್ ಕಾರ್ಖಾನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು, ದಿನಗೂಲಿ ನೌಕರರನ್ನು ಕಾಯಂಗೊಳಿಸುವವರಿಗೆ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಸದ ಮಲ್ಲೇಶ್‌ಬಾಬು, ಶಾಸಕಿ ರೂಪಕಲಾಶಶಿಧರ್, ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಅಕ್ರಂಪಾಷ ಬೆಮೆಲ್ ಕಾರ್ಖಾನೆಗೆ ಭೇಟಿ ನೀಡಿ ದಿನಗೂಲಿ ನೌಕರರ ಮನವೊಲಿಸುವಲ್ಲಿ ಯಶಸ್ವಿಯಾದರು.ಆಗಸ್ಟ್ ೩೦ರೊಳಗೆ ಸಭೆಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಬೆಮೆಲ್‌ನ ಸಿಎಂಡಿ ಶಾಂತನುರಾಯ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಮೆಲ್‌ನ ಕಾರ್ಖಾನೆಯಲ್ಲಿ ೨೦ ವರ್ಷದಿಂದ ದುಡಿಯುತ್ತಿರುವ ಕಾರ್ಮಿರನ್ನು ಕಾಯಂಗೊಳಿಸುವ ನಿಟ್ಟನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಂಸದ ಮಲ್ಲೇಶ್‌ಬಾಬು ದಿನಗೂಲಿ ನೌಕರರ ಸಂಘದ ಅಧ್ಯಕ್ಷರ ಜೊತೆ ಮಾತುಕತೆ ನಡೆಸುವ ಮೂಲಕ ಶನಿವಾರ ಮತ್ತು ಭಾನುವಾರ ಮುಷ್ಕರಕ್ಕೆ ತೆರೆ ಎಳೆದರು.ಕೇಂದ್ರದ ಮಲತಾಯಿ ಧೋರಣೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬೆಮೆಲ್ ಕಾರ್ಖಾನೆಯಲ್ಲಿ ಸ್ಥಳೀಯವಾಗಿ ೨೦ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿರನ್ನು ಕಡೆಗಣಿಸಿ ಹಿಂದಿ ಭಾಷಿಗರಿಗೆ ಕಾಯಂ ನೌಕರಿ ನೀಡಿರುವ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಮೆಲ್ ಆಡಳಿತ ಮಂಡಳಿಯ ವಿರುದ್ದ ಅಕ್ರೋಶ ಹೊರ ಹಾಕಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಮೋದಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಕೂಡಲೇ ಬೆಮೆಲ್‌ನ ಆಡಳಿತ ಮಂಡಳಿಯವರು ಸ್ಥಳೀಯರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಜೊತೆಗೂಡಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಆ.೩೦ರೊಳಗೆ ಸಭೆ ಸೇರಿ ದಿನಗೂಲಿ ನೌಕರರ ಸಮಸ್ಯೆ ಬಗೆಹರಿಸಲಾಗುವುದೆಂದು ತಿಳಿಸಿದರು.ಮಾನವೀಯತೆ ಮರೆತ ಬೆಮೆಲ್ ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ದಿನಗೂಲಿ ನೌಕರರಿಗೆ ಕನಿಷ್ಟ ಒಂದು ಗ್ಲಾಸ್ ಕುಡಿವ ನೀರು ಸಹ ಕೊಟ್ಟಿಲ್ಲ, ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರ್ಮಿಕರಿಗೆ ಬೆಮೆಲ್ ಆಡಳಿತ ಮಂಡಳಿ ಅನ್ಯಾಯ ಮಾಡಿರುವುದಾಗಿ ಎಸ್.ಎನ್.ನಾರಾಯಣ್ವಸ್ವಾಮಿ ಅಕ್ರೋಶ ವ್ಯಕ್ತಪಡಿಸಿ ಕಾಯಂ ನೌಕರರಿಗೆ ನೀಡುತ್ತಿರುವ ಸೌಲತ್ತುಗಳನ್ನು ದಿನಗೂಲಿ ನೌಕರರಿಗೂ ನೀಡುವಂತೆ ಬೆಮೆಲ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.ಸ್ಥಳೀಯರಿಗೆ ಉದ್ಯೋಗ ಅವಕಾಶ ಸ್ಥಳಿಯವಾಗಿ ಬೆಮೆಲ್ ಕಾರ್ಖಾನೆಯಲ್ಲಿ ತರಭೇತಿ ಪಡೆದುಕೊಂಡು ಕಳೆದ ೨೦ ವರ್ಷಗಳಿಂದ ಬೆಮೆಲ್ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿರನ್ನು ಕಾಯಂ ನೌಕರರನ್ನಾಗಿ ಪರಿಗಣಿಸುವಂತೆ ಆಗಸ್ಟ್ ೩೦ ರೊಳಗೆ ಬೆಮೆಲ್ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಒತ್ತಾಯ ಮಾಡುವುದಾಗಿ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.ಬೆಮೆಲ್ ಖಾಯಂ ನೌಕರರಿಗೆ ನೀಡುತ್ತಿರುವ ಸೌಲತ್ತುಗಳನ್ನು ದಿನಗೂಲಿ ನೌಕರಿಗೂ ನೀಡಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಕಾರ್ಮಿಕ ಮುಖಂಡರಿಗೆ ಶಾಸಕರು ಭರವಸೆ ನೀಡಿದ ಹಿನ್ನಲೆಯಲ್ಲಿ ಮುಷ್ಕರ ವಾಪಸ್ಸು ಪಡೆದುಕೊಂಡರು.
ನಾಲ್ವರು ಕಾರ್ಮಿಕರು ಆಸ್ಪತ್ರೆಗೆಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ನಾಲ್ವರು ಕಾರ್ಮಿಕರು ಅಸ್ಥವ್ಯಸ್ಥಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಕಾರ್ಮಿರನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಸ್ದಾರೆ.ಸ್ಥಳದಲ್ಲಿ ಉಪವಿಭಾಗಧಿಕಾರಿ ಡಾ.ಮೈತ್ರಿ, ಕಾರ್ಮಿಕ ನೀರಿಕ್ಷಕಿ ಸಬಾನ ಅಜ್ಮಿ, ತಹಸೀಲ್ದಾರ್ ನಾಗವೇಣಿ, ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ವಾರ್ಡ್‌ನ ಸದಸ್ಯರಾದ ಮಾಣಿಕ್ಯಂ ಇದ್ದರು.