ಸಾರಾಂಶ
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಕಟಿಸಿರುವುದು ಐತಿಹಾಸಿಕ ಘೋಷಣೆ. ಇದು ಜನತೆ ಕೂಡ ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುವ ಸಂಗತಿಯಾಗಿದೆ. ನನ್ನ ಜೀವನದಲ್ಲೂ ಇದು ಬಹುಕಾಲ ನೆನಪಿನಲ್ಲಿ ಉಳಿಯುವ ಸಾಧನೆಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರನ್ನು ನೆನೆಯುತ್ತೇನೆ. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿಸಿದ್ದೇನೆ. ಎರಡೇ ವರ್ಷದಲ್ಲಿ ನನ್ನ ಬೇಡಿಕೆಯನ್ನು ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಈಡೇರಿಸಿದ್ದಾರೆ. ಇದು ನನ್ನ ಕನಸಿನ ಕೂಸಾಗಿದ್ದು, ಸರ್ಕಾರ ನುಡಿದಂತೆ ನಡೆದಿದೆ ಎನ್ನುವುದು ಹೆಮ್ಮೆ ತಂದಿದೆ.-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು--------ದ.ಕ.ಜಿಲ್ಲೆಗೆ ಐತಿಹಾಸಿಕ ಬಜೆಟ್ದ.ಕ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಮಂಡಿಸಿದ ಐತಿಹಾಸಿಕ ಬಜೆಟ್ ಆಗಿದೆ. ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ವೈದ್ಯಕೀಯ ಕಾಲೇಜ್ ಮಂಜೂರು, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಜಲಸಾರಿಗೆ, ಮೀನುಗಾರಿಕಾ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಗಳಿಗೆ ಭರಪೂರ ಅನುದಾನ ನೀಡಿ ಜಿಲ್ಲೆಯ ಸಮಗ್ರಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಉತ್ತಮ ಬಜೆಟ್.-ಕೆ.ಹರೀಶ್ ಕುಮಾರ್, ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ-------------ನಿರೀಕ್ಷೆ ಪೂರೈಸಲು ವಿಫಲ ಬಜೆಟ್‌ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ನಿಖರವಾದ ಯೋಜನೆಗಳ ಘೋಷಣೆ ಮಾಡದೆ, ಅವುಗಳ ಅನುದಾನ ಕುರಿತು ಸ್ಪಷ್ಟತೆ ನೀಡದೆ, ಕೇವಲ ಆಕರ್ಷಕ ಘೋಷಣೆಗಳ ಮೂಲಕ ಜನರನ್ನು ಮೋಸಗೊಳಿಸುವ ಪ್ರಯತ್ನ ಮಾಡಿದ್ದಾರೆ.ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸಲು ಹೆಚ್ಚಿನ ಒತ್ತನ್ನು ನೀಡಿದರೂ, ಶಿಕ್ಷಣ,ಕೈಗಾರಿಕೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸೂಕ್ತ ಅನುದಾನ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಬೇಕಾದ ಕೈಗಾರಿಕಾ ಬೆಂಬಲವಿಲ್ಲದೆ, ರೈತರ ನಿರೀಕ್ಷೆಗಳನ್ನು ಸಂಪೂರ್ಣ ನಿರಾಸೆಗೆ ತಳ್ಳಲಾಗಿದೆ.-ಸತೀಶ್ ಕುಂಪಲ, ಅಧ್ಯಕ್ಷರು, ಬಿಜೆಪಿ ದ.ಕ.-----------------ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನಂತೆ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಎಲ್ಲ ಜನರ ಹಿತ ಕಾಯಬೇಕಾದ ಮುಖ್ಯಮಂತ್ರಿ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟ್ಯಾಂತರ ರು. ಘೋಷಿಸಿದ್ದಾರೆ. ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಡಕೆ ಬೆಳೆಗಾರರ ಸಮಸ್ಯೆಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ. ಮೀನುಗಾರಿಕಾ ವಲಯವನ್ನು ಕಡೆಗಣಿಸಲಾಗಿದೆ. ಕೆಲವು ಯೋಜನೆಗಳ ಬಗ್ಗೆ ಉಲ್ಲೇಖವಿದ್ದರೂ ಅದು ಬಜೆಟ್ ಭಾಷಣಕ್ಕೆ ಸೀಮಿತವಾಗಲಿದೆ. ಕೇವಲ ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸಲು ಮಂಡಿಸಿದ ಬಜೆಟ್ ಇದಾಗಿದೆ.-ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು, ದ.ಕ.-----------ಆದ್ಯತೆಯ ಉತ್ತಮ ಬಜೆಟ್‌ಮೂಲಸೌಕರ್ಯ, ಕೈಗಾರಿಕೆ, ಸಾಮಾಜಿಕ ಕಲ್ಯಾಣಗಳಿಗೆ ಆದ್ಯತೆ ನೀಡಿದ ಉತ್ತಮ ಬಜೆಟ್. ಮೂಲಸೌಕರ್ಯ ಜೊತೆಗೆ ರಸ್ತೆ ಸಂಪರ್ಕ, ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ, ಪ್ರವಾಸೋದ್ಯಮ ಮತ್ತು ಕರಾವಳಿ ಅಭಿವೃದ್ಧಿ, ಕೃಷಿ, ಮೀನುಗಾರಿಕೆ, ನಗರಾಭಿವೃದ್ಧಿ, ಇ ಆಡಳಿತ, ಪ್ರಾಕೃತಿಕ ವಿಕೋಪ ನಿರ್ವಹಣೆಗಳಿಗೆ ಅನುದಾನ ನಿಗದಿಪಡಿಸಲಾಗಿದೆ. ಎಲ್ಲ ದೃಷ್ಟಿಯಿಂದಲೂ ಇದೊಂದು ಆಶಾದಾಯಕ ಬಜೆಟ್.-ಆನಂದ ಜಿ.ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರು----------ಬಹುಸಂಖ್ಯಾತರ ಕಡೆಗಣನೆಬಹುಸಂಖ್ಯಾತರನ್ನು ಕಡೆಗಣಿಸಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಓಲೈಸುವ ಸಿದ್ದರಾಮಯ್ಯರವರ ಈ ಬಜೆಟ್ ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನು ಪ್ರತಿಬಿಂಬಿಸುವ ಬಜೆಟ್. ರಾಜ್ಯದ ಬಹು ಸಂಖ್ಯಾತರಿಗೆ ಅನ್ಯಾಯ ಮಾಡಿದ ಬಜೆಟ್. ಕೃಷಿಕರಿಗೆ ಮತ್ತು ಶ್ರಮಿಕ ವರ್ಗಕ್ಕೆ ಈ ಬಜೆಟ್ ನಿರಾಶಾದಾಯಕ. ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣದ ಮೂಲಗಳನ್ನು ಸ್ಪಷ್ಟವಾಗಿ ಎಲ್ಲಿಯೂ ವಿವರಿಸಿಲ್ಲ.- ನಂದನ್ ಮಲ್ಯ ಉಳ್ಳಾಲ, ಜಿಲ್ಲಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ದ.ಕ.------------ಓಲೈಕೆ ರಾಜಕಾರಣದ ಬಜೆಟ್‌ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ ಯೋಜನೆಯಡಿ 1,000 ಕೋಟಿ ರು. ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಜಾತ್ಯತೀತ ದೇಶದಲ್ಲಿ ಒಂದು ಜಾತಿಯನ್ನು ಪ್ರತ್ಯೇಕಿಸಿ ಕೋಮು ದ್ವೇಷದ ಭಾವನೆ ಪ್ರಚೋದಿಸುವ ಕಾರ್ಯಕ್ರಮ ಜಾರಿಗೊಳಿಸುವುದಕ್ಕೆ ಹೊರಟಿದೆ. ಈ ಹಿಂದೆ ಮತೀಯ ಶಕ್ತಿಗಳು ಬೆಂಗಳೂರು ಗಲಭೆ ನಡೆಸಿ ಕಾನೂನನ್ನು ಕೈಗೆತ್ತಿಕೊಂಡು ಹೇಗೆ ಠಾಣೆಗಳ ಮೇಲೆಯೇ ದಾಳಿ ನಡೆಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಿರುವಾಗ, ಸಿದ್ದರಾಮಯ್ಯನವರ ಈ ರೀತಿಯ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಕರ್ನಾಟಕದ ಶಾಂತಿ, ಪ್ರಗತಿ, ಸಮೃದ್ಧಿಗೆ ದೊಡ್ಡ ಆತಂಕ ಸೃಷ್ಟಿಸಲಿದೆ.-ಕ್ಯಾ.ಬ್ರಿಜೇಶ್ ಚೌಟ, ಸಂಸದರು, ದ.ಕ.-------------‘ಈಗ ಬರ್ಕೊ-ಆಮೇಲೆ ಹರ್ಕೊ’ ಬಜೆಟ್‌ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ ಎಂದು ಬಜೆಟ್ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೊಂದು ಘೋಷಣೆ ಕೇಳುತ್ತಿದ್ದರೆ ‘ಈಗ ಬೇಕಾದ್ದನ್ನು ಬರೆದುಕೊಂಡು ಘೋಷಣೆ ಮಾಡೋದು, ಆಮೇಲೆ ಅದನ್ನು ಹರಿದು ಹಾಕೋದು’ ಎನ್ನುವಂತಿದೆ. ಓಲೈಕೆ ರಾಜಕಾರಣದ ಕರಿಛಾಯೆ ಇಲ್ಲೂ ಎದ್ದು ಕಾಣುತ್ತಿದ್ದು, ಹಿಂದುಳಿದ, ಶೋಷಿತ ವರ್ಗಗಳ ಕಡೆಗಣನೆ ಮಾಡಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ ನಿಗಮಕ್ಕೆ ಈ ಬಾರಿಯೂ ಬಿಡಿಗಾಸು ನೀಡದೇ ಕರಾವಳಿ ಅಭಿವೃದ್ಧಿಯ ಪಾಲಿನ ನೀರಸ ಬಜೆಟ್ ಮಂಡಿಸಿದ್ದು ದುರದೃಷ್ಟಕರ.-ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ-----------ವಿತ್ತೀಯ ಆರೋಗ್ಯ ಐಸಿಯುನಲ್ಲಿದೆರಾಜ್ಯ ಬಜೆಟ್ ನೋಡುವಾಗ ರಾಜ್ಯದ ವಿತ್ತೀಯ ಆರೋಗ್ಯ ಐಸಿಯುನಲ್ಲಿದೆ ಎಂಬಂತೆ ಭಾಸವಾಗುತ್ತಿದೆ. 1 ಲಕ್ಷ ಕೋಟಿ ರು.ಗೆ ಮಿಕ್ಕಿ ಸಾಲ, 19 ಸಾವಿರ ಕೋಟಿ ರು. ಕೊರತೆ ಬಜೆಟ್ ಮಂಡಿಸಲಾಗಿದೆ. ದಕ್ಷಿಣ ಕನ್ನಡ, ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಶಿಕ್ಷಣ, ಆರೋಗ್ಯ, ಕೃಷಿಗೆ ಇಟ್ಟಿರುವ ಬಜೆಟ್ ಅತೀ ಕಡಿಮೆ. ಹೀಗಾದರೆ ಅಭಿವೃದ್ಧಿ ಮರೀಚಿಕೆ.-ಡಾ.ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ------------ಬಹುಸಂಖ್ಯಾತರಿಗೆ ಅನ್ಯಾಯಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿನಂತೆ ಬಹುಸಂಖ್ಯಾತರನ್ನು ಪೂರ್ತಿ ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆಯನ್ನು ಈ ಬಜೆಟ್‌ನಲ್ಲೂ ಮುಂದುವರಿಸಿರುವುದು ಸ್ಪಷ್ಟವಾಗಿದೆ. 4 ಲಕ್ಷ 9 ಸಾವಿರ ಕೋಟಿ ರು.ಗಳ ಬಜೆಟ್‌ನಲ್ಲಿ 7 ಲಕ್ಷ 64 ಸಾವಿರದ 755 ಕೋಟಿ ರು. ಸಾಲದ ಹೊರೆ ಆತಂಕಕಾರಿ. ಕೈಗಾರಿಕಾ ಕ್ಷೇತ್ರವನ್ನು ಪೂರ್ಣ ಕಡೆಗಣಿಸಿರುವುದು ಅಕ್ಷಮ್ಯ. ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿರುವುದು ಖಂಡನೀಯ. ಸ್ವಲ್ಪ ಸಂಭಾವನೆ ಹೆಚ್ಚಿಸಿರುವುದು ಸಮಾಧಾನಕರ. ಕೃಷಿ ವಿಶ್ವವಿದ್ಯಾಲಯ, ಕೃಷಿ ಕಾಲೇಜಿನ ಸ್ಥಾಪನೆಯ ಘೋಷಣೆ ಸ್ವಾಗತಾರ್ಹ. ಕರಾವಳಿ ತೀರದ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರದ ಕುರಿತು ಚಿಂತನೆ ಸ್ವಾಗತಾರ್ಹ. ಅಲ್ಪಸಂಖ್ಯಾತರನ್ನು ಓಲೈಸುವ ಈ ಬಜೆಟ್‌ನಲ್ಲಿ ರಾಜ್ಯದ ಬಹುಸಂಖ್ಯಾತರಿಗೆ ಅನ್ಯಾಯ ಮಾಡಲಾಗಿದೆ.- ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯರು.--------------ಸಾಮಾಜಿಕ ನ್ಯಾಯದ ಬಜೆಟ್‌ಎಲ್ಲ ಜಾತಿ, ಧರ್ಮದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನ ಆಯವ್ಯಯವನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮೂಲಕ ಇಲ್ಲಿಯೇ ಉದ್ಯೋಗ ಸೃಷ್ಟಿಸಲು ಅವಕಾಶ ನೀಡಲಾಗಿದೆ. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಪೂರಕವಾಗಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಕರಾವಳಿಯ ಹೆಲ್ತ್ ಟೂರಿಸಂಗೂ ಪೂರಕ. ಮೀನುಗಾರರ ಆರ್ಥಿಕ ಸುಧಾರಣೆಗೆ ಮೀನುಗಾರಿಕಾ ನೀತಿ ಘೋಷಿಸಿರುವುದು ಮೀನುಗಾರರಿಗೆ ಅನುಕೂಲವಾಗಿದೆ. ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವ ಮೂಲಕ ಸರ್ವರ ಹಿತ ಕಾಯಲು ಮುಖ್ಯಮಂತ್ರಿ ಮುಂದಾಗಿದ್ದಾರೆ.-ಪದ್ಮರಾಜ್ ಆರ್. ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ-----------ಎಲ್ಲ ವರ್ಗಗಳ ಏಳಿಗೆಯ ಪೂರಕ ಬಜೆಟ್‌ಈ ಬಜೆಟ್ ಜನಸಾಮಾನ್ಯರ ಸಮತೋಲನದ ಎಲ್ಲ ವರ್ಗಗಳ ಏಳಿಗೆಯ ಪೂರಕ ಬಜೆಟ್. ಸಮಾಜದ ಎಲ್ಲ ವರ್ಗಗಳ ಜನರಿಗೆ ಪಂಚ ಗ್ಯಾರಂಟಿಗಳಿಗೆ 51 ಕೋಟಿ ರು. ಮೀಸಲಿಡುವ ಮೂಲಕ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಭರವಸೆಯಿದೆ. ರಾಜ್ಯದ ಎಲ್ಲ ವರ್ಗಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಹಾಸ್ಟೆಲ್‌ಗಳಿಗೆ ರೈತರಿಗೆ, ಕಾರ್ಮಿಕರಿಗೆ, ಅಲ್ಪಸಂಖ್ಯಾತರಿಗೆ ಎಲ್ಲ ವರ್ಗಗಳ ಜನರ ಅಭಿವೃದ್ದಿ ಮತ್ತು ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ.- ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರು---------------ಕಾರ್ಮಿಕರ, ಬಡವರ ನಿರ್ಲಕ್ಷ್ಯಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕಾರ್ಮಿಕರು ಮತ್ತು ಬಡವರು ನಿರಾಶರಾಗಿದ್ದಾರೆ. ಅಂಗನವಾಡಿ, ಬಿಸಿಯೂಟ ಮುಂತಾದ ಕಾರ್ಮಿಕರಿಗೆ ಕೇವಲ 1 ಸಾವಿರ ರು. ಏರಿಕೆ ಮಾಡಿದ್ದು ನಿರಾಶೆಗೆ ಕಾರಣವಾಗಿದೆ. ಕಟ್ಟಡ ಕಾರ್ಮಿಕರಿಗೆ ಕೆಲವು ಸವಲತ್ತು ಹೆಚ್ಚಿಸಿದರೂ ಈಗಿರುವ ಸವಲತ್ತು ಸರಿಯಾಗಿ ಸಂದಾಯವಾಗುತ್ತಿಲ್ಲ. ಉಳಿದಂತೆ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ. ವೃತ್ತಿಪರ ತೆರಿಗೆಯನ್ನು ಹೆಚ್ಚಿಸಿ ಕಾರ್ಮಿಕರ ಮೇಲೆ ಮತ್ತೊಂದು ಹೊರೆ ಹೊರಿಸಲಾಗಿದೆ.-ಬಿ.ಶೇಖರ, ಜಿಲ್ಲಾ ಕಾರ್ಯದರ್ಶಿ, ಸಿಪಿಐ ದ.ಕ.