ಕಳೆದ ಮೂರು ವರ್ಷಗಳ ಹಿಂದೆ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಸಿದ್ದೇಶ್ವರ ಲೋಕ ಕಲ್ಯಾ ಣ ಟ್ರಸ್ಟ್ ಅಡಿಯಲ್ಲಿ ಆರಂಭವಾಗಿರುವ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳ ಆಗರವೇ ಇದೆ. ಈ ಭಾಗದಲ್ಲಿ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡುವ ಆಸ್ಪತ್ರೆ ಜೆಎಸ್‌ಎಸ್ ಆಸ್ಪತ್ರೆ ಎಂದು ಶಾಸಕ ಹಾಗೂ ಟ್ರಸ್ಟ್ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ಮೂರು ವರ್ಷಗಳ ಹಿಂದೆ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಸಿದ್ದೇಶ್ವರ ಲೋಕ ಕಲ್ಯಾ ಣ ಟ್ರಸ್ಟ್ ಅಡಿಯಲ್ಲಿ ಆರಂಭವಾಗಿರುವ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳ ಆಗರವೇ ಇದೆ. ಈ ಭಾಗದಲ್ಲಿ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡುವ ಆಸ್ಪತ್ರೆ ಜೆಎಸ್‌ಎಸ್ ಆಸ್ಪತ್ರೆ ಎಂದು ಶಾಸಕ ಹಾಗೂ ಟ್ರಸ್ಟ್ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿರುವ ಜೆಎಸ್‌ಎಸ್ ಆಸ್ಪತ್ರೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ 24×7 ಮಾದರಿ ಸಿದ್ದೇಶ್ವರ ಮೆಡಿಕಲ್ ಆರಂಭಿಸಲಾಗಿದ್ದು, ಶೇ.20 ವರೆಗಿನ ರಿಯಾಯಿತಿ ದರದಲ್ಲಿ ಜಿಲ್ಲೆಯಲ್ಲಿ 15 ಶ್ರೀ ಸಿದ್ದೇಶ್ವರ ಔಷಧ ಅಂಗಡಿಗಳು ಆರಂಭವಾಗಿವೆ. ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎನ್‌ಐಸಿಯು ಆರಂಭಿಸಲಾಗಿದ್ದು, 7 ಶಿಶುಗಳಿಗೆ ಚಿಕಿತ್ಸೆ ಕೊಡಬಹುದಾದ ಹೈಟೆಕ್ ನವಜಾತ ಶಿಶು ಕೇಂದ್ರವಿದೆ. ಜತೆಗೆ ಹೊಸದಾದ ಅತ್ಯಾಧುನಿಕ ಸೌಲಭ್ಯವುಳ್ಳ ದಂತ ಮ್ಯಾಕ್ಲಿಲೋಫೇಷಿಯಲ್ ಹಾಗೂ ಹೆಡ್-ನೆಕ್ ಶಸ್ತ್ರಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.ಇದರೊಟ್ಟಿಗೆ 24*7 ಟ್ರಾಮಾ ಕೇರ್- ಪಿಎಂ ರಾಹತ್ ಯೋಜನೆಯಡಿ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಪಿಎಂ ರಾಹತ್ ಯೋಜನೆಯಾಗಿದ್ದು, ಅದನ್ನು ನಾವು ಕರ್ನಾಟಕದಲ್ಲೇ ಮೊಟ್ಟ ಮೊದಲು ಜಾರಿಗೊಳಿಸಿದ್ದೇವೆ. ಈ ಸೌಲಭ್ಯದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತವಾದಾಗ ಅಪಘಾತಕ್ಕೀಡಾದ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಲಾಗುವುದು ಎಂದರು.ಹೆಣ್ಣು ಮಗುವಿನ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮವಾದ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದರೆ ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಕೊಡಲಾಗುವುದು. ಈಗಾಗಲೇ 14 ಬಾಣಂತಿಯರಿಗೆ ಉಚಿತ ಚಿಕಿತ್ಸೆ ಕೊಡಲಾಗಿದೆ ಎಂದರು. ಬಿರ್ಲಾ ಬೇಬಿ ಸೆಂಟರ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಅತ್ಯಾಧುನಿಕ ಐವಿಎಫ್ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ. ಹೈಡಿಪೆಂಡೆನ್ಸಿ ಯುನಿಟ್ ಅಂದರೆ ಕ್ರಿಟಿಕಲ್ ಕೇರ್‌ಗೆ ಸೇವೆಯನ್ನು ಅಳವಡಿಸಲಾಗಿದೆ. ಜತೆಗೆ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಕೇಂದ್ರವನ್ನೂ ತೆರೆಯಲಾಗುವುದು ಎಂದರು.ಇನ್ನು ಸಿದ್ದಸಿರಿ ಸೌಹಾರ್ದವು ಮಲ್ಟಿಸ್ಟೇಟ್ ಗೆ ಅನುಮತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಾಗಿರುವ ಭಾಗಗಳಲ್ಲಿ 25 ಶಾಖೆಗಳನ್ನು ತೆಗೆಯಲಾಗುವುದು ಎಂದು ಭರವಸೆ ನೀಡಿದರು.ಗೋಷ್ಠಿಯಲ್ಲಿ ಆಸ್ಪತ್ರೆಯ ಚೇರಮನ್ ಬಿ.ಎಸ್.ಪಾಟೀಲ ನಾಗರಾಳಹುಲಿ, ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಪ್ರಭು ದೇಸಾಯಿ, ಸಿದ್ರಾಮಪ್ಪ ಉಪ್ಪಿನ, ಸಂಗು ಸಜ್ಜನ, ಎಸ್.ಹೆಚ್.ನಾಡಗೌಡ, ಡಾ.ರವಿ ನಾಯಕ, ಶಿವಾನಂದ ಭುಸಾರಿ, ಸತೀಶ್ಚಂದ್ರ ಕುಲಕರ್ಣಿ, ರಾಜು ಗಣಿ, ಸೀಮಾ ಕೋರಿ, ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.ಜೆಸ್‌ಎಸ್ ಆಸ್ಪತ್ರೆ ಆವರಣದಲ್ಲಿಯೇ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಹೊಸದಾದ ಮೆಡಿಕಲ್ ಕಾಲೇಜು ಆರಂಭಿಸಲಾಗುತ್ತಿದ್ದು, ಹಿಂದೂ ಸಮಾಜದ ಯಾವುದೇ ಅರ್ಹ ವಿದ್ಯಾರ್ಥಿಗೆ ಉಚಿತ ಸೀಟು ಕೊಡುವ ಕೆಲಸ ಮಾಡಲಾಗುವುದು. 2028ಕ್ಕೆ ಮೊದಲ ಬ್ಯಾಚ್ ಆರಂಭಿಸುವ ಕುರಿತು ಪ್ರಯತ್ನ ನಡೆದಿದ್ದು, ಶೀಘ್ರದಲ್ಲೇ ಕಟ್ಟಡ ಆರಂಭಿಸಲಾಗುವುದು. 500 ಕೋಟಿ ವೆಚ್ಚದಲ್ಲಿ 620 ಬೆಡ್‌ಗಳುಳ್ಳ ಆಸ್ಪತ್ರೆಯನ್ನೂ ಸಹ ಆರಂಭಿಸಲಾಗುತ್ತಿದೆ. ಈಗಾಗಲೇ ನರ್ಸಿಂಗ್ ಕಾಲೇಜು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಏರ್ ಆ್ಯಂಬುಲೆನ್ಸ್ ಸೌಲಭ್ಯ ಹಾಗೂ ಹೃದಯ ಚಿಕಿತ್ಸೆ ಸೌಲಭ್ಯಗಳನ್ನು ಆರಂಭಿಸಲಾಗುವುದು.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ ಹಾಗೂ ಟ್ರಸ್ಟ್ ಅಧ್ಯಕ್ಷರು.