ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ವಿಭಾಗದ ಅ೦ತಿಮ ಪರೀಕ್ಷೆಯಲ್ಲಿ ಉಡುಪಿ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ಒಟ್ಟು ೨೨ ರ್‍ಯಾಂಕ್‌ಗಳು ದೊರೆತಿದ್ದು, ಅದರಲ್ಲಿ 3 ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಪರೀಕ್ಷೆಗೆ ಒಟ್ಟು 55 ವಿದ್ಯಾರ್ಥಿಗಳು ಹಾಜರಾಗಿದ್ದರು.ರೋಗನಿಧಾನ ವಿಭಾಗದ ಡಾ. ಪಲ್ಲವಿ ಗಣೇಶ್ ಪೂಜಾರಿ, ಅಗದತಂತ್ರ ವಿಭಾಗದ ಡಾ. ಶ್ರೀಕುಟ್ಟಿ ಪಿ.ವಿ., ಮಾನಸರೋಗ ವಿಭಾಗದ ಡಾ. ಆರ್. ಸಂತೋಷಿಣಿ ೧ನೇ ರ್‍ಯಾಂಕ್ ಮತ್ತು ಚಿನ್ನದ ಪದಕಗಳನ್ನು ಪಡೆದಿದ್ದಾರೆ.ಅಗದತಂತ್ರ ವಿಭಾಗದ ಡಾ. ಹರಿತ ಎಂ., ಮಾನಸರೋಗ ವಿಭಾಗದ ಡಾ. ಪಾಟ ಅನುಷಾ, ಸ್ವಸ್ಥವೃತ್ತ ವಿಭಾಗದ ಡಾ. ವಿಜಯಲಕ್ಷ್ಮೀ ಎಸ್. ಕಾಮತಾರ್ ಅವರು ೨ನೇ ರ್‍ಯಾಂಕ್ ಗಳಿಸಿದ್ದಾರೆ. ರೋಗನಿದಾನ ವಿಭಾಗದ ಡಾ. ದೀಕ್ಷಾ ಡಿ. ಶೆಟ್ಟಿ, ಮಾನಸರೋಗ ವಿಭಾಗದ ಡಾ. ತೇಜಸ್ವಿನಿ ೩ನೇ ರ್‍ಯಾಂಕ್ ಗಳಿಸಿದ್ದಾರೆ.ದ್ರವ್ಯಗುಣ ವಿಭಾಗದ ಡಾ. ಶ್ರದ್ಧಾ ಜಿ.ಎಸ್., ಕಾಯಚಿಕಿತ್ಸಾ ವಿಭಾಗದ ಡಾ. ದಿಲೀಪ್ ಪಿ., ರಚನಾ ಶರೀರ ವಿಭಾಗದ ಡಾ. ಮಾಧುರಿ ಆಚಾರ್ಯ ೪ನೇ ರ್‍ಯಾಂಕ್, ಅಗದತಂತ್ರ ವಿಭಾಗದ ಡಾ. ತೇಜಸ್ವಿನಿ ರಜನಾಲ್, ಕೌಮಾರಭೃತ್ಯ ವಿಭಾಗದ ಡಾ. ಪೂಜಾ ಭಟ್ ೫ನೇ ರ್‍ಯಾಂಕ್ ಪಡೆದಿದ್ದಾರೆ.ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಡಾ. ಕಾವ್ಯ ಬಿ.ಎನ್., ರಸಶಾಸ್ತ್ರ ಮತ್ತು ಭೈಷ್ಯಜ್ಯ ಕಲ್ಪನ ವಿಭಾಗದ ಡಾ. ಐಶ್ವರ್ಯ ಸಿ. ಅಂಚನ್ ೬ನೇ ಮತ್ತು ಅಗದತಂತ್ರ ವಿಭಾಗದ ಡಾ. ನೇಹಾ ಮೋಹನ್ ರೊಖಡೆ, ದ್ರವ್ಯಗುಣ ವಿಭಾಗದ ಡಾ. ಲೇಕ್ಷ್ಮಿ ಎಂ.ಎಸ್. ೭ನೇ ರ್‍ಯಾಂಕ್ ಗಳಿಸಿದ್ದಾರೆ.ಮಾನಸರೋಗ ವಿಭಾಗದ ಡಾ. ಅನ್ಶ ಮನೋಹರನ್ ೮ನೇ ರ್‍ಯಾಂಕ್, ಕಾಯಚಿಕಿತ್ಸಾ ವಿಭಾಗದ ಡಾ. ಸೌಮಾಶ್ರೀ ವಿ. ಆರ್., ಆಯುರ್ವೇದ ಸಂಹಿತಾ ಸಿದ್ಧಾಂತ ವಿಭಾಗದ ಡಾ. ರಂಜು ಷಾ ೯ನೇ ರ್‍ಯಾಂಕ್ ಮತ್ತು ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಡಾ. ನಯನ ಎನ್., ಕೌಮಾರಭೃತ್ಯ ವಿಭಾಗದ ಡಾ. ಅಂಜು ಜಿ.ಕೆ. ೧೦ನೇ ರ್‍ಯಾಂಕ್ ಗಳಿಸಿದ್ದಾರೆ.ಈ ಪ್ರಶಂಸನೀಯ ಸಾಧನೆಗಾಗಿ ಎಸ್.ಡಿ.ಎಂ. ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.