ಆರ್ಥಿಕ ದುರ್ಬಲರಿಗೆ ವೈದ್ಯಕೀಯ ಸೇವೆಗಳು ಸಿಗಲಿ

| Published : Jul 29 2024, 12:51 AM IST

ಸಾರಾಂಶ

ಸೂಲಿಬೆಲೆ: ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಿಗೆ ಆರೋಗ್ಯ ಸೇವೆಗಳು ರಿಯಾಯಿತಿ ಹಾಗೂ ಉಚಿತವಾಗಿ ಕಲ್ಪಿಸುವ ಉದ್ದೇಶದಿಂದ ಹೊಸಕೋಟೆ ಎಂವಿಜೆ ಆಸ್ಪತ್ರೆ ಶ್ರಮಿಸುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಮೋದ್ ತಿಳಿಸಿದರು.

ಸೂಲಿಬೆಲೆ: ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಿಗೆ ಆರೋಗ್ಯ ಸೇವೆಗಳು ರಿಯಾಯಿತಿ ಹಾಗೂ ಉಚಿತವಾಗಿ ಕಲ್ಪಿಸುವ ಉದ್ದೇಶದಿಂದ ಹೊಸಕೋಟೆ ಎಂವಿಜೆ ಆಸ್ಪತ್ರೆ ಶ್ರಮಿಸುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಮೋದ್ ತಿಳಿಸಿದರು.

ಸೂಲಿಬೆಲೆ ಗ್ರಾಪಂ, ನ್ಯೂ ಆಕ್ಸ್‌ಫರ್ಡ್‌ ಶಾಲೆ, ಎಂವಿಜೆ ಆಸ್ಪತ್ರೆ, ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ ಮಾತನಾಡಿ, ಜೇನುಗೂಡು ಟ್ರಸ್ಟ್ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಉಚಿತ ಆರೋಗ್ಯ ಶಿಬಿರಗಳು, ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೂ ತನ್ನದೇ ಕೊಡುಗೆ ನೀಡುತ್ತಿದೆ ಎಂದರು.

ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆಯ ಶಿವಕುಮಾರ್ ಮಾತನಾಡಿ, ಹೊಸಕೋಟೆ ತಾಲೂಕಿಗೆ ಎಂವಿಜೆ ಮೆಡಿಕಲ್ ಕಾಲೇಜಿನ ಸೇವೆ ಅನನ್ಯ. ತುರ್ತು ಪರಿಸ್ಥಿತಿಯಲ್ಲಿ ಅತಿ ಸನಿಹದಲ್ಲಿಯೇ ಉಚಿತ ಹಾಗೂ ತುರ್ತುಸೇವೆಗಳು ದೊರೆಯುತ್ತಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಗ್ರಾಪಂ ಉಪಾಧ್ಯಕ್ಷೆ ಷಾಜಿಯಾಖಾನಂ, ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಡಾ.ಕಿರಣ್, ಪಿಡಿಒ ಮಂಜುನಾಥ್, ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಡಾ.ಶಿವಾಜಿನಾಯಕ್, ಶಾಲಾ ಅಧ್ಯಕ್ಷೆ ಸುಮಲತಾ, ಗ್ರಾಪಂ ಸದಸ್ಯೆ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್, ದೇವಿದಾಸ್ ಸುಬ್ರಾಯ್ ಶೇಠ್, ಸೈಯದ್ ಮಹಬೂಬ್, ಬೆಟ್ಟಹಳ್ಳೀ ಗೋಪಿನಾಥ್, ಮುತ್ಸಂದ್ರ ಆನಂದಪ್ಪ, ಹಸಿಗಾಳ ಜಗದೀಶ್ ಮತ್ತಿತರರಿದ್ದರು.