ಪಶು ಔಷಧಿ ಅಂಗಡಿಯವನ ಎಡವಟ್ಟು: 36 ಕುರಿಗಳ ದಾರುಣ ಸಾವು?

| Published : Dec 17 2024, 12:47 AM IST

ಸಾರಾಂಶ

ಪಶುವೈದ್ಯ ಔಷಧಿ ನೀಡುವ ವಿಚಾರವಾಗಿ ಬದಲಿ ಔಷಧಿ ನೀಡಿ ರೈತನಿಗೆ ತಪ್ಪು ಮಾಹಿತಿ ನೀಡಿರುವ ಔಷಧಿ ಅಂಗಡಿಯವನಿಂದ ಈ ಯಡವಟ್ಟಾಗಿದೆ ಎಂದು ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಪಶು ಔಷಧಿ ಅಂಗಡಿಯವನ ಎಡವಟ್ಟಿನಿಂದಾಗಿ ರೈತನ 36 ಕುರಿಗಳ ದಾರುಣ ಸಾವಿಗೆ ಕಾರಣವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.ತಾಲೂಕಿನ ಬೆಸ್ತೇನಹಳ್ಳಿ ಸೋಮವಾರ ಮುಂಜಾನೆ ಈ ಘಟನೆ ನಡದಿದ್ದು, ಗ್ರಾಮದ ಈರಣ್ಣ ಎಂಬ ರೈತನಿಗೆ ಸೇರಿದ 36 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.ಪಶುವೈದ್ಯ ಬರೆದುಕೊಟ್ಟ ಔಷಧಿಗೆ ಬದಲಿ ಔಷಧಿ ನೀಡಿರುವ ಆರೋಪ ಕೇಳಿ ಬಂದಿದ್ದು, ಔಷಧಿ ನೀಡುವ ವಿಚಾರವಾಗಿ ಬದಲಿ ಔಷಧಿ ನೀಡಿ ರೈತನಿಗೆ ತಪ್ಪು ಮಾಹಿತಿ ನೀಡಿರುವ ಔಷಧಿ ಅಂಗಡಿಯವನಿಂದ ಈ ಯಡವಟ್ಟಾಗಿದೆ ಎಂದು ಆರೋಪಿಸಲಾಗಿದೆ.ಭಾನುವಾರ ಸಂಜೆ ಅಂಗಡಿಯಿಂದ ಔಷಧ ತಂದು ಹಾಕಿರುವ ರೈತ ಈರಣ್ಣನ ಕುರಿಗಳು ಒಂದೊಂದಾಗಿ ಭಾನುವಾರ ರಾತ್ರಿಯಿಂದ ನಿರಂತರವಾಗಿ ಸಾವನ್ನಪ್ಪುತ್ತಿವೆ. ಕುರಿಗಳ ಸರಣಿ ಸಾವು ಕಂಡು ಕಂಗಾಲಾಗಿರುವ ರೈತ ದಿಕ್ಕೆ ತೋಚದಂತ್ತಾಗಿದೆ. ಆದರೆ ಕುರಿಗಳ ಸಾವಿಗೆ ಔಷಧವೇ ಕಾರಣವೇ ಅಥವಾ ಬೇರೆ ಎನಾದ್ರು ಆಗಿದ್ಯಾ ಅನ್ನೋ ಹಲವು ಅನುಮಾನಗಳು ಸಹ ರೈತನನ್ನು ಕಾಡುತ್ತಿದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪಶು ವೈದ್ಯರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ರೈತನ ಕುರಿಗಳ ಸಾವಿಗೆ ನಿಖರ ಕಾರಣಕ್ಕೆ ಮುಂದಾಗಿದ್ದಾರೆ.