ಸಾರಾಂಶ
ಸಿದ್ಧ ಗವಿಸಿದ್ಧೇಶ್ವರ ಮಠದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಾತ್ರಿ ನಡೆಯುವ ವೇದಿಕೆ ಕಾರ್ಯಕ್ರಮಗಳು ಮುಗಿದ ಬಳಿಕ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಕಟ್ಟಡದ ಮೇಲೆ ಅದ್ಧೂರಿಯಾಗಿ ನಡೆದ ಮದ್ದು ಸುಡುವ ಕಾರ್ಯಕ್ರಮ ಕಣ್ಮನ ಸೆಳೆಯಿತು.
ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಿತು.ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಾತ್ರಿ ನಡೆಯುವ ವೇದಿಕೆ ಕಾರ್ಯಕ್ರಮಗಳು ಮುಗಿದ ಬಳಿಕ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಕಟ್ಟಡದ ಮೇಲೆ ಅದ್ಧೂರಿಯಾಗಿ ನಡೆದ ಮದ್ದು ಸುಡುವ ಕಾರ್ಯಕ್ರಮ ಕಣ್ಮನ ಸೆಳೆಯಿತು.ಸಿದ್ಧೇಶ್ವರಮೂರ್ತಿ ಗವಿಮಠವನ್ನು ತಲುಪುತ್ತಿದ್ದಂತೆ ಆಕಾಶದ ತುಂಬೆಲ್ಲ ಬೆಳಕಿನ ರಾಶಿಯೇ ಹರಿದಾಡಿತು. ಗವಿಮಠದ ಹೊರಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಕೊನೆಯಲ್ಲಿ ಜೈಕಾರದ ಘೋಷಣೆಗಳು ಮೊಳಗಿದವು.ಮಹಾರಥೋತ್ಸವ ನಿರ್ವಿಘ್ನವಾಗಿ ನಡೆದ ಸಂಕೇತವಾಗಿ ಪ್ರತಿ ವರ್ಷವೂ ಮದ್ದು ಸುಡುವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಜಾತ್ರೆಯ ವಿಜಯೋತ್ಸವ ಸಂಕೇತವೂ ಆಗಿದೆ ಎನ್ನಬಹುದು.