ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ ೨೭ರಂದು ಹಾಸನ ನಾದ ಧ್ಯಾನ ಚಕ್ರ-೫ ಮೆಡಿಟೇಶನ್ ದೊಡ್ಡ ತರಬೇತಿಯನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದು ಮೆಡಿಟೇಶನ್ ತರಬೇತುದಾರ ಅಯ್ಯಪ್ಪ ಪಿಂಡಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಪಿ.ಎಸ್..ಎಸ್.ಎಂ. ಮತ್ತು ಪಿರಮಿಡ್ ವರ್ಲ್ಡ್ ಫೌಂಡೇಶನ್ ವತಿಯಿಂದ ಇದೆ ಭಾನುವಾರದಂದು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ರವರೆಗೂ ಹಾಸನ ನಾದ ಧ್ಯಾನ ಚಕ್ರ-೫ರಲ್ಲಿ ಮೆಡಿಟೇಶನ್ ಕೋಚ್ ಅನ್ನು ನಡೆಸಲಾಗುತ್ತಿದೆ. ಇದು ಉಚಿತ ಕಾರ್ಯಕ್ರಮವಾಗಿದ್ದು, ಸರ್ವರಿಗೂ ಸ್ವಾಗತವಿದೆ. ಬರುವ ಧ್ಯಾನಿಗಳಿಗೆ ಸಾತ್ವಿಕ ಸಸ್ಯಹಾರಿ ಉಪಹಾರ ಇರುತ್ತದೆ. ಬೆಳಿಗ್ಗೆ ೮:೩೦ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧೨ ಗಂಟೆಯವರೆಗೂ ನಾದ ಧ್ಯಾನ ಇರುತ್ತದೆ. ಇದಾದ ನಂತರ ಧ್ಯಾನದ ಬಗ್ಗೆ ಭಾಷಣ ಮಾಡಲಾಗುವುದು. ೧:೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ ಜರುಗಲಿದೆ. ಇದಾದ ಬಳಿಕ ಎಲ್ಲಾ ಧ್ಯಾನಿಗಳಿಗೆ ಶುದ್ಧ ಸಾತ್ವಿಕ ಸಸ್ಯಹಾರಿ ಊಟ ನೀಡಲಾಗುವುದು ಎಂದರು.
ಈಗಾಗಲೇ ನಾದ ಧ್ಯಾನ ಚಕ್ರ-೫ ಮೆಡಿಟೇಶನ್ ನನ್ನು ರಾಜ್ಯ ಹಲವಾರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಈಗ ಹಾಸನದಲ್ಲಿ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು. ಒತ್ತಡ ಹೋಗಲಾಡಿಸಲು ಧ್ಯಾನ ಎಂಬುದು ಬಹಳ ಮುಖ್ಯ. ಎಷ್ಟು ಮೆಡಿಷನ್, ರಿಸರ್ಚ್ ಸೈಂಸಿಸ್ಟ್ ಆಗಲಿ ಮೆಡಿಟೇಶನ್ ಮಾಡಬೇಕೆಂದು ಹೇಳುತ್ತಿದ್ದಾರೆ. ಕಳೆದ ೨೫ ವರ್ಷದಿಂದ ಸಿಂಪಲ್ ಮೆಡಿಟೇಶನ್ ಮಾಡುತ್ತಿದ್ದು, ಇದು ಉಸಿರು ಮೇಲೆ ಗಮನವಿರುತ್ತದೆ. ನಮ್ಮ ಗುರುಗಳು ಹೇಳಿದಾಗೆ ಉಚಿತವಾಗಿ ಈ ಧ್ಯಾನವನ್ನು ಹೇಳಿಕೊಡಲಾಗುತ್ತಿದೆ. ಇದು ಸಾಮೂಹಿಕ ಧ್ಯಾನವಾಗಿದೆ. ಮನಸ್ಸು ಶೂನ್ಯ ಎಂಬುದನ್ನು ತಿಳಿಯಬಹುದು. ತೆಗೆದುಕೊಳ್ಳುವ ಮೆಡಿಷನ್ ನಿಂದ ಆರೋಗ್ಯ ಬರುವುದಿಲ್ಲ. ನಮ್ಮ ಲೈಫ್ ಸ್ಟೈಲ್ನಲ್ಲಿ ಯೋಗ, ಧ್ಯಾನ ಇವೆಲ್ಲಾ ಸೇರಿಸಿಕೊಳ್ಳಬೇಕು ಎಂದು ಹೇಳಿದರು. ಪ್ರತಿನಿತ್ಯ ೧೦ರಿಂದ ೧೫ ನಿಮಿಷ ಧ್ಯಾನ ಶುರು ಮಾಡಿದರೇ ನಿಧಾನವಾಗಿ ಇನ್ನಷ್ಟು ಸಮಯವನ್ನು ಹೆಚ್ಚು ಮಾಡುತ್ತಾ ಹೋಗಬಹುದಾಗಿದೆ. ಮನೆಯಲ್ಲಿ ಪೋಷಕರು ಯಾವ ರೀತಿ ಇರುತ್ತಾರೆ ಮಕ್ಕಳು ಕೂಡ ಅದರಂತೆ ನಡೆಯುವುದು ಸಹಜ. ಈ ನಿಟ್ಟಿನಲ್ಲಿ ಪೋಷಕರು ಧ್ಯಾನ ಮತ್ತು ಯೋಗದಂತಹದನ್ನು ಕಲಿಸುವುದಕ್ಕೆ ಮುಂದಾದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಧ್ಯಾನ ಮತ್ತು ಯೋಗಕ್ಕೆ ವಯಸ್ಸಿನ ಅಂತರವಿಲ್ಲ ಎಂದು ಕಿವಿಮಾತು ಹೇಳಿದರು.ಕೋಡಿನೇಟರ್ ಮಮತಾ ಮಾತನಾಡಿ, ನಗರದಲ್ಲಿ ಒಂದು ವಿಶೇಷವಾದ ಹಾಗೂ ವಿನೂತನವಾದ ಕಾರ್ಯಕ್ರಮವಾಗಿದ್ದು, ಧ್ಯಾನವನು ಇಷ್ಟು ಸುಲಭವಾಗಿ ಮನೆಯಲ್ಲಿ ಹಾಗೂ ಎಲ್ಲಿ ಬೇಕಾದರೂ ಮಾಡಬಹುದು, ಮೆಡಿಟೇಶನ್ ಟೆಕ್ನಿಕನ್ನು ಅಯ್ಯಪ್ಪ ಪಿಂಡಿಯಿಂದ ಎಲ್ಲರಿಗೂ ಪರಿಚಯವಾಗಲಿದೆ. ಏಪ್ರಿಲ್ ೨೭ರ ಭಾನುವಾರದಂದು ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಪ್ರತಿ ಮನೆಗಳಿಂದ ಈ ಉಚಿತ ಧ್ಯಾನಕ್ಕೆ ಪಾಲ್ಗೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು. ಜೀವನಶೈಲಿಯನ್ನು ಯಾವ ರೀತಿ ಸುಂದರವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಬಗ್ಗೆ ತಿಳಿಸಿಕೊಡಲಿದ್ದಾರೆ. ಪ್ರತಿನಿತ್ಯ ಕೆಲ ಸಮಯವನ್ನು ಇಂತಹ ಇಂತ ಧ್ಯಾನಕ್ಕೆ ಸಮಯ ಮೀಸಲಿಟ್ಟರೇ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ, ಕುಟುಂಬ ಸಂತೋಷದಿಂದ ಇರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಡಿನೇಟರ್ ಸ್ವಾಮಿಗೌಡ, ಕಸಾಪ ಕಾರ್ಯದರ್ಶಿ ಬೊಮ್ಮೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.