ಧ್ಯಾನದಿಂದ ಮನೋರೋಗ ದೂರ-ರಾಜಯೋಗಿನಿ ಪದ್ಮಾಜಿ

| Published : Dec 31 2024, 01:03 AM IST

ಸಾರಾಂಶ

ರಾಜಯೋಗವು ಸತ್ಯ ಜ್ಞಾನದ ಮಾರ್ಗದರ್ಶನ ಮಾಡುತ್ತದೆ. ಧ್ಯಾನವು ಮನಸ್ಸು ಏಕಾಗ್ರತೆಗೊಳಿಸುವ ಮಾನವನ ಮನೋರೋಗ ದೂರ ಮಾಡುವ ಚಿಕಿತ್ಸಾ ವಿಧಾನವಾಗಿದೆ ಎಂದು ಹಳಿಯಾಳ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಡಾ। ಬಿ.ಕೆ. ಪದ್ಮಾಜಿ ಹೇಳಿದರು.

ಶಿಗ್ಗಾಂವಿ: ರಾಜಯೋಗವು ಸತ್ಯ ಜ್ಞಾನದ ಮಾರ್ಗದರ್ಶನ ಮಾಡುತ್ತದೆ. ಧ್ಯಾನವು ಮನಸ್ಸು ಏಕಾಗ್ರತೆಗೊಳಿಸುವ ಮಾನವನ ಮನೋರೋಗ ದೂರ ಮಾಡುವ ಚಿಕಿತ್ಸಾ ವಿಧಾನವಾಗಿದೆ ಎಂದು ಹಳಿಯಾಳ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಡಾ। ಬಿ.ಕೆ. ಪದ್ಮಾಜಿ ಹೇಳಿದರು.ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀದುಂಡಿಬಸವೇಶ್ವರ ಸಭಾಭವನದದಲ್ಲಿ ನಡೆದ ಜೀವನ ಶಿಕ್ಷಣ ಪ್ರವಚನ ಮಾಲೆ ಅಂಗವಾಗಿ ಒಂದುವಾರದ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು. ವರ್ತಮಾನ ಸಮಯದಲ್ಲಿ ವಿವಿಧ ಸಮಾಜಗಳಲ್ಲಿ ಹಾಗೂ ಕುಟುಂಬಗಳಲ್ಲಿ ಜೀವನದ ಸುಖ ಶಾಂತಿಗಳಿಲ್ಲದೇ ಮಾನವ ವೇದನೆ ಅನುಭವಿಸುವಂತಾಗಿದೆ. ಇವೆಕ್ಕೆಲ್ಲ ಪರ್ಯಾಯವಾಗಿ ಬ್ರಮ್ಮಕುಮಾರಿ ಈಶ್ವರಿ ವಿದ್ಯಾಲಯದ ರಾಜಯೋಗ ಕಾರ್ಯಕ್ರಮದ ಶಿಬಿರಗಳ ಪ್ರವಚನದ ಲಾಭ ಪಡೆಯಬೇಕೆಂದ ಅವರು ನಿಶ್ಚಿಂತ ಭಯಮುಕ್ತ ಹಾಗೂ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಈಶ್ವರೀ ವಿದ್ಯಾಲಯದ ಬಂಕಾಪುರ ಶಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದೆ ಹೇಳಿದರು.

ಪ್ರವಚನ ಕಾರ್ಯಕ್ರಮದಲ್ಲಿ ಬಾಡಗ್ರಾಮದ ನಿವೃತ್ತ ಸೇನಾ ಯೋಧ ಶಿವಪ್ಪ ಫಕ್ಕೀರಪ್ಪ ಸಣ್ಣಬಸಪ್ಪನವರ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ರೈತ ದಿನಾಚರಣೆ ಅಂಗವಾಗಿ ಗ್ರಾಮದ ಹಿರಿಯ ರೈತ ಮುಖಂಡರನ್ನು ಸನ್ಮಾನಿಸಲಾಯಿತು. ಸದಾಶಿವಪೇಠೆಯ ಶರಣಬಸವೇಶ್ವರ ಮಠದ ಶಿವದೇವಶರಣರು ಸಾನಿಧ್ಯವಹಿಸಿದ್ದರು. ಶಿಗ್ಗಾಂವಿ ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ನಾಗರಾಜ ದ್ಯಾಮನಕೊಪ್ಪ, ಬಸವ ಸೇವಾ ಕೇಂದ್ರದ ಸಂಚಾಲಕ, ನಿವೃತ್ತ ಶಿಕ್ಷಕ ಸುಭಾಸ್ ಮಸಳಿ, ಉದ್ಯಮಿ ಶಂಭಣ್ಣ ಚಿಗಳ್ಳಿ, ರೈತ ಧುರೀಣ ದುಂಡಪ್ಪ ಗುಳೇದಕೇರಿ, ಸದಾಶಿವ ಲಕ್ಷ್ಮೇಶ್ವರ, ಬಂಕಾಪೂರ ಸೇವಾಕೇಂದ್ರದ ಸುಧಕ್ಕಾ, ಪ್ರಭಾ ಮಸಳಿ ಅಲ್ಲದೇ ನೂರಾರು ರೈತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.