ಬೆಂಗಳೂರಿನಲ್ಲಿ ಸೆ.21ರಂದು ಮೀಂ ಕವಿಗೋಷ್ಠಿ: ಕವಿತೆಗಳಿಗೆ ಆಹ್ವಾನ

| Published : Aug 14 2025, 01:00 AM IST

ಸಾರಾಂಶ

ಆಯ್ದ ಕವಿಗಳಿಗೆ ತಮ್ಮ ಕವಿತೆಗಳನ್ನು ವಾಚಿಸಲು ಮತ್ತು ಖ್ಯಾತ ಲೇಖಕರಿಂದ ನಡೆಯಲಿರುವ ಸಾಹಿತ್ಯ ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಬೆಂಗಳೂರು: ಕೇರಳದ ಮರ್ಕಝ್ ನಾಲೆಜ್ ಸಿಟಿ ಅಧೀನದ ವಿರಾಸ್ ಕನ್ನಡ ವಿದ್ಯಾರ್ಥಿಗಳ ಸಂಘಟನೆಯು ಆಯೋಜಿಸುವ ''ಮೀಮ್'' ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಕವಿತೆ ಪೈಗಂಬರ್ ಮುಹಮ್ಮದ್ ಅವರ ಕುರಿತಾಗಿ ರಚಿಸಿರಬೇಕು ಮತ್ತು ಸ್ವರಚಿತ ಹಾಗೂ ಅಪ್ರಕಟಿತವಾಗಿರಬೇಕು. ಆಯ್ದ ಕವಿಗಳಿಗೆ ತಮ್ಮ ಕವಿತೆಗಳನ್ನು ವಾಚಿಸಲು ಮತ್ತು ಖ್ಯಾತ ಲೇಖಕರಿಂದ ನಡೆಯಲಿರುವ ಸಾಹಿತ್ಯ ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸೆಪ್ಟೆಂಬರ್ 21ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಸೆಪ್ಟೆಂಬರ್ 1ಕ್ಕಿಂತ ಮೊದಲು ಕವಿತೆಗಳನ್ನು meemkannada@gmail.com ಗೆ ಕಳುಹಿಸಬೇಕೆಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 7902936986 ಸಂಖ್ಯೆಯನ್ನು ಸಂಪರ್ಕಿಸಬಹುದು.