ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷರಾಗಿ ಮೀನಾಕ್ಷಮ್ಮ ಆಯ್ಕೆ

| Published : Dec 27 2024, 12:48 AM IST

ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷರಾಗಿ ಮೀನಾಕ್ಷಮ್ಮ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ರಮ್ಯಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ರೈತ ಸಂಘದ ಮುಖಂಡರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಕಾಂಗ್ರೆಸ್- ರೈತಸಂಘ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ

ಪಾಂಡವಪುರ: ತಾಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್- ರೈತಸಂಘ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ಮೀನಾಕ್ಷಮ್ಮ ಅವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಒಡಂಬಡಿಕೆ ಸೂತ್ರದನ್ವಯ ಹಿಂದಿನ ಅಧ್ಯಕ್ಷೆ ವಿನುತಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು 19 ಸದಸ್ಯರ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೀನಾಕ್ಷಮ್ಮರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ರಮ್ಯಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ರೈತ ಸಂಘದ ಮುಖಂಡರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ಮೀನಾಕ್ಷಮ್ಮ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯರ ಮಾರ್ಗದರ್ಶನದಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಉಪಾಧ್ಯಕ್ಷ ಕೆಂಪೇಗೌಡ ಮಾತನಾಡಿ, ಪಂಚಾಯಿತಿ ಎಲ್ಲಾ ಸದಸ್ಯರು ಒಂದೇ ಕುಟುಂಬದವರಂತೆ ಪಂಚಾಯಿತಿಗೆ ಬರುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಮಾದರಿ ಪಂಚಾಯಿತಿಯಾಗಿಸುತ್ತೇವೆ ಎಂದರು.

ನೂತನ ಅಧ್ಯಕ್ಷೆ ಮೀನಾಕ್ಷಮ್ಮ ರನ್ನು ರೈತಸಂಘದ ಮುಖಂಡರಾದ ರಂಗಸ್ವಾಮಿ, ಎಲ್.ಬಿ.ರವಿ, ಕಾಂಗ್ರೆಸ್ ಮುಖಂಡರಾದ ಎಂ.ಆರ್.ದೇವರಾಜು, ರಘು, ಗ್ರಾಪಂ ಉಪಾಧ್ಯಕ್ಷ ಕೆಂಪೇಗೌಡ, ವಕೀಲ ಶಶಿಕುಮಾರ್, ಸದಸ್ಯರಾದ ಚಂದ್ರಕಲಾ, ಎಲ್.ಸಿ.ಕುಮಾರ,ಕೆ.ಎಸ್.ಶಶಿಕಲಾ, ಬಿ.ಆರ್.ಮೀನಾಕ್ಷಿ, ಎಲ್.ಪಿ.ಕುಮಾರ, ಭಾರತಿ, ಶಾರದಮ್ಮ, ಎಂ.ಎಚ್.ಸತೀಶ, ನರಸಿಂಹಾಚಾರಿ, ಎನ್.ಕೆ.ಪ್ರಮೋದ, ವಿನುತಾ, ಸವಿತಾ, ಕಾಂತರಾಜು, ಸರಸ್ವತಿ, ಎಚ್.ಎಸ್.ಜಯಲಕ್ಷ್ಮೀ ಶಿವಣ್ಣ, ಎನ್.ಉಮಾ, ನರಸಿಂಹೇಗೌಡ ಇತರರು ಅಭಿನಂದಿಸಿದರು.