ಸಾರಾಂಶ
ಪಂಚಾಯಿತಿ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮೀನಾಕ್ಷಿ ಅವರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ
ಫೋಟೋ-20ಎಂವೈಎಸ್ 51-----------ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕಿನ ಚಂದಗಾಲು ಗ್ರಾಪಂ ಅಧ್ಯಕ್ಷೆಯಾಗಿ ಮೀನಾಕ್ಷಿ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾವತಿ ಅವರ ರಾಜೀನಾಮೆಯಿಂದ ತೆರೆನಾದ ಸ್ಥಾನಕ್ಕೆ ಪಂಚಾಯಿತಿ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮೀನಾಕ್ಷಿ ಅವರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ ಇವರ ಆಯ್ಕೆಯನ್ನು ಪ್ರಕಟಿಸಿದರು. ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ರಾಜಮ್ಮ, ಮಹದೇವ, ಎಚ್ಎಸ್ ಮಲ್ಲೇಶ, ಕೆ .ಎಸ್ .ನಿಶಾಂತ್, ಸೌಮ್ಯ ಎಸ್ ಪ್ರಕಾಶ್, ಮಣಿಯಮ್ಮ, ನೇತ್ರಾವತಿ, ಭಾಗ್ಯ, ಸುರೇಶ್, ರೂಪ, ಪಿಡಿಒ ಸಂತೋಷ್ ಇದ್ದರು.