ನೇಹಾ ಹತ್ಯೆ ಆರೋಪಿಯನ್ನು ಎನ್ಕೌಂಟರ್‌ ಮಾಡಿ

| Published : Apr 22 2024, 02:16 AM IST

ಸಾರಾಂಶ

ವಿದ್ಯಾರ್ಥಿಗಳು ಮತಾಂತರಕ್ಕೆ ಒಪ್ಪದಿದ್ದರೆ ಅವರನ್ನು ಹತ್ಯೆ ಮಾಡುವ ಪ್ರಕರಣ ದೇಶದಲ್ಲಿ ಹೆಚ್ಚಾಗುತ್ತಿವೆ.

ನರಗುಂದ: ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ ಅವರನ್ನು ಕೊಂದ ಆರೋಪಿಯನ್ನು ಎನಕೌಂಟರ್‌ ಮಾಡಬೇಕೆಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಆಗ್ರಹಿಸಿದ್ದಾರೆ.

ಅವರು ಪಟ್ಟಣದ ಮಿನಿವಿಧಾನ ಸೌಧದಲ್ಲಿ ಕನ್ನಡಪರ ಸಂಘಟನೆ, ಕರವೇ, ದಲಿತ ಸಂಘಟನೆ ಸಂಯುಕ್ತಾಶ್ರಯದಲ್ಲಿ ನೇಹಾ ಹತ್ಯೆ ಮಾಡಿದ ಆರೋಪಿಯನ್ನು ಎನಕೌಂಟರ್‌ ಮಾಡಬೇಕೆಂದು ಸರ್ಕಾರಕ್ಕೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಲವ್ವ ಜಿಹಾದ್‌ ಹೆಸರಿನಲ್ಲಿ ಹಿಂದು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಒಂದು ಕೋಮಿನ ಯುವಕರು ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್ವ ಮಾಡಿ ಅವರನ್ನು ಮತ್ತೊಂದು ಧರ್ಮಕ್ಕೆ ಮತಾಂತರಕ್ಕೆ ಪಿಡಿಸುತ್ತಿದ್ದಾರೆ, ವಿದ್ಯಾರ್ಥಿಗಳು ಮತಾಂತರಕ್ಕೆ ಒಪ್ಪದಿದ್ದರೆ ಅವರನ್ನು ಹತ್ಯೆ ಮಾಡುವ ಪ್ರಕರಣ ದೇಶದಲ್ಲಿ ಹೆಚ್ಚಾಗುತ್ತಿವೆ. ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ ಅವಳನ್ನು ಫಿಯಾಜ್ ಎಂಬುವರು ಪ್ರೀತಿಗೆ ಒಪ್ಪಲಿಲ್ಲವೆಂದು ನೇಹಾಳನ್ನು 9 ಬಾರಿ ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವುದು ಅಮಾನವಿಯ ಘಟನೆಯಾಗಿದೆ ಎಂದರು.

ತಹಸೀಲ್ದಾರ್‌ ಕಾರ್ಯಾಲಯದ ಸಿಬ್ಬಂದಿ ಗಣೇಶ ಪಾಟೀಲ ಮನವಿ ಸ್ವೀಕರಿಸಿದರು.

ವಿಜಯ ಕೋತಿನ, ರಾಘವೇಂದ್ರ ಗುಜಮಾಗಡಿ, ಮಂಜುನಾಥ ದೊಡ್ಡಮನಿ, ಶಿವಪುತ್ರಯ್ಯ ಹಿರೇಮಠ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಆರ್.ಆರ್. ನೆಲವಡಿ, ದತ್ತು ಜೋಗಣ್ಣವರ, ಶರಣ ಚಲವಾದಿ, ಎಂ.ಎಂ. ಜಾವೂರ, ರಮೇಶ ಗಡೇಕಾರ, ನಂದೀಶ ಮಠದ, ಮುತ್ತು ರಾಯರಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.