ಸಾರಾಂಶ
ಶಿರಹಟ್ಟಿ: ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ಹತ್ಯೆಗೈದ ಆರೋಪಿ ಫಯಾಜ್‌ನನ್ನು ಸುಮ್ಮನೆ ಬಿಡದೇ ಎನ್ಕೌಂಟರ್ ಮಾಡಬೇಕು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಆಗ್ರಹಿಸಿದರು.
ಶನಿವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಹಿಂದೂ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಸರ್ಕಾರ ದಿಕ್ಕು ದೆಸೆ ತಪ್ಪಿದ್ದು, ಗೂಂಡಾಗಳ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ ಎಸಗಿದ ನೀಚ ಫಯಾಜ್‌ನನ್ನು ಸುಮ್ಮನೆ ಬಿಡಬಾರದು. ತಕ್ಷಣ ಗಲ್ಲಿಗೇರಿಸಬೇಕು. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ವಾಸ್ತವವನ್ನು ಜನರಿಗೆ ಹೇಳದೇ ವೋಟ್‌ನ ಓಲೈಕೆಗಾಗಿ ಒಂದು ವರ್ಗ ಜನರನ್ನು ಮೆಚ್ಚಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ವಿದ್ಯಾರ್ಥಿ ನೇಹಾ ಹಿರೇಮಠ ಅವರನ್ನು ಭೀಕರವಾಗಿ ೯ ಬಾರಿ ಹಿರಿದು ಕೊಂದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಶಾಲಾ ಕಾಲೇಜುಗಳು ಜ್ಞಾನದ ದೇವಸ್ಥಾನಗಳು. ಇಂತಹ ದೇವಸ್ಥಾನದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಹಳ್ಳಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ತಕ್ಷಣ ರಾಜಿನಾಮೆ ನೀಡಬೇಕು. ಶಾಂತಿ ರಾಜ್ಯವಾದ ಕರ್ನಾಟಕದಲ್ಲಿ ಇಂತಹ ವ್ಯಕ್ತಿಗಳ ನಾಯಕತ್ವದಿಂದ ಬಿಹಾರ ರಾಜ್ಯವಾಗಿ ಬದಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಸರ್ಕಾರಕ್ಕ ಮಾನ ಮಾರ್ಯಾದೆ ಇಲ್ಲ. ಇದು ಅತ್ಯಂತ ನಾಚಿಗೇಡಿತನ ಸಂಗತಿ ಎಂದು ಹೇಳಿದರು.
ಆಡಳಿತಕ್ಕೆ ಬಂದ ಸರ್ಕಾರ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ಪಕ್ಷಪಾತ ಮಾಡಬಾರದು. ಜನರ ನಂಬಿಕೆ ಹುಸಿಗೊಳಿಸಬಾರದು. ಇದೇ ರೀತಿ ಮುಂದುವರೆದಲ್ಲಿ ಜನರು ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಶಂಕರ ಮರಾಠೆ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಬಸವರಾಜ ಹಲಸೂರ ಮಾತನಾಡಿದರು, ಸುರೇಶ ಅಕ್ಕಿ, ನಂದಾ ಪಲ್ಲೇದ ಮಾತನಾಡಿದರು. ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಪರಶುರಾಮ ಡೊಂಬಳ್ಳಿ, ವೀರಣ್ಣ ಅಂಗಡಿ, ಪ್ರವೀಣಗೌಡ ಪಾಟೀಲ, ಯಲ್ಲಪ್ಪ ಇಂಗಳಗಿ, ರಾಮಣ್ಣ ಕಂಬಳಿ, ಬಸವರಾಜ ವಡವಿ, ತಿಪ್ಪಣ್ಣ ಲಮಾಣಿ, ಅಕ್ಬರ ಯಾದಗಿರಿ, ಗೌತಮ್ ಕಪ್ಪತ್ತನವರ, ಮಂಜು ಸೊಂಟನೂರ, ಅನೀಲ ಪಾಶ್ಚಾಪೂರ, ರೂಪಾ ಪಾಶ್ಚಾಪೂರ, ಸಾವಿತ್ರಿ ಪಾಶ್ಚಾಪೂರ, ಅನಿಲ್ ಮುಳಗುಂದ, ಶ್ರೀನಿವಾದ ಬಾರ್ಬರ, ಶರಣಪ್ಪ ಮಡಿವಾಳರ, ಶರಣಪ್ಪ ಶಿಂದೆ, ಮಂಜುನಾಥ ಬಳಿಗಾರ ಮತ್ತಿತರರು ಉಪಸ್ಥಿತರಿದ್ದರು.