ನಗರಸಭೆ ಅಧ್ಯಕ್ಷರ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಸಭೆ

| Published : Nov 10 2023, 01:02 AM IST / Updated: Nov 10 2023, 01:03 AM IST

ಸಾರಾಂಶ

ನಗರಸಭೆ ಅಧ್ಯಕ್ಷರ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಸಭೆ

ನಗರಸಭೆ ಇತಿಹಾಸದಲ್ಲಿ ಹೊಸ ಅಧ್ಯಾಯ । ಯಾವುದು ಆಡಳಿತ ಪಕ್ಷ, ಪ್ರತಿ ಪಕ್ಷ ? । ಅಧ್ಯಕ್ಷರ ನಡೆ; ಬಿಜೆಪಿ - ಕಾಂಗ್ರೆಸ್ ಪಕ್ಷಗಳು ಇಕ್ಕಟ್ಟಿನ ಕಡೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಶುಕ್ರವಾರ ಅವಿಶ್ವಾಸ ನಿರ್ಣಯ ಕುರಿತು ಸಭೆ ಕರೆಯಲಾಗಿದೆ. ಈ ಸಭೆ ಚಿಕ್ಕಮಗಳೂರು ನಗರಸಭೆ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಲಿದೆ. ಈ ಬೆಳವಣಿಗೆ , ಬಿಜೆಪಿಗೆ ಮುಜುಗರ, ಕಾಂಗ್ರೆಸ್‌ಗೆ ಪ್ರಾಣ ಸಂಕಟವಾಗಿದೆ. ನಗರಸಭೆಯಲ್ಲಿ ಬಿಜೆಪಿ ಆಡಳಿತವಿದೆ. ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಬಿಜೆಪಿ ಪಕ್ಷಕ್ಕೆ ಸೇರಿದವರು. ಈಗ ಅವರನ್ನೆ ಕೆಳಗಿಳಿಸಲು ಅವರದೇ ಪಕ್ಷದವರು ಮುಂದೆ ನಿಂತು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಸಹಿ ಪಡೆದು ಅವಿಶ್ವಾಸ ನಿರ್ಣಯ ಕುರಿತು ಸಭೆ ಕರೆಯಲು ಲಿಖಿತವಾಗಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ತಮ್ಮ ಪಕ್ಷದ ಅಧ್ಯಕ್ಷರನ್ನು ತಾವೇ ಕೆಳಗಿಳಿಸಲು ಬಿಜೆಪಿ ಕಸರತ್ತು ಮಾಡುತ್ತಿರುವುದು ನಗರಸಭೆ ಇತಿಹಾಸದಲ್ಲಿ ಇದೇ ಪ್ರಥಮ. ನಗರಸಭೆ ಅಧ್ಯಕ್ಷರನ್ನು ಕೆಳಗಿಳಿಸುವುದು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಬಿಜೆಪಿಗೆ ಬಿಟ್ಟಿರುವ ವಿಷಯ. ಅದರಲ್ಲಿ ಕಾಂಗ್ರೆಸ್ ಹಸ್ತಾಕ್ಷೇಪ ಮಾಡುವುದಿಲ್ಲ, ನಾವು ವಿರೋಧ ಪಕ್ಷದಲ್ಲೇ ಇರುತ್ತೇವೆಂದು ಕಾಂಗ್ರೆಸ್ ಹೇಳುತ್ತಿದೆ.

ಈ ಸಂದರ್ಭದಲ್ಲಿ ಈ ರೀತಿಯಲ್ಲಿ ಹೇಳುವುದು ಕಾಂಗ್ರೆಸ್‌ಗೆ ಅನಿವಾರ್ಯ. ಆದರೆ, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ವರಸಿದ್ದಿ ವೇಣುಗೋಪಾಲ್ ವಿರುದ್ಧ ಮತ ಚಲಾಯಿಸಿ, ಕಾಂಗ್ರೆಸ್ ಪಕ್ಷದವರು ತಟಸ್ಥವಾಗಿ ಉಳಿದರೆ ಅಲ್ಲಿಗೆ ನಗರಸಭೆ ಅಧ್ಯಕ್ಷರ ಪರವಾಗಿ ಇದ್ದರೆಂದು ಮತದಾನದ ಸಂದರ್ಭದಲ್ಲಿ ಪರಿಗಣಿಸಲಾಗುವುದು. ಅಂದರೆ, ಬಿಜೆಪಿಯ ನಗರಸಭೆ ಅಧ್ಯಕ್ಷರಿಗೆ ಕಾಂಗ್ರೆಸ್ ಬೆಂಬಲ. ಇದು, ಕೂಡ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಿದೆ. ಆಗ ಕಾಂಗ್ರೆಸ್ ಚಿಕ್ಕಮಗಳೂರು ನಗರಸಭೆಯಲ್ಲಿ ಮಾತ್ರವಲ್ಲ, ಜಿಲ್ಲೆಯೂ ಸೇರಿದಂತೆ ಬೇರೆ ಕಡೆಗಳಲ್ಲೂ ಮುಜುಗರಕ್ಕೆ ಒಳಗಾಗಬೇಕಾಗುವ ಸಾಧ್ಯತೆ ಇದೆ. ನಗರಸಭೆ ಅಧ್ಯಕ್ಷರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ರಾಹು ಕಾಲ: ಚಿಕ್ಕಮಗಳೂರು ನಗರಸಭೆಯಲ್ಲಿ ಸಾಮಾನ್ಯಸಭೆಗಳು ಮಧ್ಯಾಹ್ನ 12 ಗಂಟೆಯೊಳಗೆ ಆರಂಭವಾಗುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಶುಕ್ರವಾರ ಮಧ್ಯಾಹ್ನ 12.15 ಕ್ಕೆ ಸಾಮಾನ್ಯಸಭೆ ಕರೆಯಲಾಗಿದೆ. ಇದರ ಹಿಂದೆಯೂ ಒಂದು ಉದ್ದೇಶ ಇದೆ. ಶುಕ್ರವಾರ ರಾಹುಕಾಲ ಮಧ್ಯಾಹ್ನ 12 ಗಂಟೆಗೆ ಪೂರ್ಣ ಗೊಳ್ಳಲಿದೆ. ಈ ಸಮಯ ಮೀರಿದ ಮೇಲೆ ಅಂದರೆ, ಮಧ್ಯಾಹ್ನ 12.15 ಕ್ಕೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿದೆ. ಕಾಲ ನೋಡಿ ಸಭೆ ಕರೆಯುವ ಈ ಬೆಳವಣಿಗೆಯೂ ಕೂಡ ಚಿಕ್ಕಮಗಳೂರು ನಗರಸಭೆ ಇತಿಹಾಸದಲ್ಲಿ ಪ್ರಥಮ. ಪೋಟೋ ಫೈಲ್ ನೇಮ್ 9 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆ ---- ಬಾಕ್ಸ್ -----ಅಧ್ಯಕ್ಷರ ಮನೆಗೆ ಪೊಲೀಸ್ ಬಂದೋಬಸ್ತ್

ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಮನೆಗೆ ಗುರುವಾರ ಬೆಳಿಗ್ಗೆ ಡಿಎಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಅಧ್ಯಕ್ಷರ ವಿರುದ್ಧ ಸ್ವಪಕ್ಷದಿಂದಲೇ ಅವಿಶ್ವಾಸ ನಿರ್ಣಯದ ಸಭೆ ಕರೆದಿದ್ದರಿಂದ ಮುಂಜಾಗ್ರತೆಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ನಗರಸಭೆ ಅಧ್ಯಕ್ಷರ ಮನೆಗೆ ಪೊಲೀಸರನ್ನು ನಿಯೋಜನೆ ಮಾಡಿರುವುದು ಕೂಡ ಇದೇ ಪ್ರಥಮ. ನಗರಸಭೆ ಸಾಮಾನ್ಯ ಸಭೆ ಸಂದರ್ಭದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

9 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ನಿವಾಸದ ಎದುರು ನಿಂತಿರುವ ಡಿಎಆರ್ ತುಕಡಿ. -------ಯಾವ ಪಕ್ಷದಲ್ಲಿ ಎಷ್ಟು ಬಲ ?

ನಗರಸಭೆ ಸದಸ್ಯರ ಸಂಖ್ಯೆ- 35 ಸಂಸದರು, ಶಾಸಕರು, ವಿಪ ಸದಸ್ಯರ ಸಂಖ್ಯೆ- 04 ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಇರುವ ಸದಸ್ಯರ ಸಂಖ್ಯೆ - 39 ಅವಿಶ್ವಾಸ ನಿರ್ಣಯ ಪಾಸ್ ಆಗಲು ಬೇಕಾದ ಸಂಖ್ಯೆ- 26 ಬಿಜೆಪಿ- 18, ಕಾಂಗ್ರೆಸ್- 12, ಜೆಡಿಎಸ್- 2, ಪಕ್ಷೇತರ- 2, ಎಸ್‌ಡಿಪಿಐ- 1

---ಇಂದು ವಿಶ್ವಾಸ ಮತಗಳ ಪರೀಕ್ಷೆ ನಗರಸಭೆ ಬಿಜೆಪಿಯ 18 ಸದಸ್ಯರ ಪೈಕಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೊರತುಪಡಿಸಿದರೆ 17 ಸದಸ್ಯರು, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ವಿಧಾಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್, ಎಸ್.ಎಲ್. ಭೋಜೇಗೌಡ, ಜೆಡಿಎಸ್‌ನ ಇಬ್ಬರು ನಗರಸಭಾ ಸದಸ್ಯರು, ಜೆಡಿಎಸ್ ಬೆಂಬಲಿತ ಓರ್ವ ಪಕ್ಷೇತರರು ಹಾಗೂ ಎಸ್‌ಡಿಪಿಐ ಓರ್ವ ಸದಸ್ಯರ ಬೆಂಬಲ ಸೇರಿದರೆ ಒಟ್ಟು 24 ಸದಸ್ಯರು, ಅಧ್ಯಕ್ಷರ ವಿರುದ್ಧ ಮತ ಚಲಾವಣೆ ಮಾಡಿದರೆ, ಅವಿಶ್ವಾಸ ನಿರ್ಣಯಕ್ಕೆ ಇನ್ನು 2 ಮತಗಳು ಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ 12 ನಗರಸಭೆ ಸದಸ್ಯರಿದ್ದಾರೆ. ಓರ್ವರು ಪಕ್ಷೇತರ ಬೆಂಬಲ, ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಇನ್ನೊಂದೆಡೆ 15 ಮತಗಳು ಆಗಲಿವೆ. ಮತದಾನದ ವೇಳೆ ಅಧ್ಯಕ್ಷರ ವಿರುದ್ಧ 24 ಮತಗಳು ಚಲಾವಣೆಯಾಗಿ, ಕಾಂಗ್ರೆಸ್ ತಟಸ್ಥವಾದರೆ ಅಲ್ಲಿಗೆ ಕಾಂಗ್ರೆಸ್‌ ಅಧ್ಯಕ್ಷರ ಪರವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಆಗ, ಅಧ್ಯಕ್ಷರಿಗೆ ವಿಶ್ವಾಸ ಮತದಲ್ಲಿ ಗೆಲುವಾಗಲಿದೆ. ಇಲ್ಲಿಗೆ ಬಿಜೆಪಿ ಅಧ್ಯಕ್ಷರು ಮುಂದುವರೆಯಲು ಕಾಂಗ್ರೆಸ್ ಪಕ್ಷ ಸಾಥ್ ನೀಡಿದಂತಾಗುತ್ತದೆ. ಆಗ ಬಿಜೆಪಿಗೆ ಆಡಳಿತದಲ್ಲಿ ಮುಂದುವರೆದಿದ್ದೇವೆ ಎಂದು ಖುಷಿಯಿಂದ ಹೇಳಬೇಕೋ, ಅಥವಾ ಈ ಗೇಮ್‌ನಲ್ಲಿ ಸೋತಿದ್ದೇವೋ ಎಂಬ ಗೊಂದಲ ಶುರುವಾಗಲಿದೆ. ------------ಏನಿದು ಅತಂತ್ರ ?

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿದೆ. ಅಧ್ಯಕ್ಷ ಸ್ಥಾನ ಬಿಸಿಎಂ (ಎ)ಗೆ ಬಂದಿದ್ದರಿಂದ 30 ತಿಂಗಳ ಅವಧಿಯನ್ನು ವರಸಿದ್ದಿ ವೇಣುಗೋಪಾಲ್ ಹಾಗೂ ಮಧು ಕುಮಾರ್ ರಾಜ್ ಅರಸ್ ಅವರಿಗೆ ಹಂಚಿಕೆ ಮಾಡಲಾಗಿತ್ತು. 2022ರ ಜನವರಿಯಲ್ಲಿ ವರಸಿದ್ದಿ ವೇಣುಗೋಪಾಲ್ ನಗರಸಭೆ ಅಧ್ಯಕ್ಷರಾದರು. ನಿಗದಿತ ಸಮಯಕ್ಕೆ ರಾಜೀನಾಮೆ ನೀಡದೆ ಇದ್ದರಿಂದ ಅವರ ವಿರುದ್ಧ ಬಿಜೆಪಿ ನಗರಸಭಾ ಸದಸ್ಯರು ಅಸಮಾಧಾನ ಹೊರ ಹಾಕಿದ್ದರು. ಎರಡು ಬಾರಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪುನಃ ವಾಪಸ್ ಪಡೆದರು. ಇದರಿಂದ ಬಿಕ್ಕಟ್ಟು ಉಂಟಾಯಿತು. ವರಸಿದ್ದಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ----

ಪೋಟೋ ಫೈಲ್ ನೇಮ್ 9 ಕೆಸಿಕೆಎಂ 5