ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಸಮೀಕ್ಷೆ ಮಾಡಲು ಮುಂದಾಗಿದ್ದು, ಜಾತಿಗಣತಿ ಸಮೀಕ್ಷೆಯಲ್ಲಿ ಸಮುದಾಯದವರು ಮಾದಿಗ ಎಂದು ನಮೂದಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಜಾತಿ ಗಣತಿ ಕಲಂನಲ್ಲಿ ಮಾದಿಗ ಎಂದು ನಮೂದಿಸಬೇಕು. ಪೆನ್ಸಿಲ್‌ನಿಂದ ಬರೆಸದೆ ಪೆನ್ನಿನಿಂದ ಬರೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪರಿಶಿಷ್ಟ ಜಾತಿಗಳ ನ್ಯಾಯಪರ ವೇದಿಕೆಯ ರಾಜ್ಯ ಸಂಚಾಲಕ ಬಸವರಾಜು ಕೌತಾಳ್, ಮಾದಿಗ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ, ಡಾ.ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್, ಹನೂರು ತಾಲೂಕು ಗ್ಯಾರಂಟಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಪಾಳ್ಯ ರಾಜಪ್ಪ, ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಬೂದಬಾಳು ಮಹದೇವು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಬಾಲರಾಜು, ಸಿ.ಸೋಮು, ಯಳಂದೂರು ತಾಲೂಕು ಅಧ್ಯಕ್ಷ ಮರಪ್ಪ, ಬ್ಯಾಂಕ್ ಬಸವರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ನಿಟ್ರೆ ಮಹದೇವು, ಮಾಜಿ ಪುರಸಭಾ ಅಧ್ಯಕ್ಷ ರಂಗಸ್ವಾಮಿ, ಹಸುಗೂಲಿ ಸಿದ್ದಯ್ಯ, ನಿವೃತ್ತ ನೌಕರರ ಜವರಯ್ಯ, ಸಿ.ಮಹದೇವಯ್ಯ, ರೇವಣ್ಣ, ಎಚ್.ಎಚ್. ನಾಗರಾಜು, ಜಗದೀಶ್, ಚಾಮರಾಜು, ಗುರುಲಿಂಗಯ್ಯ, ಮುಳ್ಳೂರು ಮಂಜು, ದ್ಯಾರ್ಕಿ, ಶಿವಮಲ್ಲು, ಆರ್.ಕೆ.ಶಿವಕುಮಾರ್, ರಾಚಯ್ಯ, ಎಂ.ಶಿವಕುಮಾರ್, ಗೋವಿಂದ ಹಾಲಹಳ್ಳಿ, ರಂಗಸ್ವಾಮಿ, ಮೂಡಳ್ಳಿ ರಾಚಪ್ಪ ರಾಜು, ಹರವೆ ಮಹದೇವಯ್ಯ ಭಾಗವಹಿಸಿದ್ದರು.