ಎನ್. ಹಾರಿಕಾ ಅವರು ಬೆಂಗಳೂರಿನಲ್ಲಿ ಆಗಸ್ಟ್‌ ನಲ್ಲಿ ನಡೆದ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ 2 ಚಿನ್ನದ ಪದಕ, 2 ಕಂಚಿನ ಪದಕ

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರ ಉತ್ತಮ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಆರ್ಥಿಕವಾಗಿಯೂ ಸಹಾಯ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.

ರಾಮಕೃಷ್ಣನಗರದಲ್ಲಿ ನಡೆದ ಸಭೆಯಲ್ಲಿ ಮೈಸೂರಿನ ಮಾಜಿ ಸೈನಿಕರಾದ ದಿ. ಹವಾಲ್ದಾರ್ ನವೀನ್ ಹಾಗೂ ಭವ್ಯ ಅವರ ಪುತ್ರಿ ಕೇಂದ್ರೀಯ ವಿದ್ಯಾಲಯದಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಈಜು ಪಟು ಎನ್. ಹಾರಿಕಾ ಅವರಿಗೆ ಪ್ರೋತ್ಸಾಹಧನವಾಗಿ 40 ಸಾವಿರ ರು. ವೈಯಕ್ತಿಕ ಚೆಕ್ ವಿತರಿಸಿ ಅವರು ಮಾತನಾಡಿದರು.

ಎನ್. ಹಾರಿಕಾ ಅವರು ಬೆಂಗಳೂರಿನಲ್ಲಿ ಆಗಸ್ಟ್‌ ನಲ್ಲಿ ನಡೆದ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ 2 ಚಿನ್ನದ ಪದಕ, 2 ಕಂಚಿನ ಪದಕ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಮೇ ನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಕ್ ಸ್ಟೇಟ್ ಮೀಟ್‌ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ, ಒಂದು ಬೆಳ್ಳಿ ಪದಕ ಪಡೆದಿದ್ದಾರೆ.

ಡಿಸೆಂಬರ್‌ ನಲ್ಲಿ ದೆಹಲಿಯಲ್ಲಿ ನಡೆಯುವ ಸ್ಕೂಲ್‌ ಗೆಮ್ ಫೆಡರೇಷನ್‌ ಆಫ್‌ ಇಂಡಿಯಾ ನಡೆಸುವ ಈಜು ಸ್ಪರ್ಧೆಯ 4 ಈವೆಂಟ್‌ ಗಳಿಗೆ ಆಯ್ಕೆಯಾಗಿದ್ದಾರೆ. ಇದುವರೆವಿಗೆ 50 ಕ್ಕೂ ಹೆಚ್ಚು ಪದಕಗಳನ್ನು ಪಡೆದು ಅತ್ತುತ್ತಮ ಕ್ರೀಡಾಪಟುವಾಗಿದ್ದಾರೆ. ಈಕೆ ಈಜುತರಬೇತುದಾರರಾದ ಪವನ್‌ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ಈಕೆಗೆ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತೇನೆ ಎಂದು ಅವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯಈಜು ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆಕೀರ್ತಿತರಬೇಕು ಎಂದು ಶುಭಹಾರೈಸಿದರು.

ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ. ದಿವಾಕರ, ರವಿಕುಮಾರ್, ರಮೇಶ್ ಬಾಬು, ಕೆ.ಬಿ. ನಾಣಯ್ಯ, ಶಂಕರಪ್ಪ, ಬಿ.ಎಂ. ಚಿತ್ರಾ, ನಂಜುಂಡ ಸ್ವಾಮಿ ಇದ್ದರು.