ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆಯಿಂದ ರೈತರ ಸಮಸ್ಯೆಗಳ ಕುರಿತು ಮುಂದಿನ ಹೋರಾಟ ಬಗ್ಗೆ ಕಾರ್ಯಕರ್ತರು ಪೂರ್ವಭಾವಿ ಸಭೆ ನಡೆಸಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘಟನೆ, ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.
ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಯಾವುದೇ ಕಚೇರಿಯಲ್ಲಿ ಹಣ ನೀಡದಿದ್ದರೆ ಯಾವ ಕೆಲಸಗಳು ಆಗುತ್ತಿಲ್ಲ. ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯವಾಗಿದೆ.ಜಿಲ್ಲೆಯಲ್ಲಿ ರೈತ ಸಂಘ ಕಳೆದ 40 ವರ್ಷಗಳಿಂದ ರೈತ ಪರ ಚಳವಳಿ ಮೂಲಕ ಹೋರಾಟ ನಡೆಸಿಕೊಂಡು ಬಂದಿದೆ. ಆದರೆ, ಈಗ ಹೋರಾಟಗಾರರಿಗೆ 60 ರಿಂದ 70 ವರ್ಷಗಳ ಅಂಚಿನಲ್ಲಿದ್ದು, ಯುವ ಹೋರಾಟಗಾರರ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ಮೂಲಕ ರೈತ ಯುವ ಮುಖಂಡರನ್ನು ಸಂಘಟನೆಗೆ ಸೆಳೆಯುವ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೊದಲು ಶ್ರೀರಂಗಪಟ್ಟಣದಿಂದಲೇ ಆರಂಭಿಸಿ ಜಿಲ್ಲಾದ್ಯಂತ ಯುವ ಶಕ್ತಿಯನ್ನು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ರೈತರ ಪರ ನಿಲ್ಲಲು ಯುವ ಹೋರಾಟಗಾರರಿಗೆ ಮುಂದಾಳತ್ವ ನೀಡುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ದೊಡ್ಡಪಾಳ್ಯ ಚಂದ್ರು, ತಮ್ಮೆಗೌಡ, ಕೃಷ್ಣಪ್ಪ, ತೇಜಸ್, ಮಹೇಶ್ ಗೌಡ ಸೇರಿದಂತೆ ಇತರ ರೈತ ಮುಖಂಡರು ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಮಂಡ್ಯ:
ವಿದ್ಯಾನಗರದ ಶ್ರೀವ್ಯಾಸರಾಜ ಮಠ (ಸೋಸಲೆ) ಆವರಣದಲ್ಲಿ ಆ.9 ರಿಂದ 12ರವರೆಗೆ ಆಯೋಜಿಸಿರುವ ಶ್ರೀರಾಘವೇಂದ್ರ ಗುರು ಸಾರ್ವಭೌಮರ 354ನೇ ಮಹೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕ್ಕಿಂತ ಹೆಚ್ಚಿನ ಅಂಕ ಪಡೆದವರಿಗೆ ಆ.9ರ ಸಂಜೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ಐಸಿಎಸ್‌ಇ, ಸಿಬಿಎಸ್‌ಇ ಹಾಗೂ ಸ್ಟೇಟ್ ಸಿಲಬಸ್ ನಲ್ಲಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಓದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.5 ಕೊನೆ ದಿನ. ಹೆಚ್ಚಿನ ವಿವರಗಳಿಗೆ ಕೆ.ಕೆ.ವಿಜಾಪುರ್ ಮೊ-9449855050, ಭಾರತಿ ಅಡಿಗ- ಮೊ9770447028, ಕೇಶವ ಕೌಂಡಿನ್ಯ - 9008714017 ಸಂಪರ್ಕಿಸಬಹುದು ಎಂದು ಶ್ರೀವ್ಯಾಸರಾಜ ಮಠದ ವ್ಯವಸ್ಥಾಪಕ ಎಸ್.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.