ನಾಳೆ ಎಚ್‌ಡಿಕೆ ಕಾರ್ಯಕರ್ತರೊಂದಿಗೆ ಸಭೆ

| Published : Mar 12 2024, 02:07 AM IST

ಸಾರಾಂಶ

ಮಾರ್ಚ್ ೧೩ ರಂದು ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾರ್ಚ್ ೧೩ ರಂದು ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅಂದು ಬೆಳಿಗ್ಗೆ ೧೦ ರಿಂದ ೧೧ ಗಂಟೆ ವೇಳೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಹಾಗೂ ಒಳ್ಳೆಯ ಕೆಲಸಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮ ವಹಿಸಿ ಕೆಲಸ ಮಾಡುವ ಸಲುವಾಗಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಲಿದ್ದಾರೆ ಎಂದರು. ಹಾಸನ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಅಹಕಾರವಿದ್ದು, ಜಿಲ್ಲಾಧಿಕಾರಿಗಳು ಜಿಪಂ ಸಿಇಒ೨ ೫ ಲಕ್ಷಗಳನ್ನು ಶಾಸಕರಿಗೆ ಕೊಡಲಾಗಿದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ ಪಿಡಿಒ ಗಳ, ಪಂಚಾಯಿತಿ ಕಾರ್ಯದರ್ಶಿಗಳ ಕರೆಯಿಸಿ ಕುಡಿಯುವ ನೀರಿನ ಬಗ್ಗೆ ಗಮನ ಕೊಡಬೇಕು. ನೀರಿಲ್ಲದೇ ರೈತರ ಬೆಳೆ ನಷ್ಟವಾಗಿದ್ದು, ಅದಕ್ಕೂ ಕೂಡ ಇನ್ನು ಬಿಡುಗಡೆ ಮಾಡಿರುವುದಿಲ್ಲ. ಕೊನೆ ಪಕ್ಷ ಕುಡಿಯುವದಕ್ಕಾದರೂ ನೀರು ಕೊಡಬಾರದ ಎಂದರು. ನನ್ನ ಹೊಳೆನರಸಿಪುರ ತಾಲೂಕು ಒಂದೆಯಲ್ಲ. ಇಡೀ ಜಿಲ್ಲೆಯ ಕೆಲ ತಾಲೂಕನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಿಂದಿನ ಸರಕಾರಗಳು ಒಂದೊಂದು ತಾಲೂಕಿಗೆ ೫೦ ಲಕ್ಷಗಳನ್ನು ಕೊಡಲಾಗುತಿತ್ತು. ಕೊಳವೆ ಬಾವಿ ತೋಡಿಸಿಕೊಳ್ಳುವುದು, ಪೈಪ್ ಲೈನ್ ಮಾಡುವುದು ಆಗುತಿತ್ತು. ಈಗ ಎನ್.ಡಿ.ಆರ್. ಗೈಡ್ಲೈನ್ ಪ್ರಕಾರ ಒಂದು ಬೋರ್ ತೆಗೆಸಲು ಬರುವುದಿಲ್ಲ. ರಿಪೇರಿ ಮಾಡಿಸಲು ಆಗುವುದಿಲ್ಲ. ಒಂದು ಪೈಪ್ ಲೈನ್ ಆಗಿಲ್ಲ. ಆಗೆ ಉಳಿದಿದೆ ಎಂದರು. ಗ್ಯಾರಂಟಿಗೊಸ್ಕರ ರೈತರ ಪರಿಹಾರ ಹಣ ಕೊಟ್ಟಿಲ್ಲ. ಕುಡಿಯುವ ನೀರನ್ನಾದರೂ ಕೊಡಿ ಎಂದು ನಾನು ಒತ್ತಾಯ ಮಾಡುತ್ತೇನೆ. ಡಿಎಂಎಫ್ ಗ್ರಾಂಟ್ ಇದಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಕಳೆದ ಆರು ತಿಂಗಳಿನಿಂದ ಇಟ್ಟುಕೊಂಡು ಕೇಳಿದರೇ ಮಂತ್ರಿ ಕೇಳುತ್ತೇನೆ ಎನ್ನುತ್ತಾರೆ. ಮಂತ್ರಿ ಕೇಳಿಯೇ ಚುನಾವಣೆ ನಡೆಸುತ್ತಾರಾ. ೬೦ ಲಕ್ಷ ರೂಗಳನ್ನು ಎಸ್‌ಟಿಆರ್‌ ನಲ್ಲಿ ಕೊಡಿಸಿರುವುದಾಗಿ ಸುಮಲತಾ ಹೇಳಿದ್ದು, ಇರುವ ಐದು ವರೆ ಕೋಟಿಯನ್ನು ಶಾಲಾ ಕಟ್ಟಡ ಇರಬಹುದು, ಮೂಲಭೂತ ಸೌಕರ್ಯಕ್ಕೆ ಕೊಡಿ ಎಂದು ಮನವಿ ಮಾಡಿದರು. ೨೦೦೬ ರಿಂದ ೨೦೦೮ರ ವರೆಗೂ ಜಿಲ್ಲೆಗೆ ಏನು ಕೊಡಲಾಗಿದೆ ಈ ೧೬ ತಿಂಗಳಲ್ಲಿ ಏನು ಕೊಟ್ಟಿದ್ದೀರಾ ಎಲ್ಲಾ ಬಗ್ಗೆ ನಮ್ಮ ಕಾರ್ಯಕರ್ತರ ಜೊತೆ ಕುಳಿತು ಮಾತನಾಡಲಾಗುವುದು ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದು. ಕೆಲವು ಕಡೆ ನಾವು ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.