ಮೇಲ್ಕಾರ್‌ ಸರ್ವೀಸ್‌ ರಸ್ತೆ ಡಾಂಬರು ಕಾಮಗಾರಿ ಆರಂಭ

| Published : Aug 18 2024, 01:45 AM IST

ಸಾರಾಂಶ

ವಾರದ ಗಡುವು ನೀಡಿದ್ದ ಕಂಪನಿ ಕೊಟ್ಟ ‌ಮಾತಿನಂತೆ ಡಾಂಬರೀಕರಣ ಕಾಮಗಾರಿ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮೆಲ್ಕಾರಿನ ಸರ್ವೀಸ್ ರಸ್ತೆಯ ಒಂದು ಭಾಗದಲ್ಲಿ ಕೆ.ಎನ್.ಆರ್.ಸಿ‌.ಕಂಪನಿ ಡಾಂಬರೀಕರಣ ಕಾಮಗಾರಿ ಆರಂಭಿಸಿದೆ. ಬಿಸಿರೋಡಿನಿಂದ ಮೆಲ್ಕಾರ್ ಸಂಪರ್ಕಿಸುವ ಸರ್ವೀಸ್ ರಸ್ತೆಗೆ ಮೆಲ್ಕಾರಿನ ಪೇಟೆ ಭಾಗದಲ್ಲಿ ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಸಂಜೆ ಚಾಲನೆ ದೊರಕಿದೆ.

ಮಳೆಗೆ ಕೆಸರು ಮಳೆ ನಿಂತರೆ ಉಸಿರಾಟಕ್ಕೆ ತೊಂದರೆಯಾಗುವಂತಹ ಧೂಳು ಸಮಸ್ಯೆ ಎಂದು ಆರೋಪಿಸಿ ಇಲ್ಲಿನ ವರ್ತಕರು ಹಾಗೂ ಸಾರ್ವಜನಿಕರು ಕಂಪನಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ತಾತ್ಕಾಲಿಕವಾಗಿ ಡಾಂಬರು ಕಾಮಗಾರಿ ನಡೆಸುವಂತೆ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಕಂಪೆನಿ ಅಧಿಕಾರಿಗಳಲ್ಲಿ ತಾಕೀತು ಮಾಡಿದ್ದರು.

ವಾರದ ಗಡುವು ನೀಡಿದ್ದ ಕಂಪನಿ ಕೊಟ್ಟ ‌ಮಾತಿನಂತೆ ಡಾಂಬರೀಕರಣ ಕಾಮಗಾರಿ ಆರಂಭಿಸಿದೆ.