ಕೊಡಗು ಜಿಲ್ಲೆಯ 11 ಮಂದಿ ಜೂನಿಯರ್ ಹಾಕಿ ರಾಜ್ಯ ತಂಡಕ್ಕೆ ಆಯ್ಕೆ

| Published : Aug 15 2025, 01:00 AM IST

ಸಾರಾಂಶ

ಹಾಕಿ ಕರ್ನಾಟಕ ತಂಡದಲ್ಲಿ ಕೊಡಗು ಜಿಲ್ಲೆಯ ಮೂಲದ 11 ಆಟಗಾರರು ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಂಜಾಬ್ ನ ಜಲಂಧರ್ನಲ್ಲಿ ಆ. 12 ರಿಂದ 23ರ ತನಕ ಹಾಕಿ ಇಂಡಿಯಾ ವತಿಯಿಂದ ಆಯೋಜಿತಗೊಂಡಿರುವ 15 ನೇ ಹಾಕಿ ಇಂಡಿಯಾ ಜೂನಿಯರ್ ಮೆನ್ ನ್ಯಾಷನಲ್ ಚಾಂಪಿಯನ್ಶಿಪ್– 2025ಕ್ಕೆ ಹಾಕಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಹಾಕಿ ಕರ್ನಾಟಕ ತಂಡದಲ್ಲಿ ಕೊಡಗು ಜಿಲ್ಲೆಯ ಮೂಲದ 11 ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದ ಕೋಚ್ ಹಾಗೂ ವ್ಯವಸ್ಥಾಪಕರಾಗಿಯೂ ಜಿಲ್ಲೆಯ ಇಬ್ಬರು ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದೆ.

ತಂಡದ ನಾಯಕನಾಗಿ ಕೊಡಗಿನವರಾದ ಧ್ರುಮ ಬಿ. ಎಸ್. ಕಾರ್ಯನಿರ್ವಹಿಸಲಿದ್ದು ಇತರ ಆಟಗಾರರಾಗಿ ನಾಪೋಕ್ಲು ಗ್ರಾಮದ ಬಿದ್ದಾಟಂಡ ಬೋಪಣ್ಣ, ಕುಲ್ಲೇಟಿರ ವಚನ್ ಕಾಳಪ್ಪ, ವಿಶ್ವನಾಥ್, ಹರ್ಷಿತ್ ಕುಮಾರ್, ಮಂಡೇಡ ಅಚ್ಚಯ್ಯ, ಬಲ್ಯಂಡ ಸಂಪನ್ ಗಣಪತಿ, ಚೋಯಮಾಡಂಡ ಆಕರ್ಷ್ ಬಿದ್ದಪ್ಪ, ಪೂಜಿತ್ ಕೆ. ಆರ್, ಕೋಳೆರ ಹೃತಿಕ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ತಂಡದಲ್ಲಿದ್ದಾರೆ.

ತಂಡದ ಕೋಚ್ ಆಗಿ ಮೇಚಂಡ ತನು ನಂಜಪ್ಪ ಹಾಗೂ ವ್ಯವಸ್ಥಾಪಕರಾಗಿ ಬಲ್ಲಮಾವಟ್ಟಿ ಗ್ರಾಮದ ಅಪ್ಪಚೆಟ್ಟೋಳಂಡ ಅಯ್ಯಪ್ಪ ಭಾಗವಹಿಸಲಿದ್ದಾರೆ.