ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಕುಂಡಿ
ಗ್ರಾಪಂ ಅಧಿಕಾರಿ ಹಾಗೂ ಸಿಇಒ ವಿರುದ್ಧ ಗ್ರಾಪಂ ಸದಸ್ಯರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲದಲ್ಲಿ ನಡೆದಿದೆ.ಗ್ರಾಪಂನಲ್ಲಿ ಸುಮಾರು ಒಂದು ವರ್ಷದಿಂದ ಪಂಚಾಯ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಗ್ರಾಪಂ ಅಧ್ಯಕ್ಷರು ಅನಾರೋಗ್ಯದಿಂದ ಪಂಚಾಯ್ತಿಗೆ ಬರುತ್ತಿಲ್ಲ, ಇಲ್ಲಿಯವರೆಗೆ ಯಾವುದೇ ಸಭೆಗಳು ಕೂಡ ನಡೆದಿಲ್ಲ ಇದ್ದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೂಡ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಮೂರು ವರ್ಷದಿಂದ ಯಾವುದೇ ನೇರಗಾದಲ್ಲಿ ಎನ್.ಎಂ.ಆರ್. ತೆಗೆಯದೆ ಯಾವುದೇ ಕಾಮಗಾರಿಗಳು ನಡೆಯದೆ ಗ್ರಾಮೀಣ ಭಾಗದಲ್ಲಿ ಯಾವುದೇ ಕೆಲಸವಾಗದೆ ಕುಂಠಿತವಾಗಿದೆ ಎಂದು ಆರೋಪಿಸಿದರು.
ಹೆಡಿಯಾಲ ಗ್ರಾಪಂ ಕ್ಷೇತ್ರದಲ್ಲಿ ಕಟ್ಟಕಡೆಯ ಗ್ರಾಪಂ ಆಗಿದೆ. ವಸೂಲಾತಿಯಲ್ಲಿ ಮುಂದೆ ಇದ್ದರೂ ಅಭಿವೃದ್ಧಿ ಮಾಡಲು ಅಧಿಕಾರಿಗಳು ಇಲ್ಲದೇ ಅಧಿಕಾರಿಗಳಿಂದ ಮಲತಾಯಿ ಧೋರಣೆಯಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದ್ದರ ಬಗ್ಗೆ ಜಿಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ಸಮಸ್ಯೆಗಳ ಬಗ್ಗೆ ಜಿಪಂ ಅಧಿಕಾರಿಗಳಿಗೆ ಮನವಿ ಮಾಡಲು ಹೋದರೆ ಜಿಪಂ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಾರೆ, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಂತಹ ಅಧಿಕಾರಿಗಳು ಬೇಕೆ ಎಂದು ಪ್ರಶ್ನಿಸಿದರು.23 ಸದಸ್ಯರುಳ್ಳ ಈ ಗ್ರಾಪಂನಲ್ಲಿ ಯಾವುದೇ ಕೆಲಸಗಳು ನಡೆಯದೇ ತಬ್ಬಲಿಯಾಗಿದೆ, ಈ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿರುವ ಫಲಾನುಭವಿಗಳಿಗೆ ಯಾವುದೇ ಹಣ ಪಾವತಿ ಮಾಡಿಲ್ಲ, ಇದ್ದರಿಂದ ಬೆಸತ್ತ ಸಾರ್ವಜನಿಕರು ಅಧಿಕಾರಿಗಳಿಗೆ ದಿನವಿಡೀ ಶಾಪ ಹಾಕುತ್ತಿದ್ದಾರೆ, ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳಲು ದಿನನಿತ್ಯ ಸಾರ್ವಜನಿಕರು ಪಂಚಾಯಿತಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮಗಳಲ್ಲಿ ಇ ಸ್ವತ್ತು ಮಾಡಿಸಿಕೊಳ್ಳಬೇಕಾದರೆ 20-30 ಸಾವಿರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಪಿಸಿದ್ದಾರೆ, ತಕ್ಷಣ ನಮ್ಮ ಪಂಚಾಯತಿಗೆ ಸರಿಯಾದ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡದಿದ್ದಲಿ ಜಿಪಂ ಕಚೇರಿ ಮುಂದೆ ಕಾಡಾಂಚಿನ ಗ್ರಾಮದ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಕಾರಾರು ಎಚ್ಚರಿಕೆ ನೀಡಿದ್ದಾರೆ.
ಗ್ರಾಪಂ ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ಗೋವಿಂದರಾಜು, ಸತೀಶ್, ನೆಹಮತ್ ಉಲ್ಲಾಖಾನ್, ಅಸ್ರಫ್ ಅಲಿ, ಮಂಜುಳ, ಅನುಪಮಾ, ಚನ್ನಪ್ಪ, ಕೃಷ್ಣ, ಭಾಗ್ಯ, ಬಂಗಾರಿ, ರಾಣಿ, ನೀಲಮ್ಮ, ಚಿಕ್ಕಮ್ಮ, ಮಹೇಂದ್ರ, ಶಿವರತ್ನ, ರಾಜಮ್ಮ, ಮಂಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.