ಸದಸ್ಯರು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು: ವಿಶ್ವೇಶ್ವರ

| Published : Nov 05 2024, 12:33 AM IST

ಸದಸ್ಯರು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು: ವಿಶ್ವೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕೆಂಪೇಗೌಡ ಸಹಕಾರ ಸಂಘ ಸ್ಥಾಪನೆಯಾಗಿದೆ. ಹೀಗಾಗಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು. ಬಹಳಷ್ಟು ಸಹಕಾರ ಸಂಘಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕೆಲವು ಸಣ್ಣ ತಪ್ಪುಗಳಿಂದಾಗಿ ಸಂಘಗಳು ಸ್ಥಗಿತವಾಗುತ್ತಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ಶ್ಯಾದನಹಳ್ಳಿ ವಿಶ್ವೇಶ್ವರ ಹೇಳಿದರು.

ಪಟ್ಟಣದ ಶಾಂತಿನಗರದ ಶ್ರೀ ಸಾಯಿ ಮಂದಿರದಲ್ಲಿ ನಡೆದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕೆಂಪೇಗೌಡ ಸಹಕಾರ ಸಂಘ ಸ್ಥಾಪನೆಯಾಗಿದೆ. ಹೀಗಾಗಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ವಿಜಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ಚಲುವೇಗೌಡ ಮಾತನಾಡಿ, ಬಹಳಷ್ಟು ಸಹಕಾರ ಸಂಘಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕೆಲವು ಸಣ್ಣ ತಪ್ಪುಗಳಿಂದಾಗಿ ಸಂಘಗಳು ಸ್ಥಗಿತವಾಗುತ್ತಿವೆ. ಈ ಸಂಘವನ್ನು ಆ ರೀತಿ ಮಾಡದೇ ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕಿದೆ ಎಂದರು.

ಒಕ್ಕಲಿಗ ಜನಾಂಗದ ಸಮುದಾಯಕ್ಕೆ ಏನಾದರೂ ಅನುಕೂಲ ಮಾಡಿಕೊಡಬೇಕು ಎಂಬ ಸದುದ್ದೇಶದಿಂದ ಕೆಂಪೇಗೌಡ ಪತ್ತಿನ ಸಹಕಾರ ಸಂಘವನ್ನು ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಆದರೆ ಈ ಸಂಘದಿಂದ ಜನಾಂಗದ ಬಡ ಜನರ ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯಕ್ಕೆ ಅನುಕೂಲವಾಗುವ ರೀತಿ ಸಹಾಯ ಮಾಡಬೇಕು ಎಂದು ತಿಳಿಸಿದರು.

ಮಹಾಸಭೆಯಲ್ಲಿ ಸಂಘದ ಪ್ರವರ್ತಕರಾದ ಜನತಾಭಂಡಾರ ರಾಮಕೃಷ್ಣೇಗೌಡ, ಶಂಕಹಳ್ಳಿ ಕುಮಾರ್, ಹುಲ್ಕೆರೆಕೊಪ್ಪಲು ಪಾಪೇಗೌಡ, ಡಾಮಡಹಳ್ಳಿ ಸೌಭಾಗ್ಯ, ಪಾಂಡವಪುರ ಬಿ.ಕೆ.ರೂಪಾ, ಚಿನಕುರಳಿ ನರಸಿಂಹೇಗೌಡ, ತಾಳಶಾಸನ ವೀರಭದ್ರಸ್ವಾಮಿ, ಕೆನ್ನಾಳು ಮಹೇಶ್, ಅರಳಕುಪ್ಪೆ ಇಂದಿರೇಶ್, ಕನಗನಮರಡಿ ಎ.ನಾಗರಾಜು, ನೀಲನಹಳ್ಳಿ ಬಾಜೇಗೌಡ, ಪಾಂಡವಪುರ ವೇದಾಂತ್, ಸೀತಾಪುರ ಹೊನ್ನೇಗೌಡ, ಕೊಡಾಲ ರಾಜೇಗೌಡ ಇತರರಿದ್ದರು.