ರಾಮನಗರ: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ನೋಂದಾಯಿತ ಯೂನಿಟಿ ಲೀಡ್ ಕೋ ಆಪರೇಟಿವ್ ಸೊಸೈಟಿ ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ಹಮ್ಮಿಕೊಂಡಿದ್ದು, 18 ವರ್ಷ ತುಂಬಿದ ಮಹಿಳೆಯರು ಮತ್ತು ಪುರುಷರು ತಲಾ ₹1125 ಷೇರು ಹಣ ನೀಡಿ ಸದಸ್ಯತ್ವ ಪಡೆಯಬಹುದು ಎಂದು ಸೊಸೈಟಿ ಅಧ್ಯಕ್ಷ ಬಿ.ಅನ್ನದಾನಪ್ಪ ತಿಳಿಸಿದರು

ರಾಮನಗರ: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ನೋಂದಾಯಿತ ಯೂನಿಟಿ ಲೀಡ್ ಕೋ ಆಪರೇಟಿವ್ ಸೊಸೈಟಿ ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ಹಮ್ಮಿಕೊಂಡಿದ್ದು, 18 ವರ್ಷ ತುಂಬಿದ ಮಹಿಳೆಯರು ಮತ್ತು ಪುರುಷರು ತಲಾ ₹1125 ಷೇರು ಹಣ ನೀಡಿ ಸದಸ್ಯತ್ವ ಪಡೆಯಬಹುದು ಎಂದು ಸೊಸೈಟಿ ಅಧ್ಯಕ್ಷ ಬಿ.ಅನ್ನದಾನಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊಸೈಟಿ ಮುಖ್ಯ ಕಚೇರಿ ಕನಕಪುರದಲ್ಲಿದ್ದು, ಶೀಘ್ರದಲ್ಲಿಯೇ ಜಿಲ್ಲಾ ಕೇಂದ್ರ ರಾಮನಗರ ಸೇರಿ ಎಲ್ಲಾ ತಾಲೂಕುಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು. ಈಗ ಸೊಸೈಟಿಯಲ್ಲಿ 1 ಸಾವಿರ ಷೇರುದಾರರಿದ್ದು, ಆಂದೋಲನದಲ್ಲಿ 10 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.

ಸೊಸೈಟಿಯಿಂದ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಕೆಎಎಸ್, ಐಎಎಎಸ್, ಐಪಿಎಸ್, ಐಎಫ್ಎಸ್, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಆಯೋಜಿಸಲಾಗುವುದು. ಕಂಪ್ಯೂಟರ್, ವೃತ್ತಿಪರ ಕೋರ್ಸ್ ತರಬೇತಿ, ಪ್ರತಿಭಾ ಪುರಸ್ಕಾರ, ಇ-ಸ್ಟಾಂಪಿಂಗ್ ಸೇವಾ ಸೌಲಭ್ಯ, ಪಾನ್ ಕಾರ್ಡ್, ಯಶಸ್ವಿನಿ ಕಾರ್ಡ್ ವಿತರಣೆ, ಸದಸ್ಯರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ, ವಾಹನ ವಿಮೆ, ಸ್ವ ಸಹಾಯ ಗುಂಪುಗಳ ರಚಿಸಿ ಕಿರುಸಾಲ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಹೊಲಿಗೆ, ಬ್ಯೂಟಿ ಪಾರ್ಲರ್, ಜೇನು, ಅಣಬೆ ಬೇಸಾಯ ಇತ್ಯಾದಿ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷೆ ಡಿ.ಎನ್.ಆಶಾ, ಸಿಇಒ ಪ್ರವೀಣ್ ಕುಮಾರ್, ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ವೆಂಕಟರಮಣಯ್ಯ, ಆರ್.ರಮೇಶ್ , ಎಂ.ಪ್ರಸನ್ನ, ಬಿ.ಎಲ್.ಲೋಕೇಶ್ , ಶಿವರಾಜು, ಎಚ್.ವಿ.ಮುತ್ತುರಾಜ್ , ಎಸ್.ಧನಂಜಯ್ಯ, ಮುತ್ತುರಾಜು, ವಿ.ದೀಪಿಕಾ, ಎಂ.ಸಿ.ರಾಜೇಂದ್ರ ಪ್ರಸಾದ್ ಮತ್ತಿತರರಿದ್ದರು.

15ಕೆಆರ್ ಎಂಎನ್ 1.ಜೆಪಿಜಿ

ಯೂನಿಟಿ ಲೀಡ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಅನ್ನದಾನಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.