ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಸದಸ್ಯ ಸ್ಥಾನವನ್ನು ಕಳೆದ ವರ್ಷ ಜಿಲ್ಲಾಧಿಕಾರಿಗಳು ಅನರ್ಹ ಮಾಡಿ ಆದೇಶ ನೀಡಿದ್ದನ್ನು ಪ್ರಶ್ನಿಸಿದ್ದ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಧಾರವಾಡ ಹೈಕೋರ್ಟ್‌ನಲ್ಲಿ ಜಯ ಸಿಕ್ಕಿದೆ.
ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಸದಸ್ಯ ಸ್ಥಾನವನ್ನು ಕಳೆದ ವರ್ಷ ಜಿಲ್ಲಾಧಿಕಾರಿಗಳು ಅನರ್ಹ ಮಾಡಿ ಆದೇಶ ನೀಡಿದ್ದನ್ನು ಪ್ರಶ್ನಿಸಿದ್ದ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಧಾರವಾಡ ಹೈಕೋರ್ಟ್‌ನಲ್ಲಿ ಜಯ ಸಿಕ್ಕಿದೆ.
ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಅವರು ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ಇದರಿಂದ ಕಾಂಗ್ರೆಸ್‍ಗೆ ಭಾರಿ ಮುಖಭಂಗವಾಗಿದೆ ಎಂದರು.ಕಳೆದ ವರ್ಷ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಪಂ ಕಾಂಗ್ರೆಸ್ ಸದಸ್ಯ ರವೀಂದ್ರ ಮುದಿಯಪ್ಪನವರ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿ ಸದಸ್ಯರ ಬೆಂಬಲದಿಂದ ಗೆದ್ದು ಅಧ್ಯಕ್ಷರಾಗಿ, ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದನ್ನು ಸಹಿಸದ ಕೆಲ ಮುಖಂಡರು ಷಡ್ಯಂತ್ರ ಮಾಡಿ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿ ಆದೇಶ ಮಾಡಿಸಿದ್ದರು. ಜಿಲ್ಲಾಧಿಕಾರಿಗಳ ನಡೆಯನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಒಂದು ವರ್ಷ ವಾದ-ವಿವಾದಗಳನ್ನು ಆಲಿಸಿ ಕಾಂಗ್ರೆಸ್ ಮುಖಂಡರ ಅರ್ಜಿಯನ್ನು ವಜಾಗೊಳಿಸಿ ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರ ಸದಸ್ಯತ್ವ ಸ್ಥಾನ ಯಥಾಸ್ಥಿತಿ ಮುಂದುವರಿಸುವಂತೆ ಗುರುವಾರ ಆದೇಶ ನೀಡಿದ್ದು ಇದು ಸತ್ಯಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತ ಪಡಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದು ಅನ್ನುವಷ್ಟರಲ್ಲಿ ಅಲ್ಲಿನ ಆಂತರಿಕ ಕಚ್ಚಾಟಕ್ಕೆ ಬೇಸತ್ತು ನಾನು ಹೊರ ಬಂದು ಮತ್ತೆ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅದನ್ನು ಸಹಿಸದವರು ನನ್ನ ಸದಸ್ಯತ್ವ ಅನರ್ಹಗೊಳಿಸಿ ಆದೇಶ ನೀಡಿದ್ದರು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೋರೆ ಹೋದ ಸಂದರ್ಭದಲ್ಲಿ ನನಗೆ ಹಾಗೂ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ ಅವರಿಗೆ ನ್ಯಾಯ ಸಿಕ್ಕಿದ್ದು ಅತ್ಯಂತ ಸಂತಸವಾಗಿದೆ ಎಂದರು.ಕಾಂಗ್ರೆಸ್ಸಿನವರಿಗೆ ಮೊದಲ 10 ತಿಂಗಳ ಅಧ್ಯಕ್ಷ ಸ್ಥಾನ ಕೇಳಿದ್ದೇ ಆದರೆ ನನಗೆ ಅಪಹಾಸ್ಯ ಮಾಡಿದ್ದರಿಂದ ಪಕ್ಷ ಬಿಟ್ಟು ಹೊರಬಂದ ನಂತರ ಬಿಜೆಪಿ ಕೌನ್ಸಿಲರಗಳು ಹಾಗೂ ಮುಖಂಡರು ನನ್ನನ್ನು ಅಧ್ಯಕ್ಷ ಮಾಡಿ ನನಗೆ ಬೆಂಬಲ ನೀಡಿದ್ದರಿಂದ ನಾನು ಅವರಿಗೆ ಆಭಾರಿಯಾಗಿದ್ದೇನೆ ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷಕ್ಕೆ ದುಡಿದು ಸ್ಥಳೀಯ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಶ್ರಮವಹಿಸೋಣ ಎಂದರು.
ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ, ಸದಸ್ಯ ರವಿ ಹದಡೇರ, ಬಸವರಾಜ ಕಟ್ಟಿಮನಿ, ಶ್ರೀದೇವಿ ಬೈರಪ್ಪನವರ, ಲಕ್ಷ್ಮೀ ಚಿಕ್ಕಮೊರಬ, ಮಂಜಮ್ಮ ಅಗಡಿ, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಾಲತೇಶಗೌಡ ಗಂಗೋಳ, ಬಿಜೆಪಿ ಮಂಡಳ ಅಧ್ಯಕ್ಷ ದೇವರಾಜ ನಾಗಣ್ಣನವರ, ಆರ್.ಎನ್. ಗಂಗೋಳ, ಹನಮಂತಪ್ಪ ಗಾಜೇರ, ಶಂಭಣ್ಣ ಗೂಳಪ್ಪನವರ, ಮಾಲತೇಶ ಬೆಳಕೆರಿ, ರವೀಂದ್ರ ಮುದ್ದಣ್ಣನವರ, ನಾಗರಾಜ ದ್ಯಾವಕ್ಕಳವರ, ವೀರನಗೌಡ ಎಡಚಿ, ರಾಜು ಬಟ್ಲಕಟ್ಟಿ, ಸುರೇಶ ನಾಯಕ ಇದ್ದರು.