ಹೆಣ್ಣು ಮಕ್ಕಳಿಗೆ ಮುಟ್ಟಿನ ನೈರ್ಮಲ್ಯ ಜಾಗೃತಿ

| Published : Apr 04 2024, 01:05 AM IST

ಸಾರಾಂಶ

ಕನಕಪುರ: ವ್ಯಾಯಾಮ, ಯೋಗಾಸನ ಮುಟ್ಟಿನ ಸಮಯದಲ್ಲಿ ನಿಮ್ಮನ್ನು ಹೆಚ್ಚು ಸದೃಢಗೊಳಿಸಲು ಸಹಕಾರಿಯಾಗಲಿದೆ ಡಾ. ಬೃಂದಾ ತಿಳಿಸಿದರು.

ಕನಕಪುರ: ವ್ಯಾಯಾಮ, ಯೋಗಾಸನ ಮುಟ್ಟಿನ ಸಮಯದಲ್ಲಿ ನಿಮ್ಮನ್ನು ಹೆಚ್ಚು ಸದೃಢಗೊಳಿಸಲು ಸಹಕಾರಿಯಾಗಲಿದೆ ಡಾ. ಬೃಂದಾ ತಿಳಿಸಿದರು.

ನಗರದ ರೂರಲ್ ಪದವಿ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ವಿದ್ಯಾಸಾಗರ ಸಂಸ್ಥೆಯಿಂದ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದ ನೈರ್ಮಲ್ಯ ಹಾಗೂ ಮುನ್ನೆಚ್ಚರಿಕೆ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಭಯ ಗೊಂದಲಕ್ಕೆ ಒಳಗಾಗದೆ ನೈರ್ಮಲ್ಯದ ಕಡೆ ಗಮನ ಕೊಡುವುದರ ಜೊತೆಗೆ ಮುಂಜಾಗ್ರತಾ ಅಂಶಗಳನ್ನು ಪಾಲಿಸುವುದು ಸೂಕ್ತ. ಆಹಾರ, ಸಮತೋಲನ, ವ್ಯಾಯಾಮ, ಯೋಗಾಸನ ಮುಟ್ಟಿನ ಸಮಯದಲ್ಲಿ ನಿಮ್ಮನ್ನು ಹೆಚ್ಚು ಸದೃಢ ಮಾಡುತ್ತದೆ ಎಂದರು.

ಡಾ.ಸುಷ್ಮಾ ಮಾತನಾಡಿ, ಮುಟ್ಟಿನ ಸಮಯದಲ್ಲಿ ಅತಿಯಾದ ನಿರ್ಲಕ್ಷ್ಯ ತೋರಿ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಹೆಣ್ಣು ಮಕ್ಕಳ ಕುರಿತು ಜಾಗೃತಿ ಮೂಡಿಸಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದ ಕೆಲವು ಗೊಂದಲಗಳು ಹಾಗೂ ಸಮಸ್ಯೆಗಳಿಗೆ ವೈದ್ಯಕೀಯ ಪರಿಹಾರದ ಬಗ್ಗೆ ವಿವರಿಸಿದರು.

ರೂರಲ್ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಈ ರೀತಿಯ ಜಾಗೃತಿ, ಉಪನ್ಯಾಸದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಅವರು ಸ್ವಚ್ಛತೆ ಮತ್ತು ದೇಹ ಸದೃಢತೆ ಬಗ್ಗೆ ಗಮನ ಹರಿಸಲು ಹೆಚ್ಚು ಸಹಾಯಕಾರಿ ಎಂದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರೊ .ದೇವರಾಜು, ಪ್ರೊ.ವಾಣಿ, ಪ್ರೊ.ಜ್ಯೋತಿ, ಪ್ರೊ.ಸುಷ್ಮಾ, ಪ್ರೊ.ನಂದಿನಿ ಸೇರಿದಂತೆ ರೂರಲ್ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.