Mental fortitude is the weapon to fight against cancer.

-ಯಶೋದಾ ಆಸ್ಪತ್ರೆಗಳ ಕ್ಯಾನ್ಸರ್ ತಜ್ಞ ಡಾ. ಅಮಿತ್ ಕೆ. ಜೋಟ್ವಾನಿ ಅಭಿಮತ

--

ಕನ್ನಡಪ್ರಾಭ ವಾರ್ತೆ ಕಲಬುರಗಿ

ಕ್ಯಾನ್ಸರ್ ರೋಗ ಗೆಲ್ಲುವಲ್ಲಿ ವೈದ್ಯಕೀಯ ಚಿಕಿತ್ಸೆಯಷ್ಟೇ ರೋಗಿಯ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹಾಗೂ ಕುಟುಂಬದವರ ಬೆಂಬಲವೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಿಕಂದರಾಬಾದ್‍ನ ಯಶೋದಾ ಆಸ್ಪತ್ರೆಗಳ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಅಮಿತ್ ಕೆ. ಜೋಟ್ವಾನಿ ಹೇಳಿದರು.

ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಹಚ್ಚುವ ಮಹತ್ವ ಹಾಗೂ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಅಗತ್ಯದ ಕುರಿತು ಅವರು ನಗರದ ಯಶೋಧ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯಶೋದಾ ಆಸ್ಪತ್ರೆಯ ವಿಕಿರಣ ಆಂಕಾಲಜಿ ವಿಭಾಗದಲ್ಲಿ ಅತ್ಯಾಧುನಿಕ ''''''''ಹೈಪರ್‍ಸೈಟ್'''''''' ತಂತ್ರಜ್ಞಾನ ಪರಿಚಯಿಸಲಾಗಿದೆ. ಈ ತಂತ್ರಜ್ಞಾನವು ಭಾರತದಲ್ಲಿ ಮೊದಲ ಬಾರಿಗೆ ಲಭ್ಯವಾಗಿದ್ದು, ಪ್ರಸ್ತುತ ಸಿಕಂದರಾಬಾದ್‍ನ ಯಶೋದಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಈ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಹೈಪರ್‍ಸೈಟ್ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ಕೋಶಗಳಿರುವ ನಿಖರ ಸ್ಥಳವನ್ನು ಗುರುತಿಸಿ, ಆ ಭಾಗಕ್ಕೆ ಮಾತ್ರ ವಿಕಿರಣ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗುವ ಅಪಾಯ ಕಡಿಮೆ ಮಾಡುವುದರ ಜತೆಗೆ, ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮ ಗಣನೀಯ ತಗ್ಗಿಸಲು ಸಾಧ್ಯ ಎಂದರು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈಗಾಗಲೇ ಅನೇಕ ಕ್ಯಾನ್ಸರ್ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಶವರಾವ್ ಕುಲಕರ್ಣಿ ಹಾಗೂ ಸತೀಶ್ ಸಿ.ಎಚ್ ಇದ್ದರು.