ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್) ಆಸ್ಪತ್ರೆಯಿಂದ ತಾಲೂಕಿನ ಶಕ್ತಿನಗರದ ಹಸಿರು ಸೌಧ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒತ್ತಡ ನಿರ್ವಹಣೆ ಮತ್ತು ವ್ಯಸನ ವಿಮೋಚನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ರಾಯಚೂರು
ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್) ಆಸ್ಪತ್ರೆಯಿಂದ ತಾಲೂಕಿನ ಶಕ್ತಿನಗರದ ಹಸಿರು ಸೌಧ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒತ್ತಡ ನಿರ್ವಹಣೆ ಮತ್ತು ವ್ಯಸನ ವಿಮೋಚನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ಆರ್ಟಿಪಿಎಸ್ನ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕ ಯತಿರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗಿಗಳು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು, ವೈಯಕ್ತಿಕ ಶಿಸ್ತು ಪಾಲನೆ, ಸಮಯಪ್ರಜ್ಞೆ, ವೃತ್ತಿಪರತೆ ಪಾಲನೆ ಮಾಡಬೇಕು ,ವೃತ್ತಿಯ ಜೊತೆಗೆ ಪ್ರವೃತ್ತಿಯ ಪಾಲನೆ ಮಾಡಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಮಾನಸಿಕ ತಜ್ಞ ಡಾ.ಮನೋಹರ್ ವೈ. ಪತ್ತಾರ ಅವರು, ಕೆಲಸದ ಒತ್ತಡ ಎಲ್ಲರಿಗೂ ಇರುತ್ತದೆ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತರಾಗಬೇಕೆಂದರು. ಮಾನಸಿಕ ಒತ್ತಡದ ಲಕ್ಷಣಗಳು ಮತ್ತು ಅದನ್ನು ಗುರುತಿಸುವುದು ಹೇಗೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವೈಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣರಾಜ್ ಕೆ ಕೆ, ಮುಖ್ಯ ಅಭಿಯಂತರರಾದ ಜಯಲಲಿತಾ, ಅಜಯ್ ಟಿ.ಪಿ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಪ್ರೇಮಲತಾ, ಡಾ.ರಮೇಶ್, ಮಾನವ ಸಂಪನ್ಮೂಲ ಉಪಪ್ರದಾನ ಪ್ರಬಂಧಕ ಚನ್ನಬಸ್ಮಮ್ಮ, ಕಾರ್ಮಿಕ ಮುಖಂಡರಾದ ಗುರುರಾಜ್ ಅಂಬಿಗೇರ, ಭೀಮಯ್ಯ ನಾಯಕ, ಗೌತಮ್ ಕಟ್ಟಿಮನಿ, ನರಸಪ್ಪ ಭೂತಪಲ್ಲಿ, ರಘುನಾಥ್ ರೆಡ್ಡಿ, ರಾಮಪ್ಪ, ಸುರಕ್ಷತಾ ವಿಭಾಗದ ನಾಗರಾಜು , ಮಹಿಳಾ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು. ಡಾ.ಮಲ್ಲಿಕಾರ್ಜುನಯ್ಯ ನಿರೂಪಿಸಿದರು.