ಸಾರಾಂಶ
ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮನುಷ್ಯ ಹಾಗೂ ಸಮಾಜ ಕೂಡ ಸದೃಡವಾಗಲಿದೆ. ಮನಸ್ಸಿನ ಆರೋಗ್ಯ ವೃದ್ದಿಗೆ ಯೋಗ, ವ್ಯಾಯಾಮ,ಸಂಗೀತದ ಕಡೆ ಆಸಕ್ತಿ ಇರಲಿ ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ದೈಹಿಕ ಆರೋಗ್ಯ ಮನುಷ್ಯನಿಗೆ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ ಎಂದು ತಾಲೂಕು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳೂ ಆದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ದೀಪು ಎಂ.ಟಿ. ಹೇಳಿದರು.ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜು, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮನುಷ್ಯ ಹಾಗೂ ಸಮಾಜ ಕೂಡ ಸದೃಡವಾಗಲಿದೆ. ಮನಸ್ಸಿನ ಆರೋಗ್ಯ ವೃದ್ದಿಗೆ ಯೋಗ, ವ್ಯಾಯಾಮ,ಸಂಗೀತದ ಕಡೆ ಆಸಕ್ತಿ ಇರಲಿ ಎಂದು ಸಲಹೆ ನೀಡಿದರು. ಆರ್ಥಿಕ ಹಾಗೂ ಹಿಂದುಳಿದ ನಾಗರೀಕರು ಕಾನೂನು ಸೇವೆ ಉಚಿತವಾಗಿ ಪಡೆದುಕೊಳ್ಳಲು ಅವಕಾಶವಿದೆ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಫಿಜಿಶಿಯನ್ ಡಾ.ತ್ರಿವೇಣಿ ಮಾತನಾಡಿ, ಮಾನಸಿಕ ಕಾಯಿಲಗೆ ಜಾಗೃತಿ ಮೂಡಿಸಬೇಕು. ಮಾನಸಿಕ ಆರೋಗ್ಯ ಹದಗೆಟ್ಟವರಿಗೆ ಕೌನ್ಸಲಿಂಗ್ ಹಾಗು ಚಿಕಿತ್ಸೆ ಕೊಡಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ವಕೀಲ ಬಂಗಾರನಾಯಕ ಸೇರಿದಂತೆ ವಿದ್ಯಾರ್ಥಿಗಳಿದ್ದರು.10ಜಿಪಿಟಿ೪4
ಗುಂಡ್ಲುಪೇಟೆ ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾನಸಿಕ ದಿನಾಚರಣೆಯನ್ನು ನ್ಯಾಯಾಧೀಶ ದೀಪು ಎಂ.ಟಿ ಉದ್ಘಾಟಿಸಿದರು.