ಸಾರಾಂಶ
ವಿಶ್ವಭ್ರಾತೃತ್ವದ ಅಂಶ ಹೊಂದಿರುವ ಶರಣರ ವಚನಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಶರಣರು ಕಂಡುಂಡ ಸತ್ಯವನ್ನೇ ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಡೇಕಲ್
ಜಾತಿ, ಅಧಿಕಾರ, ಅಂಧಶ್ರದ್ಧೆಯಿಂದಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ವಿಶ್ವಭ್ರಾತೃತ್ವದ ಅಂಶ ಹೊಂದಿರುವ ಶರಣರ ವಚನಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಶರಣರು ಕಂಡುಂಡ ಸತ್ಯವನ್ನೇ ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಮಕ್ಕಳಿಗೆ ಶರಣರ ಚಿಂತನೆಗಳ ಮೂಲಕ ಉತ್ತಮ ಸಂಸ್ಕಾರ ನೀಡುವಂತೆ ಸಲಹೆ ನೀಡಬೇಕಿದೆ ಎಂದು ಶರಣೆ ಗಿರಿಜಮ್ಮ ತಾಯಿ ಹೇಳಿದರು.ಕೊಡೇಕಲ್ ಗ್ರಾಮದ ಶರಣ ಜೀವಿ ಬಸವರಾಜ ತೋಟಗೇರ ಅವರ ಮನೆಯಲ್ಲಿ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತರು ಮಠ-ಮಂದಿರಗಳಿಗೆ ಭೇಟಿ ನೀಡುವುದು ಕೇವಲ ಪ್ರಚಾರಕ್ಕೆ ಸಿಮೀತವಾಗಬಾರದು. ಮನಸ್ಸಿನಲ್ಲಿ ಭಕ್ತಿ, ಭಾವ ಇಲ್ಲದೆ ಹೋದರೆ ದೇವರ ಕೃಪೆ ದೊರೆಯದು. ಕೆಲ ಭಕ್ತರು ತಮಗೆ ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಣೆ ಮಾಡುತ್ತಾರೆ. ಆದರೆ, ಮನಸ್ಸಿನಲ್ಲಿ ನಿಷ್ಕಲ್ಮಶ ಭಕ್ತಿ ಇಲ್ಲದೆ ಏನೇ ಮಾಡಿದರೂ ಅದು ವ್ಯರ್ಥ ಎಂದರು.ಪ್ರಭುಸ್ವಾಮಿ ಕೊಡೇಕಲ್ ಮಠ ನೇತೃತ್ವ ವಹಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಗಮನ ಸೆಳೆದರು.
ಬಸಣ್ಣ ಗೋಡ್ರಿ, ಮಲ್ಲನಗೌಡ ಜೇವರಗಿ, ಶಾಂತಗೌಡ ರಾಮನಗೌಡ, ಬಸವರಾಜ ತೊಟಗೇರ, ಬಸವರಾಜ ಅಂಗಡಿ, ಸಂಗಪ್ಪ ಪಡಶೆಟ್ಟಿ, ಸಿದ್ದಣ್ಣ ಶಿಂಧೆ, ಮಲ್ಲಿಕಾರ್ಜುನ ತೋಟಗೇರ, ಪಾರ್ವತಿ ಮಸ್ಕಾನಾಳ, ಮಹಾದೇವಿ, ನೀಲಮ್ಮ, ಸೇರಿದಂತೆ ಇತರರಿದ್ದರು. ಸೋಮಶೇಖರ ಪಂಜಗಲ್ ನಿರೂಪಿಸಿದರು. ರವಿ ಅಡ್ಡಿ ವಂದಿಸಿದರು.