ಸಾರಾಂಶ
ಗದಗ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಸಹಕಾರಿ ಬ್ಯಾಂಕ್ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ದಿ.ಮರ್ಚಂಟ್ಸ್ ಅರ್ಬನ್ ಕೋ-ಆ ಬ್ಯಾಂಕ್‌ನ ಪ್ರಥಮ ಶಾಖೆ ತೆರೆಯುವ ಮೂಲಕ ತನ್ನ ಸೇವೆ ವಿಸ್ತರಿಸಿಕೊಂಡಿರುವ ಅಭಿನಂದನೀಯ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ನಗರದ ನಡವಲಗುಡ್ಡ ಕಾಂಪ್ಲೇಕ್ಸ್‌ನಲ್ಲಿ ಗದುಗಿನ ದಿ. ಮರ್ಚಂಟ್ಸ್ ಅರ್ಬನ್ ಕೋ-ಆ ಬ್ಯಾಂಕ್‌ನ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭ,ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಹಾಗೂ ಗ್ರಾಹಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬ್ಯಾಂಕ್‌ಗಳಲ್ಲಿ ಯಾವ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿದೆಯೋ ಅದು ಸದ್ವಿನಿಯೋಗ ಆಗಬೇಕು ಇಲ್ಲವಾದರೆ ಸಾಲ ಮರುಪಾವತಿ ಮಾಡಲು ಬಹಳಷ್ಟು ಕಷ್ಟವಾಗುವದು. ಸಾಲ ಪಡೆದವರು, ಸಾಲಕ್ಕೆ ಜಾಮೀನು ಆದವರು ಸಾಲ ಸರಿಯಾಗಿ ಮರುಪಾವತಿಸಲು ಬದ್ಧರಾಗಿರಬೇಕು ಎಂದರು.
ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಮಾತನಾಡಿ, ಬ್ಯಾಂಕ್ ಅಧ್ಯಕ್ಷರು,ಉಪಾಧ್ಯಕ್ಷರು ಸೇರಿದಂತೆ ಎಲ್ಲ ನಿರ್ದೇಶಕರು ಅನುಭವಿಕರೂ ಹಾಗೂ ಬ್ಯಾಂಕಿಂಗ್, ಲೆಕ್ಕಪತ್ರ ಕ್ಷೇತ್ರದಲ್ಲಿ ಅಪಾರ ಅನುಭವಿಗಳಾಗಿರುವದು ಬ್ಯಾಂಕ್‌ನ ಪ್ರಗತಿ, ಭದ್ರತೆಗೆ, ಉತ್ತಮ ಸೇವೆಗೆ ಕಾರಣವಾಗಿದೆ, ಹೀಗಾಗಿ ಈ ಬ್ಯಾಂಕ್ ಎಲ್ಲ ಗ್ರಾಹಕರ ಮೆಚ್ಚುಗೆ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.ಹಿರಿಯ ಸದಸ್ಯ ಸಿದ್ರಾಮಪ್ಪ ಭೂಸದ ಮಾತನಾಡಿ, ಬ್ಯಾಂಕ್‌ನ ಪ್ರಪ್ರಥಮ ಖಾತೆದಾರ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಅಂದಿನಿಂದ ಇಂದಿನವರೆಗೆ ಕಳೆದ 70 ವರ್ಷಗಳಿಂದಲೂ ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿರುವ ನನಗೆ ಇಂದು ಹೊಸ ವರ್ಷದ ದಿನದರ್ಶಿಕೆ ನನ್ನಿಂದ ಬಿಡುಗಡೆ ಮಾಡಿಸಿದ್ದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದರು.
ಈ ವೇಳೆ ಬ್ಯಾಂಕ್‌ನ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಹಾಗೂ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಕೆ.ಎಸ್.ಚೆಟ್ಟಿ ಮಾತನಾಡಿದರು.ಶಿವಾನಂದ ಬೃಹನ್ಮಠದ ಜ.ಅಭಿನವ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಸಣ್ಣ ವ್ಯಾಪಾರಸ್ಥರಾದ ರೇಖಾ ಪವಾರ, ಪುಷ್ಪಾವತಿ ಹರ್ಲಾಪೂರ, ಪರಪ್ಪ ಬುದ್ದಾಪೂರ, ವಿಜಯಲಕ್ಷ್ಮೀ ಭದ್ರಾಪೂರಮಠ ಅವರಿಗೆ ಸಾಲ ವಿತರಣೆ ಪತ್ರ ವಿತರಿಸಲಾಯಿತು.ಹಿರಿಯ ಗ್ರಾಹಕ ದೇವಪ್ಪ ನಡವಲಗುಡ್ಡ, ಮಹೇಶಚಂದ್ರ ಕಬಾಡರ, ಎಫ್.ಸಿ. ಹಿರೇಮಠ, ರಾಹುಲ್ ಮುನವಳ್ಳಿ, ಅಕ್ಕಮಹಾದೇವಿ ಸವಡಿ, ಚಿನ್ನಪ್ಪ ಜಕಾತಿ, ಚನ್ನಬಸಪ್ಪ ಕಾರದಕಟ್ಟಿ,ತುಕಾರಾಮಸಿಂಗ್ ಜಮಾದಾರ, ವೀರನಗೌಡ ಪೊಲೀಸ್‌ಪಾಟೀಲ, ದೀಪಕ ನಗರೇಶಿ, ರುಕ್ಮಿಣಿ ಸಾವಕಾರ, ಶರಣಪ್ಪ ಅಕ್ಕಿ, ಜಯರಾಜ ಮುಳಗುಂದ ಅವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್ ನಿರ್ದೇಶಕ ಸಚಿನ್ ಪಟ್ಟಣಶೆಟ್ಟಿ, ಅಶೋಕ ಹಂಜಗಿ, ಶಾಂತೇಶ ಅರಮನಿ, ಶಾಂತಾ ಹಲವಾಗಲಿ, ಶಿವಕುಮಾರ ಭೂಸನೂರಮಠ, ಸುನೀತಾ ತಡಸ, ಮಹೇಶ್ವರಪ್ಪ ಕಂಪಗೌಡ್ರ, ಶರಣಪ್ಪ ಗಡಾದ, ಲಿಂಗರಾಜ ತೋಟದ, ಈರಣ್ಣ ಮುದಗಲ್ಲ, ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಾಯಕವಾಡಿ, ವ್ಯವಸ್ಥಾಪಕಿ ಶೈಲಜಾ ಹೊಸಂಗಡಿ, ಶಾಖಾಧಿಕಾರಿ ವಿಜಯಕಾಂತ ನರಗುಂದ ಸೇರಿದಂತೆ ಸಿಬ್ಬಂದಿ ಇದ್ದರು. ಮುತ್ತು ನಾಯ್ಕರ ಪ್ರಾರ್ಥಿಸಿದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು. ಎಲ್.ಬಿ.ತೋಟದ ವಂದಿಸಿದರು.