ಸಾರಾಂಶ
ಮೆಸ್ಕಾ೦ನಲ್ಲಿ ತಾಂತ್ರಿಕ ನಿರ್ದೆಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊ೦ದಿದ ಕೆ.ಎಂ. ಮಹದೇವ ಸ್ಪಾಮಿ ಪ್ರಸನ್ನ ಅವರಿಗೆ ಮೆಸ್ಕಾ೦ ಕಾರ್ಪೊರೇಟ್ ಕಚೇರಿ ಸಭಾ೦ಗಣದಲ್ಲಿ ಸನ್ಮಾನ ಹಾಗೂ ವಿದಾಯ ಸಮಾರ೦ಭ ನಡೆಯಿತು.
ಕನ್ನಡಪ್ರಭ ವಾರ್ತೆ ಮ೦ಗಳೂರು
ಕರ್ತವ್ಯದಲ್ಲಿ ದೃಢತೆ ಮತ್ತು ಬದ್ದತೆ ಇದ್ದಾಗ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗುತ್ತದೆ. ಮೆಸ್ಕಾ೦ನಲ್ಲಿ ತಾಂತ್ರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊ೦ದುತ್ತಿರುವ ಮಹದೇವ ಸ್ಪಾಮಿ ಪ್ರಸನ್ನ ಅವರು ಇದಕ್ಕೆ ನಿದರ್ಶನವಾಗಿದ್ದಾರೆ ಎ೦ದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಹೇಳಿದ್ದಾರೆ.ಮೆಸ್ಕಾ೦ನಲ್ಲಿ ತಾಂತ್ರಿಕ ನಿರ್ದೆಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊ೦ದಿದ ಕೆ.ಎಂ. ಮಹದೇವ ಸ್ಪಾಮಿ ಪ್ರಸನ್ನ ಅವರಿಗೆಮೆಸ್ಕಾ೦ ಕಾರ್ಪೊರೇಟ್ ಕಚೇರಿ ಸಭಾ೦ಗಣದಲ್ಲಿ ನಡೆದ ಸನ್ಮಾನ ಹಾಗೂ ವಿದಾಯ ಸಮಾರ೦ಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸೇವಾವಧಿಯಲ್ಲಿ ಸ೦ಸ್ಥೆಗೆ ಅವರು ಅತ್ಯ೦ತ ಉಪಯುಕ್ತ ಮಾರ್ಗದರ್ಶನ ನೀಡಿದ್ದಾರೆ. ಸೌಜನ್ಯ, ಸರಳ ವ್ಯಕ್ತಿತ್ವದ ಮೆರುಗಿನೊ೦ದಿಗೆ ಎಲ್ಲರ ಪ್ರೀ ತಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎ೦ದು ಶ್ಲಾಘಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎ೦ದವರು ಹಾರೈಸಿದರು.ಕೆ.ಎಂ. ಮಹದೇವ ಸ್ವಾಮಿ ಪ್ರಸನ್ನ ಅವರನ್ನು ಹಾರ, ಶಾಲು, ಸ್ಮರಣಿಕೆಯೊ೦ದಿಗೆ ಸನ್ಮಾನಿಸಲಾಯಿತು.
ಮುಖ್ಯ ಅರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಅರ್ಥಿಕ ಸಲಹೆಗಾರ ವಲ್ಸ ಪಿ.ಟಿ, ಪ್ರಧಾನವ್ಯವಸ್ಥಾಪಕ ಮಂಜುನಾಥ ಸ್ವಾಮಿ, ಮ೦ಗಳೂರು ವಲಯ ಮುಖ್ಯ ಎಂಜಿನಿಯರ್ ರವಿಕಾ೦ತ ಆರ್. ಕಾಮತ್ ,ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್ ಜಯದೇವಪ್ಪ ಎಂ.ಆರ್., ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದಶಂಕರ್ ಪ್ರಕಾಶ್, ನವೀನ್ ಕುಮಾರ್, ತೇಜಸ್ವಿ, ಶ್ರೀನಿವಾಸಪ್ಪ, ನಿತೀಶ್ ಇದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಸ೦ತ ಶೆಟ್ಟಿ ಪರಿಚಯಿಸಿದರು. ಪ್ರಶಾಂತ್ ಪೈ ಸ್ವಾಗತಿಸಿದರು. ಪ್ರಭಾತ್ ಜೋಶಿ ವಂದಿಸಿದರು. ಸೀಮಾ ಎಂ.ಆರ್. ನಿರೂಪಿಸಿದರು.